ಮೂಡಲಗಿ : ಎ ೭ ರಿಂದ ವಡೇರಹಟ್ಟಿಯ ಹಾಲಸಿದ್ದೇಶ್ವರ ಜಾತ್ರೆ ಹಾಗೂ ದನಗಳ ಪ್ರದರ್ಶನ ಜರುಗುವದು ಎಂದು ಜಾತ್ರಾ ಮಹೋತ್ಸವದ ಸದಸ್ಯ ಬನಪ್ಪ ಮಳ್ಳಿವಡೇಯರ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಹಾಲಸಿದ್ದೇಶ್ವರ ಜಾತ್ರೆಯು ಏ.೭ ರ ಸೋಮವಾರ ಜರುಗಲಿದ್ದು ಪಾಲಕಿ ಗಳು ಕೂಡುವವು ಹಾಗೂ ಡೊಳ್ಳಿನ ಪದಗಳು ಹಾಗೂ ಡೊಳ್ಳು ಬಾರಿಸುವದು ಇರುತ್ತದೆ. ಏ ೮ರ ಮಂಗಳವಾರ ಮುಂಜಾನೆ ವಾಲಗ ೧೨ಕ್ಕೆ ಅಗ್ನಿ ಪ್ರವೇಶ. ನೈವೇದ್ಯ ನಂತರ ಮಹಾಪ್ರಸಾದ. ಸಂಜೆ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ.ವಿ.ಪ ವಿವೇಕರಾವ ಪಾಟೀಲ ಮತ್ತು ಮುರಳಿ ವಜ್ರಮಟ್ಟಿ ಆಗಮಿಸುವರು.
ರಾತ್ರಿ ೯ಕ್ಕೆ ಹರದೇಶಿ ನಾಗೇಶಿ ಡೊಳ್ಳಿನ ಪದಗಳು.ಏ ೯ ರ ಬುಧವಾರ ತೆರೆಬಂಡಿ ಸ್ಪರ್ಧೆ. ರಾತ್ರಿ ನಾಟಕ ಪ್ರದರ್ಶನ.ಏ ೧೦ರ ಗುರುವಾರ ಮುಂಜಾನೆ ೧೧ ಡೊಳ್ಳಿನ ಪದಗಳು.ರಾತ್ರಿ ಶ್ರೀ ಕೃಷ್ಣ ಪಾರಿಜಾತ. ೧೧ರ ಶುಕ್ರವಾರ ಜೋಡೆತ್ತಿನ ಕಲ್ಲು ಎಳೆಯುವ ಶರ್ತು.ರಾತ್ರಿ ನಾಟಕ.೧೨ರ ಶನಿವಾರ ಭವ್ಯ ಜಾನುವಾರಗಳ ಪ್ರದರ್ಶನ ನಂತರ ಬಹುಮಾನ ವಿತರಣೆ ಸಮಾರಂಭ ಜರುಗುವದು ನಂತರ ಮಹಾಪ್ರಸಾದ ಜರಗುತ್ತದೆ ಎಂದು ಜಾತ್ರಾ ಕಮಿಟಿಯ ಸದಸ್ಯ ಹಾಲಪ್ಪ ಕುಲಗೋಡ ತಿಳಿಸಿದ್ದಾರೆ.