ನಾಡು ನುಡಿ ಸಂಸ್ಕೃತಿಗಳ ಬಗೆಗಿನ ಡೆಪ್ಯೂಟಿ ಚನ್ನಬಸಪ್ಪನವರ ಸೇವೆ ಅಜರಾಮರ – ಸಿದ್ಧರಾಮ ಮನಹಳ್ಳಿ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸವದತ್ತಿ: ಧಾರವಾಡದಲ್ಲಿ ಹುಟ್ಟಿ ಪುಣೆಯಲ್ಲಿ ಇಂಜನೀಯರಿಂಗ್ ಓದಿ ತಿರುಗಿ ಧಾರವಾಡಕ್ಕೆ ಬಂದು ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆಗೆ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ ಜೊತೆಗೆ ಕರ್ನಾಟಕ ಏಕೀಕರಣದಲ್ಲಿ ತಮ್ಮ ಹೋರಾಟವನ್ನು ಮಾಡಿದ ಡೆಪ್ಯೂಟಿ ಚನ್ನಬಸಪ್ಪನವರ ಸೇವೆ ಅಜರಾಮರ. ಅವರ ಡೆಪ್ಯೂಟಿ ಹುದ್ದೆಯಿಂದಲೇ ಅವರು ಡೆಪ್ಯೂಟಿ ಚನ್ನಬಸಪ್ಪನವರು ಎಂದೇ ಹೆಸರಾದರು. ನಮ್ಮ ಸೇವೆ ಯಾರು ನೋಡುತ್ತಾರೋ ಬಿಡುತ್ತಾರೋ ಎಂಬ ಪ್ರಶ್ನೆ ಬೇಡ ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಿದ್ದಾದರೆ ಅದಕ್ಕೆ ಪ್ರತಿಫಲ ಇದ್ದೇ ಇದೆ. ಶಿಕ್ಷಕ ವೃತ್ತಿ ಪವಿತ್ರವಾದದ್ದು ನಮ್ಮ ವೃತ್ತಿ ಬದುಕಿನ ಉದ್ದಕ್ಕೂ ಒಳ್ಳೆಯ ಸಿಬ್ಬಂದಿ ಶಿಕ್ಷಕರು ಸಿಕ್ಕಿದ್ದು ನನ್ನ ಸೇವೆಗೆ ಅನುಕೂಲವಾಯಿತು. ಇಂದಿಗೂ ನಿಮ್ಮೆಲ್ಲರ ಪ್ರೀತಿ ನಿವೃತ್ತಿ ನಂತರವೂ ದೊರೆಯುತ್ತದೆ ಎಂದರೆ ಅದಕ್ಕೆ ನಮ್ಮ ಸೇವಾ ಮನೋಭಾವ ಕಾರಣ. ಸೇವೆಯ ನಂತರವೂ ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನನಗೆ ಅವಕಾಶ ಸಿಕ್ಕಿದೆ.ಸೇವೆಯ ನಿವೃತ್ತಿ ನಂತರವೂ ಒಂದು ಸೇವೆ. ಹೀಗೆ ಈಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿದೆ.ನವ ಮನ್ವಂತರದ ಕಾಲ ತಂತ್ರಜ್ಞಾನ ಆಧಾರಿತ ಬದುಕು ಕೂಡ ಬರುತ್ತಿದೆ ಎಲ್ಲದಕ್ಕೂ ಹೊಂದಿಕೊಂಡು ಮೌಲಿಕ ಶಿಕ್ಷಣ ನೀಡುವ ಜೊತೆಗೆ ತಾಲೂಕಿನ ಶೈಕ್ಷಣಿಕ ರಂಗದಲ್ಲಿ ಎಲ್ಲರೂ ಉತ್ತಮ ಶಿಕ್ಷಣ ಮಕ್ಕಳಿಗೆ ನೀಡಿ. ಮಕ್ಕಳಿದ್ದರೆ ನಾವು ಎಂಬುದನ್ನು ಮರೆಯಬಾರದು ಎಂದು ವಿಶ್ರಾಂತ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಿರ್ದೇಶಕರು ಶ್ರೀ ಬಸವೇಶ್ವರ ಹ್ಯೂಮನ್ ರಿಸರ್ಚ ಅಂಡ ಡೆವಲಪಮೆಂಟ್ ಬಿ.ವ್ಹಿ.ವ್ಹಿ. ಸಂಘ ಬಾಗಲಕೋಟೆಯ ಸಿದ್ದರಾಮ ಮನಹಳ್ಳಿಯವರು ಮಾತನಾಡಿದರು.

