Homeಸುದ್ದಿಗಳು‘ಮೊರಾರ್ಜಿ ಶಾಲೆಗಳಲ್ಲಿ ಪದವಿಗೂ ಅವಕಾಶ ದೊರೆಯಲಿದೆ’ - ಡಾ. ಅಬ್ದುಲ್ ರಶೀದ

‘ಮೊರಾರ್ಜಿ ಶಾಲೆಗಳಲ್ಲಿ ಪದವಿಗೂ ಅವಕಾಶ ದೊರೆಯಲಿದೆ’ – ಡಾ. ಅಬ್ದುಲ್ ರಶೀದ

ಮೂಡಲಗಿ: ‘ಸರ್ಕಾರದಿಂದ ನಡೆಸುವ ಮೊರಾರ್ಜಿ ವಸತಿ ಶಾಲೆಗಳು ಗ್ರಾಮೀಣ ಪ್ರತಿಭಾವಂತ ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಲಿವೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಅಬ್ದುಲರಶೀದ ಮಿರ್ಜನ್ನವರ ಹೇಳಿದರು.

ಇಲ್ಲಿಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಶಿಕ್ಷಕರು ಆಗಿರುತ್ತಾರೆ ಮತ್ತು ಪಾಲಕರೂ ಆಗಿರುತ್ತಾರೆ ಎಂದರು.

ಮೊರಾರ್ಜಿ ಶಾಲೆಗೆ ಪ್ರವೇಶ ಪಡೆದ ಮಕ್ಕಳು ಎಸ್‍ಎಸ್‍ಎಲ್‍ಸಿ ನಂತರ ಶಿಕ್ಷಣ ಮೊಟಕುಗೊಳಿಸಬಾರದು ಎಂದು ಈಗಾಗಲೇ ಪಿಯುಸಿ ಪ್ರಾರಂಭಿಸಲಾಗಿದೆ. ಮುಂದಿನ ಹಂತವಾಗಿ ಸರ್ಕಾರವು ಪದವಿ ಕೋರ್ಸಗಳು ಪ್ರಾರಂಭಗೊಳ್ಳಲಿದ್ದು, ಈಗಾಗಲೇ ಚಿಕ್ಕೋಡಿಯಲ್ಲಿ ಪ್ರಾಯೋಗಿಕವಾಗಿ ಪದವಿ ಕೋರ್ಸ ಪ್ರಾರಂಭಿಸಲಾಗಿದೆ ಎಂದರು. 

ವಿದ್ಯಾರ್ಥಿಗಳಿಗೆ ಪಿಯುಸಿ ಹಂತದಲ್ಲಿ ನೀಟ್, ಸಿಇಟಿ ತರಬೇತಿ ಮತ್ತು ಯುಪಿಎಸ್‍ಸಿ ಪರೀಕ್ಷೆಗಳ ಸಿದ್ಧತೆಗಾಗಿ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದರು. 

ಮೂಡಲಗಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಗುಣಮಟ್ಟದ ಕಲಿಕಾ ಮಟ್ಟ, ಶಿಸ್ತು ಮತ್ತು ಸ್ಕೌಟ್ಸ್ ಘಟಕ ಪ್ರಾರಂಭಿಸಿದ್ದು ಶ್ಲಾಘನೀಯವಾಗಿದೆ ಎಂದರು. 

ಅತಿಥಿಗಳಾಗಿದ್ದ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಪಿಎಸ್‍ಐ ಎಚ್.ವೈ. ಬಾಲದಂಡಿ, ಸಾಹಿತಿ ಬಾಲಶೇಖರ ಬಂದಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಚಾರ್ಯ ಗೋವಿಂದ ಕಳ್ಳಿಮನಿ ಮಾತನಾಡಿದರು.

ಸಾಧಕ ವಿದ್ಯಾರ್ಥಿಗಳನ್ನು, ದೇಣಿಗೆ ನೀಡಿದ ಮಹಿನೀಯರನ್ನು ಸನ್ಮಾನಿಸಿದರು. 

ವೇದಿಕೆಯಲ್ಲಿ ಅತಿಥಿಗಳಾಗಿ ಶಿಕ್ಷಕರಾದ ಬಿ.ಎ. ಡಾಂಗೆ, ರಮಜಾನ್ ಶೇಖ, ಬಿಇಒ ಕಚೇರಿಯ ಸತೀಶಕುಮಾರ, ನಿಲಯಪಾಲಕ ಮಲ್ಲಿಕಾರ್ಜುನ ಕೆಂಚಣ್ಣವರ, ವಿಬಿಎಸ್ ಶಾಲೆಯ ಆರ್.ಆರ್. ಮೇಲಗಪ್ಪ, ದೈಹಿಕ ಶಿಕ್ಷಕ ಸಿದ್ದು ದನವಾಡಿ, ರುದ್ರಪ್ಪ ಸಿದ್ದಣ್ಣವರ, ಸೋಮನಾಥ ಇಜೇರಿ, ಜಾಹೀದ ನದಾಫ ಇದ್ದರು.

ಸೋಮನಾಥ ಇಜಾರೆ, ರೋಶನ ಚವ್ಹಾನಕರ, ಪಾತಿಮಾ ಅತ್ತಾರ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group