- Advertisement -
ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ಪಂಚ ಗಿರಿಗಳ ಮಧ್ಯೆ ಇರುವ ಉತ್ತರ ಪಿನಾಕಿನಿ ನದಿ ತೀರದ ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ವ್ಯಾಸರಾಜ ರಿಂದ ಪ್ರತಿಷ್ಠಿತ ಶ್ರೀ ಆಂಜನೇಯ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಚಿತ್ರಾ ಪೂರ್ಣಿಮೆಂದು ಹನುಮ ಜಯಂತಿ ಮಹೋತ್ಸವವನ್ನು ವೈಭವದಿಂದ ಆಚರಿಸಲಾಯಿತು.
ಶ್ರೀರಾಮ ಪರಿವಾರ ಮತ್ತು ಗೋಂದಾವಳಿ ಬ್ರಹ್ಮಚೈತನ್ಯ ಮಹಾರಾಜರ ಸನ್ನಿಧಾನವಿರುವ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿತರಣೆ ನಡೆದು ಶ್ರೀ ಹರ್ಷ, ಅನುರಾಧ, ಗಿರೀಶ್ ಸಾಲವಾಡಿ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.
ದೇವಾಲಯ ಪುನರುತ್ಥಾನ ಮಾಡಿದ ಕೀರ್ತಿಶೇಷ ರಾಮಚಂದ್ರ ರಾವ್ ಸ್ಮರಣೆಯಲ್ಲಿ ನಡೆದ ಕುಟುಂಬ ಸಮ್ಮಿಲನದಲ್ಲಿ ದೇವಸ್ಥಾನ ಟ್ರಸ್ಟ್ ನ ಸದಸ್ಯರು, ರಾಮಚಂದ್ರರಾವ್ ಕುಟುಂಬದ ಅವರ ಧರ್ಮಪತ್ನಿ ರಾಮಕ್ಕ, ಪುತ್ರರಾದ ಸತೀಶ್ ಮತ್ತು ಗುರುಪ್ರಸಾದ್, ಪುತ್ರಿ ಶಾಂತ,ಅಳಿಯ ನಾರಾಯಣ ಭಟ್ ಮತ್ತು ಪೋಶೆಟ್ಟಿಹಳ್ಳಿಯ ಗೋವಿಂದರಾವ್, ಶ್ರೀನಿವಾಸ್, ಪೋ.ರಾ. ಶ್ರೀನಿವಾಸ್ ಹಾಗು ಗುರುರಾಜ್ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.