ಮೇ 22 ರಂದು ವಿದ್ಯಾಪೀಠದಲ್ಲಿ ‘ಹರಿದಾಸ ಮಿಲನ –ದುರಿತ ಶಮನ’

Must Read

ಬೆಂಗಳೂರು – ಹರಿದಾಸರ ಮಿಲನ ಹಾಗೂ ದಾಸೋಪಾಸನ ಮತ್ತು ಚಿಪ್ಪಗಿರಿ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಇದೇ ಮೇ 22 ಕ್ಕೆ ಬೆಂಗಳೂರಿನ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮೂಲಬೃಂದಾವನ ಸನ್ನಿಧಿಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಬೆಳಗ್ಗೆ 10.00 ರಿಂದ ರಾತ್ರಿ 8 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ವೇದೋಪನಿಷತ್ತು ಸಾರವನ್ನು ಸರಳಗನ್ನಡದಲ್ಲಿ ತಿಳಿಸಿದ ಹರಿದಾಸರು ಈ ನೆಲದ ಆಸ್ತಿ. ಇಂತಹ ದಾಸಶ್ರೇಷ್ಠರನ್ನು ನೆನಯುವ ವಿನೂತನ ಕಾರ್ಯಕ್ರಮ ‘ಹರಿದಾಸ ಮಿಲನ –ದುರಿತ ಶಮನ’ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆಯುವ ಈ ಜ್ಞಾನ ಯಜ್ಞದಲ್ಲಿ ,ಅನುಗ್ರಹ ಸಂದೇಶ ,ವಿದ್ವಾಂಸರ ಉಪನ್ಯಾಸ ಹಾಗೂ ಸಂಗೀತ ಕಲಾವಿದರಿಂದ ಗಾನ ವೈಭವ ನಡೆಯವುದು ಹಾಗೆಯೇ ಶ್ರೀಗಳ ಅಮೃತ ಹಸ್ತದಿಂದ 120 ಗಾಯಕ – ಗಾಯಕಿಯರಿಗೆ, 20 ಜನ ಹಿರಿಯರಿಗೆ , 10 ಜನ ಚಿಕ್ಕ ಮಕ್ಕಳಿಗೆ ಸನ್ಮಾನ ಮಾಡಲಾಗುವುದು.

‘ದಾಸ ತಪಸ್ವಿ ಶ್ರೀವಿಜಯ ವಿಠ್ಠಲ ಪ್ರಶಸ್ತಿ’ ಪತ್ರವನ್ನು ಕೊಟ್ಟು ಗೌರವಿಸಲಿದ್ದಾರೆ. ಎಲ್ಲ ಅಧ್ಯಾತ್ಮ ಬಂಧುಗಳು ಈ ಪವಿತ್ರೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಂಸ್ಥಾಪಕರಾದ ಡಾ ಆರ್. ಪಿ.ಕುಲಕರ್ಣಿ ಮತ್ತು ಕಾರ್ಯದರ್ಶಿ ಶ್ರೀ ಸುರೇಶ ಕಲ್ಲೂರ ಕೋರಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group