ಭಾರತೀಯರ ಸಂಪತ್ತು ಗೋಮಾತಾ; ಅದರ ರಕ್ಷಣೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅಭಿಮತ

Must Read

ಬೆಳಗಾವಿ: ಗೋಮಾತೆಯ ಒಂದೊಂದು  ಅವಯವದಲ್ಲಿಯೂ ದೇವತೆಗಳು  ನೆಲೆಸಿದ್ದಾರೆ. ಅಂತಹ ಕಾಮಧೇನುವಿನ  ಸೇವೆ ಮಾಡುವುದು ನಮ್ಮೆಲ್ಲರ

ಕರ್ತವ್ಯವಾಗಿದೆ. ಗೋವಿನ ಪ್ರತಿಯೊಂದು  ವಸ್ತು ಅನೇಕ ಬಗೆಯಲ್ಲಿ ಉಪಯೋಗಕ್ಕೆ

ಬರುತ್ತದೆ. ಗೋಸಂತತಿಯನ್ನು  ನಾವೆಲ್ಲರೂ  ಉಳಿಸಿ ಬೆಳೆಸಬೇಕಾಗಿದೆ ಎಂದು ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಅಭಿಪ್ರಾಯ ಪಟ್ಟರು.

    ಬೆಳಗಾವಿಯ ಭೂಕೈಲಾಸ ಪುಣ್ಯಕ್ಷೇತ್ರ ಮುಕ್ತಿಮಠದಲ್ಲಿ ಜಾತ್ರಾ ಮಹೋತ್ಸವದ  ಅಂಗವಾಗಿ ನಡೆಯುತ್ತಿರುವ ಧರ್ಮಸಭೆಯ ಗೋಮಾತಾ ದೇವೋಭವ

ಕಾರ್ಯಕ್ರಮದಲ್ಲಿ ಆಶಯ ಭಾಷಣ

ಮಾಡುತ್ತಾ ಅವರು ನುಡಿದರು.

           ಇದೇ ಸಂದರ್ಭದಲ್ಲಿ  ಶ್ರೀ ಕ್ಷೇತ್ರ ಮುಕ್ತಿ ಮಠದ ಪೀಠಾಧ್ಯಕ್ಷರಾದ

ಧರ್ಮಶ್ರೀ ತಪೋರತ್ನ ಶಿವಸಿದ್ಧ

ಸೋಮೇಶ್ವರ ಶಿವಾಚಾರ್ಯ  ಮಹಾಸ್ವಾಮಿಗಳು ಡಾ. ಗುರುರಾಜ

ಪೋಶೆಟ್ಟಿಹಳ್ಳಿರವರ ಸಾಂಸ್ಕೃತಿಕ

ಪರಿಚಾರಿಕೆಗೆ ‘ವಿದ್ಯಾ ವಾರಿಧಿ’   ಎಂಬ

ಉಪಾಧಿ ಸಹಿತ ಸನ್ಮಾನಿಸಿದರು. ಶಹಬಂದರನ ಸಮಾಜ ಸೇವಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ  ಬೆಳಗಾವಿ ಜಿಲ್ಲೆ ಉಪಾಧ್ಯಕ್ಷ ರಾಜು ಮ.ನಾಶಿಪುಡಿ ಮೊದಲಾದವರು ಉಪಸ್ಥಿತರಿದ್ದರು.

Latest News

ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್  ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...

More Articles Like This

error: Content is protected !!
Join WhatsApp Group