spot_img
spot_img

ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಶಿಕ್ಷಕರ ಆಸ್ತಿ – ಮಡಿವಾಳರ

Must Read

- Advertisement -

ಸಿಂದಗಿ: ಜ್ಞಾನ ಸಂಪಾದನೆಗೆ ಬಡತನ ಸಿರಿತನ ಅಡ್ಡಿ ಬರಲಾರದು. ಅಮೇರಿಕಾ ದೇಶ ಭಾರತೀಯರಿಂದಲೇ ಉನ್ನತ ಸ್ಥಾನದಲ್ಲಿದೆ ಆದರೆ ಭಾರತೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುತ್ತಿಲ್ಲವೇಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ನಿವೃತ್ತ ಉಪನ್ಯಾಸಕ ಪಿ.ಎಮ್ ಮಡಿವಾಳರ್ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಎಬಿಸಿಡಿ ನೃತ್ಯ ತರಬೇತಿ ಕೇಂದ್ರದಲ್ಲಿ ಕಸಾಪ ತಾಲೂಕು ಘಟಕದಿಂದ 2020-21ನೇ ಸಾಲಿನ ಪಿಯುಸಿ ಪಲಿತಾಂಶದಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಶಿಕ್ಷಕರಿಗೆ ಸರಕಾರ ವೇತನ ನೀಡದಿದ್ದರು ಕೂಡಾ ಅವರಿಗೆ ಆಸ್ತಿ ಮಾಡುವುದು ಮುಖ್ಯವಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ತಯಾರಾದಾಗ ಅವರೇ ದೊಡ್ಡ ಆಸ್ತಿ ಕಾರಣ ವಿದ್ಯಾರ್ಥಿಗಳಾದವರು ಅಧ್ಯಯನ, ಮನನ, ಜ್ಞಾನ ಇವುಗಳನ್ನು ಮರೆಯಬಾರದು. ನಮ್ಮ ದೇಶದಲ್ಲಿ ಸಾಕಷ್ಟು ಜನ ಅತ್ಯಂತ ಬುದ್ದಿಶಾಲಿಗಳಿದ್ದಾರೆ. ಅವರನ್ನೆಲ್ಲ ಇತರ ದೇಶಗಳು ಬಳಕೆ ಮಾಡುತ್ತಿವೆ. ಇನ್ನು ಮುಂದೆ ನೀವೆಲ್ಲ ನಮ್ಮ ದೇಶದ ಪ್ರಗತಿಗಾಗಿ ದುಡಿಯಬೇಕು ಎಂದರು.

ದೈಹಿಕ ಶಿಕ್ಷಕ ಎಸ್.ಎಸ್.ಹಚಡದ ಮಾತನಾಡಿ, ಪ್ರತಿಯೊಂದು ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಕಸಾಪ ನಿರಂತರವಾಗಿ ಮಾಡುತ್ತಿದೆ. ಇಂದು ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಾವು ಬರುವ ಮುನ್ನ ಏನನ್ನಾದರೂ ಸಾಧಿಸಬೇಕು ಆ ನಿಟ್ಟಿನಲ್ಲಿ ನೀವೆಲ್ಲರೂ ಪ್ರಯತ್ನಿಸಿ ಮುಂದೆ ತಾಲೂಕಿನ ಹೆಸರನ್ನು ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಶಕ್ತಿ ದೊರಕಲಿ ಎಂದು ಶುಭ ನುಡಿದರು.

