- Advertisement -
ನಿನ್ನ ಮಡಿಲಲ್ಲಿ
ನಿನ್ನ ಮಡಿಲಲ್ಲಿ ಮಗುವಾಗುವಾಸೆ
ನೀನು ಲಾಲಿ ಹಾಡುವುದನು
ಕೇಳಿ ಮಲಗುವ ಆಸೆ
ಚಂದಿರನು ತೋರಿಸಿ ನಿನ್ನ ಕೈ
ತುತ್ತು ಉಣ್ಣುವ ಆಸೆ
ನಿನ್ನ ಮೇಲೆ ಕುಳಿತು ಅನೆ
ಅಂಬಾರಿ ಕೂಸುಮರಿ
ಎಂದು ಆಡುವ ಆಸೆ
ನಿನ್ನ ಅಕ್ಕರೆಯ ಮಾತು
ಕೇಳಲು ಚಂದ
ನಿನ್ನ ಹಾಡು ಕಿವಿಗಳಿಗೆ ಅಂದ
ನೀನು ಮುಡಿದಿರುವ ಮಲ್ಲಿಗೆ
ಎಲ್ಲೆಡೆ ಬೀರುವುದು ಕಂಪು
ಸಂಗೀತ ಸ್ವರಗಳ ಇಂಪು
ಅಪ್ಪಿ ಮುತ್ತು ಕೊಟ್ಟು
ಪ್ರೀತಿಯ ಕಂದಾ
ಎಂದು ಕರೆದಾಗ ನನಗೆ
ಸ್ವರ್ಗ ಸುಖ
- Advertisement -
ನಿನ್ನ ಸುಖ ದುಃಖವನ್ನು
ನಿವಾರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲ್ಲಿ ಸದಾ
ನಗುತ ಮಗುವಾಗುವಾಸೆ
*ಅಕ್ಕಮಹಾದೇವಿ ತೆಗ್ಗಿ*