- Advertisement -
ಹೋಳಿ ಹಬ್ಬ
ಚಿಕ್ಕವರು ದೊಡ್ಡವರ ಸಂಭ್ರಮದ ಓಡಾಟ
ದುಷ್ಟಶಕ್ತಿಯ ಮೇಲೆ ದೈವ ಶಕ್ತಿಯ ಗೆಲುವಿನಾಟ
ಆಚಾರ ಸಂಪ್ರದಾಯಗಳ ನೆನಪಿಸುವ ಪಾಠ
- Advertisement -
ತರಾವರಿ ಬಣ್ಣಗಳ ಪರಸ್ಪರ ಎರಚಾಟ
ಜಾತಿ ಭೇದವಿಲ್ಲದೆ ಒಂದಾಗಿ ಆಚರಿಸುವ ರಂಗಿನಾಟ
ಭಾವೈಕ್ಯತೆಯ ಸಂಗಮದ ಹರುಷದ ಓಕುಳಿಯಾಟ
- Advertisement -
ವಾಟರ್ಗನ್ ಬಲೂನ್ ಗಳ ಅದ್ಭುತ ನೋಟ
ಪರಸ್ಪರ ಶುಭಾಶಯಗಳ ವಿನಿಮಯದ ಕೂಟ
ಪ್ರೀತಿ ಸಂತೋಷದ ಕಾಮ ಮಹೋತ್ಸವ
ಬಿಳಿ ಉಡುಪುಗಳ ಧರಿಸಿ ನೃತ್ಯ ಸಂಗೀತೋತ್ಸವ
ಸಿಹಿ ಖಾದ್ಯಗಳ ಮೆಲ್ಲುವ ವಸಂತೋತ್ಸವ
ಮನಸ್ಸಿಂದ ಹೃದಯಗಳು ಬೆಸೆಯುವ ಪ್ರೇಮೋತ್ಸವ
ದುಃಖ ನೋವುಗಳ ಮರೆತು ಬಣ್ಣದಲ್ಲಿ ಮಿಂದೇಳುತ
ಕಾಮನ ಸುಂದರ ಪ್ರತಿಮೆಗೆ ಶೃಂಗರಿಸುತ್ತ
ಮೆರವಣಿಗೆಯಲ್ಲಿ ಮಂಗಳ ವಾದ್ಯಗಳ ಬಾರಿಸುತ್ತ
ಕಾಮನ ದಹಿಸಿ ಬೆಂಕಿ ಮುಂದಿನ ಕುಣಿತ
ಕಣ್ಮನ ಸೆಳೆದಿತ್ತ
ಗೀತಾ ಲೋಕೇಶ್, ಕಲ್ಲೂರು