spot_img
spot_img

ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡಿ – ಮನಗೂಳಿ

Must Read

- Advertisement -

ಸಿಂದಗಿ: ಬಾಲ್ಯದಲ್ಲಿ ಉತ್ತಮ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಶಿಕ್ಷಣದ  ಮಹತ್ವವನ್ನು ಪೋಷಕರು  ತಮ್ಮ ಮಕ್ಕಳಿಗೆ ನೀಡುವುದು ಮತ್ತು ಅವರನ್ನು ನೆಲೆಗೊಳಿಸುವುದು ಎಂದಿಗಿಂತಲೂ  ಇಂದು ಮುಖ್ಯವಾಗಿದೆ ಎಂದು

ಸಿ.ಎಮ್.ಮನಗೂಳಿ ಪದವಿ ಮಹಾವಿದ್ಯಾಲಯ ಹಿರಿಯ ಪ್ರಾಧ್ಯಾಪಕ ಡಾ.ಅರವಿಂದ ಮ. ಮನಗೂಳಿ ಅವರು ಹೇಳಿದರು.

ನಗರದ ಸರಕಾರಿ ಪದವಿ – ಪೂರ್ವ ಕಾಲೇಜ ಮಹಾವಿದ್ಯಾಲಯದ ಸಭಾಭವನದಲ್ಲಿ ದ್ವಿತೀಯ ಪಿ .ಯು.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಮತ್ತು ದಾನಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸ್ವಯಂ-ಶಿಸ್ತು, ಉತ್ತಮ ಸಂಸ್ಕಾರಗಳು ಒಬ್ಬರ ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ. ಕೆಲವು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಆದರ್ಶ ವಿದ್ಯಾರ್ಥಿಗಳು ಸಮಾಜದಲ್ಲಿ ಆಗಬೇಕು ಎಂದರು.

- Advertisement -

ನಗರದ ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ಪ.ಪೂ ಶ್ರೀ ರಾಜಯೋಗಿ ವಿರಾಜೇಂದ್ರ ಶಿವಯೋಗಿಗಳು ದಿವ್ಯ ಸಾನ್ನಿಧ್ಯವಹಿಸಿ, ವಿದ್ಯಾರ್ಥಿಗಳು ಬಾಲ್ಯದಲ್ಲಿ ಅಳವಡಿಸಿ ಕೊಂಡ ಸಂಸ್ಕಾರ ವಿದ್ಯೆ ಜೀವನದುದ್ದಕ್ಕೂ ಶ್ರೀಮಂತ ಪ್ರತಿ ಫಲವನ್ನು ನೀಡುತ್ತದೆ ಎಂದು ಶುಭ ನುಡಿದರು.

ಸಮಾರಂಭದಲ್ಲಿ ಮಾಜಿ ಪುರಸಭೆ ಸದಸ್ಯ ಹಾಗೂ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ರಾಜಶೇಖರ ಕುಚಬಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಜ್ಞಾನ ಉತ್ತಮ ಕೌಶಲ್ಯ ಮಾನವೀಯ ಮೌಲ್ಯಗಳು ಆದರ್ಶ ನಂಬಿಕೆ ಶಿಕ್ಷಕರು ಬೆಳೆಸಬೇಕು ಎಂದರು.

ಮಾಗಣಗೇರಿಯ ಶ್ರೀಶೈಲಗೌಡ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಓದುವದು ಜೀವನದಲ್ಲಿ ರೂಡಿಸಿ ಕೊಂಡು ತಂದೆ ತಾಯಿಯ ಹೆಸರು ತರುವಂಥ ಸಮಾಜದಲ್ಲಿ ಉತ್ತಮ ಮಗು ಆಗಬೇಕು ಎಂದರು.

- Advertisement -

ಕಾಲೇಜ ಪ್ರಾಚಾರ್ಯರಾದ ಎನ್.ಆರ್.ಗಂಗನಹಳ್ಳಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪದವಿ ಅಂಕ ಮತ್ತು ಶಿಕ್ಷಣ ಪಡೆದರೂ ಇಂದು ಸಾಲದು ವಿದ್ಯಾರ್ಥಿಗಳು ಸತತ ಓದುವುದು, ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಜೀವನದಲ್ಲಿ ಉತ್ತಮ ಸಂಸ್ಕಾರಗಳು ರೂಡಿಸಿಕೊಂಡು ತಂದೆ ತಾಯಿ ಹಾಗೂ ಅಕ್ಷರ ಕಲಿಸಿದ ಶಿಕ್ಷಕರ ಹೆಸರು ತರುವಂತೆ ವಿದ್ಯಾರ್ಥಿಗಳು ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಸಿದ್ದರಾಮ ಚಿಂಚೊಳಿ, ಡಾ.ಸುನೀಲ ಪಾಟೀಲ, ಗೋಲಗೇರಿ ಗ್ರಾಮದ ಗುರುರಾಜ ಹುರಕಡ್ಲಿ, ತಮ್ಮಣ್ಣ ಇಳಗೇರ, ಶಿಕ್ಷಕ ಸಾಹಿತಿ ಬಸವರಾಜ ಅಗಸರ, ಎಂ.ಎಂ.ಯಾಳಗಿ, ಎಂ.ಆರ್ ಹೆಬ್ಬಳ್ಳಿ, ಎ.ಆರ್.ರಜಪೂತ, ಎಸ್.ಎಸ್.ಪಾಟೀಲ, ಜಿ.ಎನ್.ಹಿರೇಮಠ, ಜಿ.ಎಸ್.ಮೋರಟಗಿ, ಸಹನಾ ತಳಕೇರಿ, ತೇಜಶ್ವಿನಿ ಬಸವಪ್ರಭು, ಮಲಕ್ಕಮ್ಮ ಬಿರಾದಾರ,  ಉಪನ್ಯಾಸಕ ಶಶಿಧರ ಅವಟಿ ಸ್ವಾಗತಿಸಿದರು.      

ಉಪನ್ಯಾಸಕ ಬಸನಗೌಡ ಬಿರಾದಾರ ನಿರೂಪಿಸಿದರು. ಉಪನ್ಯಾಸಕ ಎಸ್.ಎಸ್.ಸುರಪೂರ ವಂದಿಸಿದರು. ಅಂಬಿಕಾ ಗುಡ್ಯಾಳ ಪ್ರಾರ್ಥನೆ ಗೀತೆ ಹೇಳಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group