ಬೀದರ – ಬೀದರ್ ಜಿಲ್ಲೆಯ ಕಮಲ ನಗರ ತಾಲೂಕಿನ ನಿಡೋದಾ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಸುಮಾರು ವರ್ಷಗಳಿಂದ ಹಾಳಾಗಿ ನಿಂತಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ ಘಟಕ ಹಾಳಾಗಿ ಸುಮಾರು ಎರಡು ವರ್ಷಗಳಾಗಿವೆ ಗ್ರಾಮ ಪಂಚಾಯತ ಪಿಡಿಒ ಅವರಿಗೆ ದೂರು ನೀಡಿದರೆ ಇವಾಗ ಮಾಡುತ್ತೇವೆ ಆವಾಗ ಮಾಡುತ್ತೇವೆ ಎಂದು ಹೇಳುತ್ತಾರೆ. ಮತ್ತೊಮ್ಮೆ ಅದು ನಮ್ಮ ಅಧೀನದಲ್ಲಿಲ್ಲ ಎಂದು ಹಾರಿಕೆಯ ಉತ್ತರ ಹೇಳುತ್ತಿದ್ದಾರೆ ಎಂದು ಜನರು ದೂರಿದ್ದು ಇದು ಯಾರ ಅಧಿನದಲ್ಲಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಮಳೆಗಾಲದಲ್ಲಿ ಅಶುದ್ಧ ನೀರು ಕುಡಿಯುವುದರಿಂದ ಜನರು ಕಾಲರಾ, ಮಲೇರಿಯಾ, ವಾಂತಿ ಭೇದಿ, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಶ್ರೀಮಂತ ಜನರು ಹಣಕೊಟ್ಟು ಶುದ್ಧ ನೀರು ಕುಡಿಯುತ್ತಾರೆ, ಆದರೆ ಬಡವರು ಮೊದಲೇ ಲಾಕ್ಡೌನ್ ನಿಂದ ಹೊಟ್ಟೆ ತುಂಬಿಕೊಳ್ಳುವುದು ಕಷ್ಟವಾಗಿದೆ. ಕಡುಬಡವರು ಹಣಕೊಟ್ಟು ಫಿಲ್ಟರ್ ನೀರು ಕುಡಿಯುವುದು ಸಾಧ್ಯವಿಲ್ಲ ಊರಿನಲ್ಲಿ ಸುಮಾರು ವರ್ಷಗಳಿಂದ ಕುಡಿಯುವ ನೀರು ಸಿಗದಂತಾಗಿದೆ.
ಕೂಲಿ ಕಾರ್ಮಿಕರು ಊರಿನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಒಂದು ಕೊಳವೆ ಬಾವಿಯಿಂದ ಕುಡಿಯುವ ನೀರು ತರುವಂತಹ ಪರಸ್ಥಿತಿ ನಿರ್ಮಾಣ ಆಗಿದೆ ಕೊಳವೆ ಬಾವಿ ಕೆಟ್ಟಹೋದರೆ ನಮಗೆ ಕುಡಿಯಲು ನೀರು ಸಿಗುವುದಿಲ್ಲ ಎಂದು ಗ್ರಾಮಸ್ಥರು ದೂರಿದರು.
ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಬೇಕೆಂದು ಗ್ರಾಮದ ನಿವಾಸಿಗಳು ಆಗ್ರಹಿಸಿದರು.