- Advertisement -
ಬೀದರ – ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಕಚೇರಿಯ ಮುಂದೆ ಸಿನಿಮೀಯ ಮಾದರಿಯಲ್ಲಿ ಹಣ ದರೋಡೆ ನಡೆದಿದ್ದು ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಸಿಎಂಸಿ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ.
ಹಾಡುಹಗಲೇ ಕ್ಷಣಾರ್ಧದಲ್ಲಿ ನಡೆದ ಈ ಹಗಲುದರೋಡೆಯಲ್ಲಿ ಸಿಎಂಸಿ ವಾಹನದಲ್ಲಿ ತರಲಾಗಿದ್ದ ೯೫ ಲಕ್ಷ ಹಣವನ್ನು ಎಗರಿಸಿ ದರೋಡೆಕೋರರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ಅಡಿಷನಲ್ ಎಸ್ ಪಿ ಚಂದ್ರಕಾಂತ ಪೂಜಾರಿ ಭೇಟಿ ನೀಡಿ, ಸಿಸಿ ಟಿವಿ ಸೇರಿದಂತೆ ಹಲವು ರೀತಿಯ ಪರಿಶೀಲನೆ ನಡೆಸಿದ್ದಾರೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