- Advertisement -
ನಿನ್ನ ಮುನಿಸಿಗೆ….
ಅರಳಿದ ಅಚ್ಚ ಮಲ್ಲಿಗೆ ಕೆಂಪಾದವು ನಿನ್ನ ಮುನಿಸಿಗೆ
ಮರಳಿದ ಸವಿ ನೆನಪುಗಳು ಮಂಕಾದವು ನಿನ್ನ ಮುನಿಸಿಗೆ
- Advertisement -
ಮೌನದರಮನೆಯ ತುಂಬ ದೀಪ ಕನ್ಯೆಯರ ಕಲಕಲ
ಬೆಳಕಿನ ಕುಡಿಗಳು ಹೊಯ್ದಾಡಿದವು ನಿನ್ನ ಮುನಿಸಿಗೆ
ಎದೆಯ ಹೂ ತೋಟದಲ್ಲಿ ನಿನ್ನ ಪ್ರೀತಿ ಸ್ನೇಹದ ಕಲರವ
ಅಲರುಣಿಗಳು ಆಲಾಪಿಸದೆ ಮೂಕವಾದವು ನಿನ್ನ ಮುನಿಸಿಗೆ
ಮನದ ಭಿತ್ತಿಯಲಿ ಬಿತ್ತಿ ಬೆಳೆದ ಭಾವಗಳ ಓಲಾಟ
ಜೀವ ಮುದುಡಿ ಮಾತು ಹಿಡಿಯಾದವು ನಿನ್ನ ಮುನಿಸಿಗೆ
- Advertisement -
ಪ್ರೀತಿಯಲಿ ಕರೆದು ಹತ್ತಿರ ದೂರ ತಳ್ಳುವ ದೊರೆಯೇ
ಇಂದುವಿನ ಕನಸು ಎದೆ ಕಂಬನಿಯಾದವು ನಿನ್ನ ಮುನಿಸಿಗೆ
ಇಂದಿರಾ ಮೋಟೆಬೆನ್ನೂರ, ಬೆಳಗಾವಿ.