ಅವರು ಸವದತ್ತಿಗೆ ಅನಿರೀಕ್ಷಿತವಾಗಿ ಆಗಮಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗೌರವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

- Advertisement -

ಇದೇ ಸಂದರ್ಭದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಉಪನಿರ್ದೇಶಕ ಎಸ್.ಬಿ.ಕೊಡ್ಲಿ. “ ನನ್ನ ಸವದತ್ತಿಯಲ್ಲಿನ ಸೇವೆ ಮರೆಯಲಾಗದ್ದು,ತಾಯಿ ರೇಣುಕಾದೇವಿಯ ಆರಾಧಕನಾಗಿದ್ದ ನನಗೆ ಋಣಾನುಬಂಧವೋ ಏನೋ ನನ್ನ ಜೀವನದಲ್ಲಿ ಸವದತ್ತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಪ್ರಭಾರಿ ತಾಲೂಕಾ ಕಾರ್ಯನಿರ್ವಾಹಕನಾಗಿ ಸೇವೆ ಸಲ್ಲಿಸುವ ಭಾಗ್ಯ ದೊರಕಿತ್ತು.ಅಂದಿನಿಂದ ಇಂದಿನವರೆಗೂ ಇಲ್ಲಿನ ಶಿಕ್ಷಕರ ಒಡನಾಟ ನಿರಂತರವಾಗಿದ್ದು ಮರೆಯಲಾಗದ್ದು. ಕಂಬೋಗಿಯವರು ನಮ್ಮ ಒಡನಾಡಿ ಧಾರವಾಡದಲ್ಲಿ ಇದ್ದಾಗ ಅವರೊಂದಿಗೆ ಸೇವೆ ಸಲ್ಲಿಸುವ ಸಂದರ್ಭ ಒದಗಿ ಬಂತು.ಈಗ ಅವರು ಸವದತ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಂದು ಸಮಯಕ್ಕೆ ಸರಿಯಾಗಿ ಶಿಕ್ಷಕರ ವೇತನ ಕಾಲಾನುಮಿತಿ ಬಡ್ತಿ ನೀಡುವ ಜೊತೆಗೆ ಶೈಕ್ಷಣಿಕ ಮಾರ್ಗದರ್ಶನ ನೀಡುತ್ತಿರುವುದು ಸಂತಸದ ಸಂಗತಿ ಮುಂಬರುವ ದಿನಗಳಲ್ಲಿ ಕೂಡ ಅವರ ಗುಣಾತ್ಮಕ ಶಿಕ್ಷಣದ ಸೇವೆ ಈ ತಾಲೂಕಿನ ಶಿಕ್ಷಕ ಬಳಗಕ್ಕೆ ದೊರೆಯುವ ಮೂಲಕ ಶೈಕ್ಷಣಿಕವಾಗಿ ಸವದತ್ತಿ ತಾಲೂಕು ಇನ್ನೂ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ ಮಾತನಾಡಿ , ದಾರವಾಡದಲ್ಲಿ ಇದ್ದಾಗ ಮನಹಳ್ಳಿ ಸಾಹೇಬರು ಮತ್ತು ಕೊಡ್ಲಿ ಸಾಹೇಬರ ಜೊತೆಗಿನ ತಮ್ಮ ಸೇವೆಯ ದಿನಗಳನ್ನು ಮೆಲಕು ಹಾಕಿ ಸವದತ್ತಿ ತಾಲೂಕಿನ ಜ್ಞಾನ ಸಂಗಮ ಕಾರ್ಯಕ್ರಮದಲ್ಲಿ ವಿಶ್ರಾಂತ ನಿರ್ದೇಶಕರಾದ ಸಿದ್ದರಾಮ ಮನಹಳ್ಳಿಯವರ ಮಾರ್ಗದರ್ಶನದ ನುಡಿಗಳು ಇಡೀ ತಾಲೂಕಿನ ಶಿಕ್ಷಕ ಸಮುದಾಯಕ್ಕೆ ದಾರಿದೀಪವಾಗಿದ್ದು.ಅವರ ಜೊತೆಗೆ ಕೊಡ್ಲಿ ಸಾಹೇಬರ ಈ ತಾಲೂಕಿನ ಸೇವೆಯನ್ನು ಇಂದಿಗೂ ತಾಲೂಕಿನ ಶಿಕ್ಷಕರು ನೆನೆಯುವುದನ್ನು ಕಂಡಾಗ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಇರ್ವರೂ ಮಹನೀಯರು ಇಂದು ನಮ್ಮ ತಾಲೂಕಿನ ಭೇಟಿ ಸ್ಮರಣೀಯವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸುಪರಿಂಟೆಂಡೆಂಟ್ ಎಲ್.ಎಸ್.ಹಿರೇಮಠ.ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ.ಎಫ್.ಎಚ್.ಮಾವುತ.ಬಿಎಚ್.ಮಾಳಗಿ.ಎನ್.ಎಸ್.ವಗೆನ್ನವರ.ಎಸ್.

ಎಲ್ಲಕಾಶಪ್ಪಗೋಳ.ಕೊಟ್ರೇಶ ಗೊಲ್ಲಾರಹಟ್ಟಿ.ಪ್ರಶಾಂತ ಮೋಟೆಕರ.ವಿದ್ಯಾ ಗಾಣಗಿ. ಐ.ಎಂ.ಮಕಾನದಾರ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ.ಬಿ.ಐ.ಇ.ಆರ್.ಟಿಗಳಾದ ವೈ.ಬಿ.ಕಡಕೋಳ.ಎಂ.ಎಂ.ಸಂಗಮ. ಸಿ.ವ್ಹಿ.ಬಾರ್ಕಿ.ಎಸ್.ಬಿ.ಬೆಟ್ಟದ. ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಜಿ.ಎಂ.ಕರಾಳೆ ವಂದಿಸಿದರು.


ವರದಿ: ವೈ.ಬಿ.ಕಡಕೋಳ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು ಸವದತ್ತಿ

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!