- Advertisement -

ಕಲ್ಪವೃಕ್ಷ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಚ್ ಧೂಳಬಾ ಮಾತನಾಡಿ, ಕೋವಿಡ್ ಸಂಕಷ್ಟದ ಮಧ್ಯದಲ್ಲಿಯೂ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡಿದ್ದಾರೆ. ಅವರನ್ನು ಸನ್ಮಾನಿಸಿ ಗೌರವಿಸಿ ಇನ್ನಷ್ಟು ಸಾಧನೆ ಮಾಡುವಂತೆ ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ. ಸಾಧಕರಿಗೆಲ್ಲ ಅಭಿನಂಧನೆಗಳು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಸಿದ್ಧಲಿಂಗ ಬ ಚೌಧರಿ ಅವರು ಮಾತನಾಡಿ, ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ವಿದ್ಯಾರ್ಥಿಗಳು ಇದೊಂದು ಮಾತನ್ನು ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಜಗತ್ತು ಮೊದಲು ಅವಮಾನಿಸುತ್ತದೆ, ನಂತರ ಅನುಮಾನಿಸುತ್ತದೆ, ನಂತರ ಸನ್ಮಾನಿಸುತ್ತದೆ. ಅಲ್ಲಿವರೆಗೂ ನೀವು ನಿಮ್ಮ ಗುರಿ, ಪ್ರಯತ್ನ ಬಿಡಬಾರದು. ಪಿಯುಸಿ ಪಲಿತಾಂಶದಲ್ಲಿ ನೀವು ಮಾಡಿದ ಸಾಧನೆ, ನಾಳೆ ನಿಮ್ಮ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದು ಹೇಳಿದ ಅವರು ಜೀವನದಲ್ಲಿ ನೀವು ಏನಾನ್ನಾದರೂ ಸಾಧಿಸಿ, ಎಷ್ಟಾದರೂ ಸಂಪಾಧಿಸಿ, ಸಮಾಜಕ್ಕಾಗಿ ಏನಾದರರೂ ಕೊಡುಗೇ ನೀಡದಿದ್ದರೆ ನಿಮ್ಮನ್ನು ಯಾರೂ ಗೌರವಿಸುವುದಿಲ್ಲ. ಬೀಗುವುದು ಸದ್ಗುಣವಲ್ಲ, ಬಾಗುವುದು ಸದ್ಗುಣ. ನಿಮ್ಮ ಮುಂದಿನ ಜೀವನ ಸಮಾಜಮುಖಿಯಾಗಿ, ಆದರ್ಶವಾಗಿ ಬೆಳಗಲೆಂದು ಶುಭ ಹಾರೈಸುತ್ತೇನೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಇದು ಒಂದು ಸ್ಪೂರ್ತಿದಾಯಕ ಕಾರ್ಯಕ್ರಮ. ಇದರಲ್ಲಿ ವಿದ್ಯಾರ್ಥಿಗಳ, ಪಾಲಕರ ಹಾಗೂ ಶಿಕ್ಷಕರ ಧನ್ಯತೆ ಹಾಗೂ ಸಾರ್ಥಕಭಾವ ಅಡಗಿದೆ. ನೀವೆಲ್ಲ ಮಹಾನ್ ಸಾಧಕರಾಗಿ ಸಮಾಜಕ್ಕಾಗಿ ದುಡಿಯುತ್ತೀರಿ ಎನ್ನುವ ನಂಬಿಕೆ ನಮಗಿದೆ ಎಂದರು. ಎಲೈಟ್ ಸಂಸ್ಥೆಯ ಮುಖ್ಯಸ್ಥ ಎಂ ಎಂ ಅಸಂತಾಪೂರ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಸಾಧನೆಯಿಂದ ನಮ್ಮ ಸಂಸ್ಥೆಯ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದರು.

- Advertisement -

ಈ ಸಂದರ್ಭದಲ್ಲಿ 600 ಕ್ಕೆ 600 ಅಂಕಗಳನ್ನು ಪಡೆದ ಎಲೈಟ್ ಕಾಲೇಜಿನ ವಿದ್ಯಾರ್ಥಿನಿ ಕು.ಶೃತಿ ಮಸಿಬಿನಾಳ, ಕು.ಲಕ್ಷ್ಮೀ ಬಿರಾದಾರ, ಹಾಗೂ 97% ಅಂಕಗಳನ್ನು ಪಡೆದ ಜ್ಞಾನ ಭಾರತಿ ಕಾಲೇಜಿನ ಸಾಹೇಬಗೌಡ ಬಿರಾದಾರ 99.83% ಅಂಕ ಗಳಿಸಿದ ಕು.ಅಕ್ಷತಾ ಶ ತಳವಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಂಡಿತ್ ಯಂಪೂರೆ, ಸಾಯಬಣ್ಣ ದೇವರಮನಿ, ಅಜಯ ಯಲಗಟ್ಟಿ, ಮುತ್ತುರಾಜ ಬ್ಯಾಕೊಡ್, ಜ್ಞಾನೇಶ್ ಗೊರವ, ಕಸಾಪ ಪಧಾದಿಕಾರಿಗಳು, ಹಾಗೂ ಪಾಲಕರು ಇದ್ದರು.

ಶಿಕ್ಷಕ ಅಶೋಕ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಅಗಸರ ನಿರೂಪಿಸಿದರು. ಮಾಂತೇಶ ನೂಲಾನವರ ವಂದಿಸಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group