ಕವನ: ತಾಯಿಯ ಮಡಿಲು

Must Read

ತಾಯಿಯ ಮಡಿಲು

ಅಮ್ಮ ನಿನ್ನ ಮಡಿಲು ಅಮೃತದ ಒಡಲು
ಅಲ್ಲೇ ಕಂಡೆ ನಾ ಸುಖ ಶಾಂತಿಯ ಕಡಲು||ಪ||

ಹಗಲಿರುಳು ನನಗಾಗಿ ಚಿಂತಿಸಿದವಳು
ಧೈರ್ಯದ ಪಾಠ ನನಗೆ ಹೇಳಿದವಳು
ಮೋಸˌ ವಂಚನೆಗೆ ಸಿಡಿದೆದ್ದವಳು
ಚಂದಾಂಗಿ ಬದಕಲು ಕಲಿಸಿದವಳು.||೧॥

ಎದೆಬಸಿದು ಅಮೃತ ಕುಡಿಸಿದವಳು
ಕಷ್ಟ ˌಕಾರ್ಪಣ್ಶಕ್ಕೆ ಎದೆಗೊಟ್ಟವಳು
ಶ್ರಮಪಟ್ಟು ನೀ ನನಗೆ ನೆರಳಾದವಳು
ನೋವನ್ನು ನುಂಗಿ ನನಗೆ ನಗು ಕಲಿಸಿದವಳು॥೨॥

ಜೋಗುಳ ಪದ ಹಾಡಿ ಮಲಗಿಸಿದವಳು
ಮಮತೆಯ ಮಡಿಲಲ್ಲಿ ಬೆಳೆಸಿದವಳು
ದೇವರಿಗೆ ಹರಕೆ ಹೊತ್ತು ಹಲುಬಿದವಳು
ಲೋಕಕ್ಕೆ ಮೋದಲು ಗುರುವಾದವಳು॥೩॥


ಶ್ರೀ ಬಸವರಾಜ ಪ.ಕೋಟಿ, ಶಿಕ್ಷಕರು,
ಎನ್ ಎಸ್ ಎಫ್ ಪ್ರಾ ಶಾ.ಕುಲಗೋಡ.
ತಾ.ಮೂಡಲಗಿ.ಜಿ.ಬೆಳಗಾವಿ
ಮೋ—೯೭೩೧೫೭೮೪೨೧

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group