spot_img
spot_img

ಗುರುಗಳ ಸ್ಥಾನ ದೇವರಿಗಿಂತ ಮಿಗಿಲಾದದ್ದು: ಜಡಿಸಿದ್ದೇಶ್ವರ ಸ್ವಾಮೀಜಿ

Must Read

- Advertisement -

ದೊಡವಾಡ(ಬೈಲಹೊಂಗಲ): ಗುರುಗಳು ನೀಡಿದ ಜ್ಞಾನದಿಂದ ಮಾತ್ರ ಭಗವಂತನನ್ನ ಕಾಣಲು ಸಾಧ್ಯ.ಗುರುಗಳ ಸ್ಥಾನ ದೇವರಿಗಿಂತ ಮಿಗಿಲಾದದ್ದು ಎಂದು ಹಿರೇಮಠದ ಪರಮಪೂಜ್ಯ ಜಡಿಸಿದ್ದೇಶ್ವರ ಸ್ವಾಮೀಜಿಗಳು ಹೇಳಿದರು.

ಭಾನುವಾರ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಹಿರೇಮಠದಲ್ಲಿ 1992-1999ರ ಅವಧಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ/ಉರ್ದು ಪ್ರಾಥಮಿಕ ಶಾಲೆ ಹಾಗೂ 1999-2002ರ ಅವಧಿಯ ಶ್ರೀ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗುರುವಂದನಾ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗುರುವಂದನೆಯಂಥ ಕಾರ್ಯಕ್ರಮಗಳನ್ನು ನೋಡಿದಾಗ ಗುರುಶಿಷ್ಯರ ಬಾಂಧವ್ಯದ ಪಾವಿತ್ರ್ಯ ಅರ್ಥವಾಗುತ್ತದೆ.

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸುವ ಮೂಲಕ ಮತ್ತೊಂದು ವಿಶೇಷ ಅರ್ಥ ನೀಡುತ್ತಿರುವುದು,ಅದರಲ್ಲೂ ಜಲಸ್ಪರ್ಶ ಮಾಡಿ,ಶಾಲು ಹೊದಿಸಿ ಸತ್ಕರಿಸುತ್ತಿರುವುದು ಇದೇ ಮೊದಲು. ಪ್ರತಿಯೊಬ್ಬರ ಜೀವನದ ಮೊದಲ ಗುರುವಾಗಿ ತಾಯಿಯಿಂದ ಶುರುವಾದ ಕಲಿಕೆಯ ಪಯಣ,ವಿದ್ಯಾಗುರುಗಳಿಂದ ಮುನ್ನಡೆಯುತ್ತ ಹೋಗುತ್ತದೆ, ತಂದೆಯಿಂದ ವ್ಯವಹಾರವನ್ನು ಕಲಿತು, ವೃತ್ತಿ ಜೀವನದಲ್ಲಿ ತನ್ನ ಮೇಲಾಧಿಕಾರಿಗಳ ಹಾಗೂ ಸಹೋದ್ಯೋಗಿಗಳಿಂದ ವೃತ್ತಿ ಕೌಶಲ್ಯ ಕಲಿಯುತ್ತೇವೆ. ಜೀವನದ ಎಲ್ಲಾ ಮಜಲಿನಲ್ಲೂ ಗುರುಗಳ ಸ್ಥಾನ ಪೂಜನೀಯ ಎಂದು ಅವರು ಹೇಳಿದರು.

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ಹಳೆಯ ವಿದ್ಯಾರ್ಥಿ ಸಂಘದ ಗುರು ಅರಳಿಮರದ,ತಂದೆ,ತಾಯಿ, ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ ಇವರು ನಮ್ಮ ಬದುಕನ್ನು ಕಟ್ಟಿಕೊಟ್ಟ ದೇವರಾಗಿದ್ದಾರೆ. ಗುರುಗಳ ಫಲವಾಗಿ ನಾವಿಂದು ನೆಮ್ಮದಿಯ ಬದುಕನ್ನು ಬದುಕುತ್ತಿದ್ದೇವೆ ಗುರು ವಂದನೆ ಕಾರ್ಯಕ್ರಮದ ಮೂಲಕ ಗುರು ಪರಂಪರೆಯನ್ನು ಮುಂದುವರೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಜ್ಞಾನದ ಹಸಿವನ್ನು ತೀರಿಸಿ ಬದುಕನ್ನು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ,ಪ್ರತಿಯೊಬ್ಬ ವ್ಯಕ್ತಿ ಸಾಧನೆಯ ಹಿಂದೆ ಗುರುವಿನ ಪಾತ್ರವಿದ್ದು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಶಿಕ್ಷಕರು ಇರುತ್ತಾರೆ ಎಂದು ಹಳೆಯ ವಿದ್ಯಾರ್ಥಿ ಸಂಘದ ರವಿ ರಾಚನ್ನವರ ನುಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಡಾ. ದೇವದಾಸ ಕಳಸದ, ಗುರು ಎಂಬ ಪದವನ್ನು ಅರ್ಥೈಸಲು ಸಾಧ್ಯವಿಲ್ಲ . ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ಮುಖ್ಯವಾಗಿರುತ್ತದೆ. ಗುರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಭಾವನಾತ್ಮಕ ಸಂಬಂಧವಿದ್ದು ಅವರ ಏಳಿಗೆಯ ಬಗ್ಗೆ ಮೊದಲು ಹೆಮ್ಮೆ ಮತ್ತು ಸಂತೋಷ ಪಡುವ ವ್ಯಕ್ತಿ ಶಿಕ್ಷಕರಾಗಿರುತ್ತಾರೆ ಎಂದರು.

