ಮನೆಯಲ್ಲಿಯೇ ಕೊರೋನಾ ಟೆಸ್ಟ್ ಮಾಡಿಕೊಳ್ಳಿ !

0
1265

ಈಗ ಮನೆಯಲ್ಲಿ ಯೇ ಕುಳಿತು ನೀವೇ ನಿಮ್ಮ ಕೊರೋನಾ ಟೆಸ್ಟ್ ಮಾಡಿಕೊಳ್ಳುವ ಕೋವಿಶೆಲ್ಫ್ ಎಂಬ ಉಪಕರಣವೊಂದಕ್ಕೆ ಭಾರತೀಯ ಮೆಡಿಕಲ್ ರೀಸರ್ಚ್ ಸೆಂಟರ್ ಅನುಮತಿ ನೀಡಿದೆ.

ಈ ಉಪಕರಣದಿಂದ ಕೇವಲ ೧೫ ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಕೊಳ್ಳಬಹುದು.

ಕೋವಿಡ್ ಪರೀಕ್ಷೆಯ ಕಿಟ್ ಒಂದು ಪೌಚ್ ನಲ್ಲಿ ಬರುತ್ತದೆ. ಮೊದಲು ಒಂದು ಆ್ಯಪ್ ಡೌನ್ ಲೋಡ ಮಾಡಿಕೊಳ್ಳಬೇಕು. ಆಮೇಲೆ ಪೌಚ್ ನಲ್ಲಿಯ ಒಂದು ಕಡ್ಡಿಯಿಂದ ವ್ಯಕ್ತಿಯ ಮೂಗಿನ ಎರಡೂ ಹೊಳ್ಳೆಗಳಲ್ಲಿ ಆಡಿಸಿ ಅದನ್ನು ಕಿಟ್ ಜೊತೆಗೆ ಕೊಟ್ಟಿರುವ ಒಂದು ಚಿಕ್ಕ ಬಾಟಲಿಯಲ್ಲಿ ಹಾಕಿ ಅಲುಗಾಡಿಸಬೇಕು. ನಂತರ ಅದರ ಎರಡು ಹನಿಗಳನ್ನು ಕಿಟ್ ಜೊತೆ ಕೊಟ್ಟಿರುವ ಒಂದು ಸ್ಟ್ರಿಪ್ ಮೇಲೆ ಹಾಕಬೇಕು.

೧೫ ನಿಮಿಷಗಳ ನಂತರ ಸಿ ಎಂದು ತೋರಿಸಿದರೆ ಕೊರೋನಾ ನೆಗೆಟಿವ್ ಇರುತ್ತದೆ.

ಒಂದು ವಾರದ ನಂತರೀ ಕಿಟ್ ಭಾರತೀಯ ಮಾರುಕಟ್ಟೆಗೆ ಬರಲಿದೆ ಇದರ ಬೆಲೆ ಕೇವಲ ೨೫೦ ರೂ. ಗಳು ಎಂದು ಪುಣೆ ಮೂಲದ ಮೈಲ್ಯಾಬ್ ವೈದ್ಯಕೀಯ ಮಂಡಳಿಯ ನಿರ್ದೇಶಕರೊಬ್ಬರು ಝೀ ಮಿಡಿಯಾಕ್ಕೆ ವಿವರಿಸಿದ್ದಾರೆ.