spot_img
spot_img

ಮೇ 22 ರಂದು ಕೋಣನಕುಂಟೆಯಲ್ಲಿ 18 ಅಡಿ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ

Must Read

ಬೆಂಗಳೂರು ಚುಂಚಘಟ್ಟ ರಸ್ತೆಯ ಕೋಣನಕುಂಟೆಯ ತಿರುಮಲಾಧೀಶ ಶ್ರೀನಿಧಿ ಶ್ರೀನಿವಾಸನ ದಿವ್ಯ ಸನ್ನಿಧಾನದಲ್ಲಿ ನೂತನವಾಗಿ ಶ್ರೀ ಭೂವರಾಹ, ಶ್ರೀ ಹಯಗ್ರೀವ , ಶ್ರೀ ಮಹಾಲಕ್ಷ್ಮೀ ಹಾಗೂ 18 ಅಡಿ ಎತ್ತರದ ಭವ್ಯವಾದ ಶ್ರೀ ಮುಖ್ಯ ಪ್ರಾಣ ದೇವರ (ಆಂಜನೇಯ) ಸ್ಥಿರಬಿಂಬಗಳ ಆಗಮೋಕ್ತ ಪ್ರತಿಷ್ಠಾಪನಾ ಮಹೋತ್ಸವವನ್ನು ಇದೇ ಮೇ 22 ರಂದು ಅಯೋಜಿಸಲಾಗಿದೆ.

ಶ್ರೀಮದುತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಗ್ರಹಗಳ ಪ್ರತಿಷ್ಠಾಪನೆ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ . 18 ಅಡಿ ಆಂಜನೇಯನ ಏಕಶಿಲಾ ವಿಗ್ರಹವನ್ನು ಖ್ಯಾತ ಶಿಲ್ಪಿ ಶಂಕರ ಸ್ಥಪತಿ ನಿರ್ಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಅನೇಕ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾಜಕೀಯ – ಧಾರ್ಮಿಕ- ಸಾಮಾಜಿಕ – ಶೈಕ್ಷಣಿಕ ಕ್ಷೇತ್ರದ ಗಣ್ಯರು ಭಾಗವಹಿಸುವರು ಎಂದು ದೇವಾಲಯ ಸಮಿತಿಯ ಡಾ.ಕೆ.ಎಸ್.ಸಮೀರಸಿಂಹ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!