Homeಸುದ್ದಿಗಳುಮಹಾನ್ ದೇಶಭಕ್ತ ಸುಭಾಷಚಂದ್ರ ಬೋಸ್ - ಪ್ರೊ. ಗುಜಗೊಂಡ

ಮಹಾನ್ ದೇಶಭಕ್ತ ಸುಭಾಷಚಂದ್ರ ಬೋಸ್ – ಪ್ರೊ. ಗುಜಗೊಂಡ

ಮೂಡಲಗಿ: ‘ಮಹಾನ್ ದೇಶಭಕ್ತ ನೇತಾಜಿ ಸುಭಾಷಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಹೋರಾಡಿದ ಅಪ್ರತಿಮ ನಾಯಕರಾಗಿದ್ದರು’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಸಂಗಮೇಶ ಗುಜಗೊಂಡ ಹೇಳಿದರು.

ಮೂಡಲಗಿಯ ಪುರಸಭೆ, ನೇತಾಜಿ ಇಂಟಿಗ್ರೇಟೆಡ್ ರೂರಲ್ ಡೆವೆಲೆಪ್‍ಮೆಂಟ್ ಸೊಸೈಟಿ, ಲಯನ್ಸ ಕ್ಲಬ್ ಮೂಡಲಗಿ ಪರಿವಾರ ಇವರ ಸಂಯಕ್ತ ಆಶ್ರಯದಲ್ಲಿ ಎಸ್‍ಎಸ್‍ಆರ್ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ 127ನೇ ಜಯಂತಿ ಹಾಗೂ ಸ್ವಚ್ಛ ಅಭಿಯಾನ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳ ಬಹುಮಾನ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮತನಾಡಿದ ಅವರು ಧೈರ್ಯ, ಸಾಹ, ಪರಾಕ್ರಮ ಮತ್ತು ಕ್ರಾಂತಿಕಾರಿ ವ್ಯಕ್ತಿತ್ವದಿಂದಾಗಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು ಎಂದರು. 

ನೇತಾಜಿ ಅವರು ದೇಶ ವಿದೇಶಗಳಲ್ಲಿ ಸೈನ್ಯ ಕಟ್ಟಿ ಅನುಕ್ಷಣವು ಹೋರಾಡಿದ ಅವರ ಜೀವನಗಾಥೆಯು ಸದಾ ಸ್ಪೂರ್ತಿಯ ಕಣಜವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ನೇತಾಜಿ ಸೊಸೈಟಿಯ ಅಧ್ಯಕ್ಷ ಈರಣ್ಣ ಕೊಣ್ಣೂರ, ಬಾಲಶೇಖರ ಬಂದಿ ಮಾತನಾಡಿದರು.

ಪ್ರಬಂಧ, ಭಾಷಣ ಮತ್ತು ಚಿತ್ರಕಲೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಣ, ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿದರು. 

ಮುಖ್ಯ ಅತಿಥಿಗಳಾಗಿ ಪುರಸಭೆ ಸಮುದಾಯ ಸಂಘಟಕ ಚಂದ್ರಕಾಂತ ಪಾಟೀಲ, ಶಿಕ್ಷಣ ಸಂಯೋಜಕ ಬಸವರಾಜ, ಸಿಆರ್‍ಪಿ ಸಮೀರ ದಬಾಡಿ, ಸಂಜಯ ಮೊಕಾಸಿ, ಶಿವಾನಂದ ಗಾಡವಿ, ಉಪ್ರಪಾಚಾರ್ಯ ಬಿ.ಕೆ. ಕಾಡಪ್ಪಗೋಳ, ಪುರಸಭೆಯ ಕಂದಾಯ ವಿಭಾಗದ ಚಿಕ್ಕೋರೆ, ಪ್ರೀತಮ ಬೋವಿ, ಸುಭಾಷ ಕುರಣೆ ಇದ್ದರು.

ಶಿಕ್ಷಕ ರಮೇಶ ಬಡಿಗೇರ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group