ಜವಾಬ್ದಾರಿ ಬದುಕಿನ ನಿರ್ವಹಣೆ ವಚನ ಪಾಲನೆಯಿಂದ ಸಾಧ್ಯ

0
218

ಬೆಳಗಾವಿ – ನಗರದ ಮಹಾಂತೇಶ ನಗರದ ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಸಾಮೂಹಿಕ ಬಸವ ಪ್ರಾರ್ಥನೆ ನೆರವೇರಿಸಲಾಯಿತು.

ವಿ.ಕೆ.ಪಾಟೀಲ,ಬಿ.ಪಿ.ಜೇವಣಿ, ಜಯಶ್ರೀ ಚಾವಲಗಿ, ಶ್ರೀಕಾಂತ ಶಾನವಾಡ ವಚನ ವಿಶ್ಲೇಷಣೆ ನಡೆಸಿಕೊಟ್ಟರು.

ಉಪನ್ಯಾಸಕರಾಗಿ ಆಗಮಿಸಿದ ಡಾ. ಗಜಾನಂದ ಸೊಗಲನ್ನವರ ಅವರು ಧರೆ ಹತ್ತಿ ಉರಿದಡೆ ನಿಲಬಹುದೇ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನಂಬಿಕೆ ವಿಶ್ವಾಸ ಇಟ್ಟಂತವರು ದಾರಿ ತಪ್ಪಿದರೆ ರಕ್ಷಕರೇ ಭಕ್ಷಕರಾದರೆ ಕಾಯುವವರೇ ಕೊಲ್ಲುವುದಾದರೆ ಸರಿ ದಾರಿಯಲ್ಲಿ ನಡೆಸಬೇಕಾದವರೇ ದಾರಿಗೆಡಿಸಿದರೆ ಮನುಷ್ಯನ ಬದುಕು ಸಾಗುವುದೆತ್ತ. ವ್ಯವಸ್ಥೆಯ ಉನ್ನತ ಶ್ರೇಣಿಯಲ್ಲಿರುವವರು , ಅಧಿಕಾರದ ಗದ್ದುಗೆ ಏರಿದವರು ಸರಿಯಾದ ಮಾರ್ಗದರ್ಶನ ಮಾಡದೆ ತಾವೇ ದುಷ್ಕೃತ್ಯ ಕೇಳಿದರೆ ಸಾಮಾನ್ಯರ ಬದುಕು ನಡೆಸುವುದು ಹೇಗೆ ಬಸವಾದಿ ಶರಣರು  ಅನುಭವಿಸಿದ ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ ಎಂಬ ವಚನದ ಸಾಲು ಸಾಮಾಜಿಕ ಹೊಣೆಗಾರಿಕೆಯನ್ನು ಜವಾಬ್ದಾರಿಯನ್ನು ನಿರ್ವಹಿಸುವ ನಾಯಕರನ್ನು ಎಚ್ಚರಿಸಬಲ್ಲ ಸಾಂವಿಧಾನಿಕ ಸೂತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯರ ಬದುಕು ಸರಳ ಸೂತ್ರದಲ್ಲಿ ಸರಿ ದಾರಿಯಲ್ಲಿ ಸಾಗಬೇಕಾದರೆ ಜವಾಬ್ದಾರಿ ಬದುಕಿನ ನಿರ್ವಹಣೆ ಮಾಡಲು ಬಸವಾದಿ ಪ್ರಮಥರು ವಚನಿಸಿದ ವಚನಗಳು ಅರುಹಿದ ನೀತಿಗಳ ಪಾಲನೆಯಿಂದ ಮಾತ್ರ‌ ಸಾಧ್ಯ ಎಂದರು. 

ಶಶಿಭೂಷಣ ಪಾಟೀಲ,ಆನಂದ ಕಕಿ೯,ಶೇಖರ ವಾಲಿ ಇಟಗಿ,ವಿರೂಪಾಕ್ಷ ದೊಡ್ಡಮನಿ,ಬಸವರಾಜ ಕರಡಿಮಠ, ಬಾಬು ತಿಗಡಿ,ಗುರುಸಿದ್ಧ ರೇವಣ್ಣವರ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣೆ ಮಹಾದೇವಿ ಅರಳಿ ವಚನ ಪ್ರಾರ್ಥನೆ ನೆರವೇರಿಸಿಕೊಟ್ಟರು. ಮಹಾಂತೇಶ ಮೆಣಶಿನಕಾಯಿ ಪರಿಚಯಿಸಿದರು.

ಸುರೇಶ ನರಗುಂದ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು.ಸದಾಶಿವ ದೇವರಮನಿ ಶರಣು ಸಮರ್ಪಿಸಿದರು.

ಶರಣ ಅನೀಲ ರಘಶೆಟ್ಟಿ ದಾಸೋಹ ಸೇವೆ ನೆರವೇರಿಸಿದರು.