Homeಸುದ್ದಿಗಳುಸಾಥ೯ಕ ಜೀವನಕ್ಕೆ ದೃಢ ನಿಧಾ೯ರ ಅವಶ್ಯಕ: ಕೊಕ್ಕನವರ

ಸಾಥ೯ಕ ಜೀವನಕ್ಕೆ ದೃಢ ನಿಧಾ೯ರ ಅವಶ್ಯಕ: ಕೊಕ್ಕನವರ

ಬಾಗಲಕೋಟೆ: ಸವಾಲುಗಳನ್ನು ಎದುರಿಸಿ ಜೀವನವನ್ನು ಸಾಥ೯ಕಗೊಳಿಸಿಕೊಳ್ಳಬೇಕು.ಭಕ್ತಿಗಿಂತ ಯುಕ್ತಿಯ ಪ್ರತಿಭೆಗಳಿಗೆ ಬೆಲೆಯಿದೆ.ಶರೀರ ಸಂಪತ್ತನ್ನು ಹಾಳು ಮಾಡಿಕೊಳ್ಳಬಾರದು. ಸಮಾಜದಲ್ಲಿ ಸನ್ಮಾನ ಸ್ವೀಕರಿಸಬೇಕಾದರೆ ಅವಮಾನಗಳನ್ನು ಎದುರಿಸಿ ಬೆಳೆಯಬೇಕು ಎಂದು ಜಮಖಂಡಿಯ ಸರ್ಕಾರಿ ಪ್ರಥಮ ದಜೆ೯ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ.ವಾಯ್.ವಾಯ್. ಕೊಕ್ಕನವರ ಹೇಳಿದರು.

ಜಿಲ್ಲೆಯ ಬಾಗಲಕೋಟ ತಾಲೂಕಿನ ಬೇವೂರಿನ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಅಂತಿಮವಷ೯ದ ಬೀಳ್ಕೊಡುಗೆ ಸಮಾರಂಭ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಸಮಾರಂಭ ಉದ್ದೇಶಿಸಿ ಮಾತನಾಡಿ, ಮಿಂಚಿ ಹೋದ ಕಾಲಕ್ಕೆ ಚಿಂತಿಸದೆ ಜೀವನದಲ್ಲಿ ಎದ್ದು ಬರಬೇಕು,ಗೆದ್ದು ಬರಬೇಕು. ಅವಕಾಶ ಸಿಕ್ಕಾಗ ಸಾವಕಾಶ ಮಾಡದೆ ದೃಢ ನಿಧಾ೯ರಗಳಿಂದ ಸಾಧಕರಾಗಿ ಬೆಳೆಯಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಆದಶ೯ ವಿದ್ಯಾವಧ೯ಕ ಸಂಘದ ಸದಸ್ಯರಾದ ಪಿ.ಬಿ.ಹೊಸಳ್ಳಿ ಮಾತನಾಡಿ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ತಂದೆ ತಾಯಿ, ಗುರುಗಳಲ್ಲಿ ಪೂಜ್ಯನೀಯ ಭಾವ ಹೊಂದಿ ಸಮಾಜಕ್ಕೆ ಆಸ್ತಿಯಾಗಿ ವಿದ್ಯಾಥಿ೯ಗಳು ಬೆಳೆಯಬೇಕು ಎಂದು ಹೇಳಿದರು.

ವಿದ್ಯಾಥಿ೯ಗಳ ಪ್ರತಿಭೆಗೆ ತಕ್ಕ ಪುರಸ್ಕಾರ ನೀಡುತ್ತಾ ನಮ್ಮ ಮಹಾವಿದ್ಯಾಲಯ ಗ್ರಾಮೀಣಭಾಗದಲ್ಲಿ ಹೆಮ್ಮೆಯ ಸಂಸ್ಥೆಯಾಗಿದೆ. ವರ್ಷದುದ್ದಕ್ಕೂ ಅನೇಕ ರಚನಾತ್ಮಕ ಕಾಯ೯ಚುವಟಿಕೆ ನಡೆಸಿ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾಥಿ೯ಗಳನ್ನು ಭಾಗಿಯಾಗಿಸುತ್ತಾ ಬಂದಿದ್ದು ಕಾಲೇಜಿನ ಅನೇಕ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಬೆಳೆದಿದ್ದಾರೆ ಎಂದು ಪ್ರಾಚಾಯ೯ ಡಾ. ಜಗದೀಶ ಗು. ಭೈರಮಟ್ಟಿ ಪ್ರಾಸ್ತಾವಿಕ ನುಡಿಯಲ್ಲಿ ಹೇಳಿದರು.

