
ಸಿಂದಗಿ: ದೇವರಲ್ಲಿ ಅನನ್ಯ ಭಕ್ತಿ ಹೊಂದಿದ ಹಾಲುಮತ ಸಮುದಾಯದ ಜನರು ತಮ್ಮ ನಿಷ್ಠಾವಂತ ದುಡಿಮೆಯ ಮೂಲಕ ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರತೆ ಹೊಂದಿದವರಾಗಿದ್ದಾರೆ ಎಂದು ಶಾಸಕ ರಮೇಶ್ ಭೂಸನೂರ ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯದೇವ ಶ್ರೀ ಕೇರಿಸಿದ್ದೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡಿ, ಕೊಟ್ಟ ಮಾತಿಗೆ ತಮ್ಮ ಪ್ರಾಣವನ್ನೇ ಕೊಡುವ ಹಾಲುಮತ ಸಮಾಜದ ಭಾಂದವರು ಕಳೆದ ಉಪಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ತಮಗೆ ಕೊಟ್ಟ ಭರವಸೆಗಳು ಹುಸಿಯಾಗದಂತೆ ಸಮಾಜದ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿ ಬಂದರೂ ಕೂಡ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.
ಮೈಹಿಬೂಬಸಾಬ ಕಣ್ಣಿ ಮಾತನಾಡಿ, ಕಳೆದ ನಲವತ್ತು ವರ್ಷ ಸಿಂದಗಿ ತಾಲೂಕಿನಲ್ಲಿ ಇದ್ದರು ಕೂಡಾ ಮೊರಟಗಿ ಇಂಡಿ ಮತಕ್ಷೇತ್ರದಲ್ಲಿತ್ತು ಈಗ ಈ ಗ್ರಾಮ ಅಲಮೇಲ್ ತಾಲೂಕಿಗೆ ಸೇರ್ಪಡೆಗೊಂಡಿದೆ ಮತಕ್ಷೇತ್ರ ಮಾತ್ರ ಸಿಂದಗಿ ಇದೆ ಪದೇ ಪದೇ ಮೋರಟಗಿ ಗ್ರಾಮಸ್ಥರು ಸೌಲಭ್ಯ ವಂಚಿತದಲ್ಲಿ ಸಂಕಷ್ಟವನ್ನೇ ಎದುರಿಸುವ ಪರಿಸ್ಥಿತಿ ಬರುತ್ತಿವೆ ಅಲ್ಮೆಲ್ ತಾಲೂಕಿಗೆ ಸೇರಿರುವ ಈ ಗ್ರಾಮವನ್ನು ಸಿಂದಗಿ ತಾಲೂಕಿನಲ್ಲೇ ಇರುವ ಹಾಗೆ ಮಾಡಿ ಎಂದು ಶಾಸಕ ರಮೇಶ್ ಭೂಸನೂರ ಅವರಿಗೆ ವೇದಿಕೆ ಮೇಲೆ ಸಮಸ್ತ ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಂಡರು.
ಮನವಿಗೆ ಉತ್ತರಿಸಿದ ಶಾಸಕ ಭೂಸನೂರ ನೂತನ ಅಲಮೇಲ್ ತಾಲೂಕಿಗೆ ಸೇರಿರುವ ಹಳ್ಳಿಗಳು ಸಿಂದಗಿ ತಾಲೂಕಿನಲ್ಲೇ ಉಳಿದರೆ ಆಲಮೇಲ್ ತಾಲೂಕು ಆಗಲು ಸಾಧ್ಯವಿಲ್ಲ ಕಾರಣ ಮೋರಟಗಿ ಹಾಗೂ ಬಳಗಾನೂರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿಸುವುದು ನನ್ನ ಜವಾಬ್ದಾರಿ ಮಾಡೇ ತಿರುತ್ತೇನೆ ಎಂದು ಭರವಸೆ ನೀಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಶ್ರೀಕ್ಷೇತ್ರ ಹುಲಿಜಂತಿ ಪಟ್ಟದ ಪೂಜ್ಯರಾದ ಮಹಾಲಿಂಗರಾಯ ಮಹಾರಾಜರು ಹಾಗೂ ಓಬಿಸಿ ತಾಲೂಕ ಅಧ್ಯಕ್ಷ ರವಿಕಾಂತ ನಾಯ್ಕೋಡಿ ಮಾತನಾಡಿದರು.
ಡೊಳ್ಳಿನ ಗಾಯನ ಸ್ಪರ್ಧೆ:
ಜಾತ್ರಾ ನಿಮಿತ್ತವಾಗಿ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಕಲಾವಿದ ಮೈಬೂಬಸಾಬ ಹಾಗೂ ಕಲಗುರ್ಕಿ ಗ್ರಾಮದ ಕುಮಾರಿ ಲಕ್ಷ್ಮಿ ಪೂಜಾರಿ ನಡುವೆ ಜಿದ್ದಾಜಿದ್ದಿನ ಗಾಯನಗಳು ಬೆಳಿಗ್ಗೆ 11 ಘಂಟೆಗೆ ಪ್ರಾರಂಭವಾದ ಡೊಳ್ಳಿನ ಗಾಯನ ಸ್ಪರ್ಧೆ ಸಾಯಂಕಾಲ 5 ಘಂಟೆಯವರೆಗೆ ಜನಮನ ಸೆಳೆದು ಎರಡು ತಂಡಗಳು ಸರಿಸಮಾನವಾಗಿ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶ್ರೀ ಬಿಳಿಯನಸಿದ್ದ ಒಡೆಯರ್ ಶ್ರೀ ರಾವತ್ರಾಯ ದೇವರು ಸಾನ್ನಿಧ್ಯ ವಹಿಸಿದ್ದರು ಗ್ರಾ. ಪಂ. ಅಧ್ಯಕ್ಷ ಬಸಲಿಂಗಪ್ಪಸಾಹು ಬೋನಾಳ, ಮಾಜಿ ಜಿ. ಪಂ. ಸದಸ್ಯ ಎನ್, ಆರ್, ತಿವಾರಿ, ನಿಂಗನಗೌಡ ಬಿರಾದಾರ, ಕಲ್ಪವೃಕ್ಷ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಮಾಜಿ ತಾ. ಪಂ. ಅಧ್ಯಕ್ಷ ಶಿವರಾಯ ಹಿಪ್ಪರಗಿ, ಮಾಜಿ ತಾ. ಪಂ. ಸದಸ್ಯ ಮಡಿವಾಳಪ್ಪ ಬೋನಾಳ, ಜಿ, ಕೆ, ನೆಲ್ಲಗಿ, ನಿಂಗನಗೌಡ ಪಾಟೀಲ, ಅಮ್ಮಣ್ಣ ವಾಲಿಕಾರ,ಇನಾಯತ್ ದೊಡಮನಿ, ಸುಬ್ಬುರಾವ ಗಾಯತ್ರಿ, ಡಾ. ಶ್ರೀಶೈಲ್ ಕೋಣಶಿರಸಗಿ, ಭೂತಾಳಿ ಖಾನಾಪುರ, ಸೇರಿದಂತೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಗ್ರಾಮಸ್ಥರು ಇದ್ದರು.