- Advertisement -

ಮತ್ತೋರ್ವ ನಿವೃತ್ತ ಶಿಕ್ಷಕರಾದ ವಿ ಎಫ್ ರಾಚನ್ನವರ ಮಾತನಾಡಿ,ದೊಡವಾಡ ಗ್ರಾಮವು ಶಿಷ್ಯ ಪರಂಪರೆಗೆ ಹೆಸರು ವಾಸಿಯಾಗಿರುವ ಹೆಮ್ಮಯ ನಾಡಾಗಿದ್ದು ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದ ಮುಖಾಂತರ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತಿರುವ ಕಾರ್ಯ ಮಾಡುತ್ತಿದ್ದು ಹೆಮ್ಮೆಯ ವಿಷಯವಾಗಿದೆ ಎಂದರು.

ಮತ್ತೋರ್ವ ಶಿಕ್ಷಕರಾದ ಎನ್ ಜಿ ಕರಿಕಟ್ಟಿ ಮಾತನಾಡಿ, ಮುಂದೆ ಗುರಿ ಹಿಂದೆ ಗುರುವನ್ನು ಹೊಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಯಶಸ್ಸಿನ ಮಾರ್ಗದತ್ತ ದಾಪುಗಾಲನ್ನು ಹಾಕುತ್ತಾನೆ ಎಂದರು.

ನಿವೃತ್ತ ಶಿಕ್ಷಕರಾದ ಎಸ್ ಎಸ್ ಛಬ್ಬಿ ಮಾತನಾಡಿ, ವಿದ್ಯಾರ್ಥಿಗಳು ಅಕ್ಷರ ಕಲಿಸಿದ ಗುರುಗಳನ್ನು ನೆನೆದು ಶಿಕ್ಷಕ ಗುರುವಂದನೆಯಂಥ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶಿಕ್ಷಕರ ಘನತೆ ಗೌರವವನ್ನು ಹೆಚ್ಚಿಸುವಂತೆ ಮಾಡಿದೆ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬೀಳದೆ ಸನ್ಮಾರ್ಗದತ್ತ ನಡೆಯಬೇಕೆಂದರು.

ಕಾರ್ಯಕ್ರಮದಲ್ಲಿ ಊರಿನ ಶಿಕ್ಷಣ ಪ್ರೇಮಿಗಳಾದ ಎಸ್ ಎಸ್ ಶಹಾಪುರಮರ, ಎಸ್ ಜಿ ಪಾಟೀಲ್,ಬಿ ಬಿ ಅಸುಂಡಿ, ಮುದಕಪ್ಪ ತುಪ್ಪದ ಶಿಕ್ಷಕರಾದ ವೈ ಎನ್ ಬೆಳವಡಿ,ವೈ ಎಲ್ ಹಗೆದಾಳ,ಸಿ ಬಿ ಆಲಕಟ್ಟಿ, ಜಿ ಸಿ ಬೆಳವಡಿ,ಎಸ್ ಜಿ ಭೋವಿ,ಕೆ ಏನ್ ಕುಬಸದ, ಬಿ ಆರ್ ಹುತಮಲ್ಲನವರ ಸೇರಿದಂತೆ ಹಲವಾರು ಶಿಕ್ಷಕ/ಶಿಕ್ಷಕಿಯರು,ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕ/ಶಿಕ್ಷಕಿ/ಅಗಲಿದ ಸ್ನೇಹಿತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ವೀರಣ್ಣ ಹುಲಮನಿ ನಿರೂಪಿಸಿದರು, ಆತ್ಮಾನಂದ ಮುರಗೊಡ ಸ್ವಾಗತಿಸಿದರು, ಪ್ರತಿಭಾ ಬಡಿಗೇರ ವಂದಿಸಿದರು.


ವರದಿ: ಗುರು ಅರಳಿಮರದ, ಹವ್ಯಾಸಿ ಬರಹಗಾರರು ಹಾಗೂ ಜವಳಿ ಉದ್ಯಮಿ, ದೊಡವಾಡ

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group