ಸಮಾರಂಭದಲ್ಲಿ ವಿದ್ಯಾಥಿ೯ಗಳಿಗೆ ನಗದು ಪ್ರಶಸ್ತಿ ಪತ್ರ ಬಹುಮಾನ ಫಲಕ ನೀಡಿ ಅಭಿನಂದಿಸಲಾಯಿತು. ಸಂಗೀತದ ವಿವಿಧ ಸ್ಫಧೆ೯ಗಳಲ್ಲಿ ಜಯಶಾಲಿ ಯಾಗಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ರಥಮ ಸ್ಥಾನ ಪಡೆದ ಕು.ವಿಜಯಲಕ್ಷ್ಮೀ ಬಂಡಿವಡ್ಡರ ವಿದ್ಯಾಥಿ೯ನಿಗೆ ಸ್ಮರಣಿಕೆ, ಬಹುಮಾನ ಫಲಕ ನೀಡಿ ಅಭಿನಂದಿಸಲಾಯಿತು.

ಕಾಲೇಜಿನ ವಿದ್ಯಾಥಿ೯ನಿಯರು ಸ್ವಾಗತ ಗೀತೆ,ಪ್ರಾಥ೯ನೆ ಗೀತೆಗಳನ್ನು ಹಾಡಿದರು. ಆರನೆ ಸೆಮಿಸ್ಟರ್ ವಿದ್ಯಾಥಿ೯ನಿ ಲಕ್ಷ್ಮೀ ಮಾಗನೂರು ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ಸಂಗಮೇಶ ಹಂಚಿನಾಳ ಉಪನ್ಯಾಸಕರ ವತಿಯಿಂದ ಮಾತನಾಡಿ ವಿದ್ಯಾಥಿ೯ಗಳಿಗೆ ಶುಭಹಾರೈಸಿದರು. ಕಾಯ೯ಕ್ರಮದ ವೇದಿಕೆಯಲ್ಲಿ ಅಂತಿಮ ವಷ೯ದ ವಿದ್ಯಾಥಿ೯ ಪ್ರತಿನಿಧಿಗಳಾದ ಸಂಗೀತಾ ಮಾಗನೂರು ,ಯಮನೂರೇಶ ಮಾದರ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಬಿ.ಬಿ.ಬೇವೂರ, ಎಸ್.ಎಸ್.ಆದಾಪೂರ, ಡಿ.ವಾಯ್.ಬುಡ್ಡಿಯವರ, ಡಾ.ಎ.ಎಮ್.ಗೊರಚಿಕ್ಕನವರ ಭಾಗಿಯಾಗಿದ್ದರು.

ಜಿ.ಎಸ್.ಗೌಡರ ನಿರೂಪಿಸಿದರು. ನಾಗಲಿಂಗೇಶ ಬೆಣ್ಣೂರು ವಂದಿಸಿದರು. ಡಿ.ವಾಯ್.ಸಂಗಾಪೂರ ಅವರ ತಂಡ ಸಂಗೀತ ವಾದ್ಯ ಮೇಳಗಳನ್ನು ನುಡಿಸಿದರು. ಸಮಾರಂಭದ ನಂತರ ವಿದ್ಯಾಥಿ೯ಗಳಿಂದ ಹಾಡು, ನೃತ್ಯ,ಮನರಂಜನಾ ಕಾಯ೯ಕ್ರಮ ಸೇರಿದಂತೆ ವಣ೯ರಂಜಿತ ಪಟಾಕಿಗಳ ಸಪ್ಪಳದೊಂದಿಗೆ ಅಂತಿಮ ವಷ೯ದ ವಿದ್ಯಾಥಿ೯ಗಳು ಕಲಾ ಉತ್ಸವ ಬ್ಯಾನರ್ ಬಿಡುಗಡೆಗೊಳಿಸಿದರು.

RELATED ARTICLES

Most Popular

error: Content is protected !!
Join WhatsApp Group