ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಆರೋಗ್ಯ ಶಿಬಿರ

Must Read

ಸಿಂದಗಿ: ಪ್ರತಿಯೊಬ್ಬರು ಆರೋಗ್ಯದಿಂದ ಇರಬೇಕು ಎಂದರೆ ನೀವೂ ಆರು ತಿಂಗಳಿಗೊಮ್ಮೆ ಬಿ.ಪಿ ಹಾಗೂ ಶುಗರ್ ತಪಾಸಣೆ ಮಾಡಿಸಿಕೊಳ್ಳಬೇಕು. ಆದ್ದರಿಂದ ಸಿಂದಗಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ನಿಮ್ಮ ಊರಿಗೆ ಬಂದಿರುತ್ತದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಂಗಮ ಸಂಸ್ಥೆಯ ಕಾರ್ಯಕರ್ತೆ ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ಕರೆ ನೀಡಿದರು.

ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ಸಂಗಮ ಸಂಸ್ಥೆಯ ಹಾಗೂ ತಾಲೂಕ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ಆರೋಗ್ಯ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕ ಆರೋಗ್ಯ ಶಿಕ್ಷಣ ಅಧಿಕಾರಿ ಎಸ್.ಡಿ ಕುಲಕರ್ಣಿ ಮಾತನಾಡಿ, ಇಂದು ಅನೇಕ ಕುಲಶಿತ ಆಹಾರ ಸೇವನೆಯಿಂದ ಆರೋಗ್ಯವನ್ನು ಸುಧಾರಣೆ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಚೈತನ್ಯ ಮತ್ತು ತುಂಬಾ ಹುಮ್ಮಸ್ಸಿನಿಂದ ಇರಲು, ಆರೋಗ್ಯವಂತರಾಗಿ ಇರಬೇಕು. ಇವತ್ತಿನ ದಿನ ತುಂಬಾ ಜನರು ಕ್ಯಾನ್ಸರ್ ದಿಂದ ಸಾವನ್ನಪ್ಪುತ್ತಿದ್ದಾರೆ ಇದನ್ನು ತಡೆಗಟ್ಟುವುದಕ್ಕೋಸ್ಕರ ಇಂದು ಪ್ರತಿ ಜನರಲ್ಲಿ ಕ್ಯಾನ್ಸರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ಕ್ಯಾನ್ಸರ್ ರೋಗದ ಲಕ್ಷಣಗಳು ಮೊದಲು ಶರೀರದ ಮೇಲೆ ಚಿಕ್ಕ ಚಿಕ್ಕ ಗಂಟುಗಳು ಕಾಣಿಸಿಕೊಳ್ಳುತ್ತ ಹೆಣ್ಣು ಮಕ್ಕಳಿಗೆ ಸ್ಥನ ಕ್ಯಾನ್ಸರ್ ಈ ರೀತಿ ಗಂಟುಗಳು ಕಂಡಾಗಲೇ ಪ್ರಥಮ ಚಿಕಿತ್ಸೆಯನ್ನು ಪಡೆದರೆ ಮಾತ್ರ ವಾಸಿಯಾಗಬಹುದು ಎಂದು ಸಲಹೆ ನೀಡಿದರು.

ಹಿರಿಯ ಚಿಕಿತ್ಸಾ ಮೇಲ್ವೀಚಾರಕರು ಡಾ. ಹಣಮಂತ ಕಲಾಲ ಮಾತನಾಡಿದರು. ಪ್ರತಿಯೊಬರು ಟಿ ಬಿ (ಕ್ಷಯ ರೋಗ) ದಿಂದ ಜಾಗೃತರಾಗಿರಬೇಕು. ಕ್ಷಯ ರೋಗದ ಲಕ್ಷಣ ಎಂದರೆ ಪದೇ ಪದೇ ಕೆಮ್ಮು ಬರುವುದು. ಒಬ್ಬ ವ್ಯಕ್ತಿಗೆ ಕೆಮ್ಮು 15 ದಿನಗಳಾದರೂ ವಾಸಿಯಾಗದೆ ಇರುವುದು ಹಾಗೂ ಕೆಮ್ಮುವಾಗ ಕಪದಲ್ಲಿ ರಕ್ತ ಬೀಳುವುದು ಈ ರೀತಿ ಕಂಡುಬಂದರೆ ತಕ್ಷಣ ಚಿಕಿತ್ಸೆಯನ್ನು ಪಡೆಯಲೇಬೇಕು ಇದರಿಂದ ಬೇಗ ಕ್ಷಯ ರೋಗದಿಂದ ಗುಣಮುಕ್ತರಾಗಬಹುದು. ಕ್ಷಯ ರೋಗಕ್ಕೆ ಸರ್ಕಾರಿ ಅಸ್ಪತ್ರೆಯಲ್ಲಿ ಉಚಿತ ಮಾತ್ರಗಳು ಕೊಡಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರಭು ಜಂಗಿನಮಠ ಮಲೇರಿಯಾ ಮೇಲ್ವೀಚಾರಕ ಪ್ರಕಾಶ ನಾಯಕ, ಶ್ರೀ ಮತಿ ಮಡಿವಾಳಮ್ಮ ಗದುಗಿನಮಠ, ನಾಗರಾಜ ಬಿರಾದಾರ, ಸಂಗಮ ಸಂಸ್ಥೆಯ ಸಂಯೋಜಕಿ ಪೃತ್ವಿ ಇದ್ದರು.

ಈ ಶಿಬಿರದಲ್ಲಿ ಬಿ.ಪಿ, ಶುಗರ್ ತಪಾಷಣೆ ಮಾಡಲಾಯಿತು. ವಿಜಯ ಬಂಟನೂರ ನಿರೂಪಿಸಿದರು. ಶ್ರೀಧರ ಕಡಕೊಳ ಸ್ವಾಗತಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group