Homeಸುದ್ದಿಗಳುಸಿಂದಗಿ ಕಸಮುಕ್ತವಾಗಲು ಸಹಕರಿಸಿ - ಶಾಸಕ ಮನಗೂಳಿ

ಸಿಂದಗಿ ಕಸಮುಕ್ತವಾಗಲು ಸಹಕರಿಸಿ – ಶಾಸಕ ಮನಗೂಳಿ

ಸಿಂದಗಿ:- ನಗರದ ಸ್ವಚ್ಛತೆಗಾಗಿ ಮನೆ ಮನೆಗೂ ಸ್ವಚ್ಛತಾ ಬಕೆಟ್ ನೀಡುತಿದ್ದು ವಾರ್ಡ್ ಗಳಲ್ಲಿ ಸ್ವಚತೆಯನ್ನು ಕಾಪಾಡಲು ಮೊದಲ ಹೆಜ್ಜೆ ಇದಾಗಿದೆ ಹಾಗೂ ಮುಂದಿನ ದಿನಮಾನಗಳಲ್ಲಿ  ಸಿಂದಗಿ ನಗರವನ್ನು ಕಸ ಮುಕ್ತ ನಗರವನ್ನಾಗಿಸಲು ನಗರ ನಿವಾಸಿಗಳ ಸಹಕಾರ ಬಹಳ ಮುಖ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ವಾರ್ಡ್ ನಂ 9 ರಲ್ಲಿ ಪುರಸಭೆಯ 2023-24 ನೇ ಸಾಲಿನ ನಿಧಿಯಲ್ಲಿ ಸ್ವಚ್ಛತೆಗಾಗಿ ಮನೆ ಮನೆಗೂ ಸ್ವಚ್ಛತಾ ಬಕೇಟ್‍ಗಳನ್ನು ವಿತರಣೆ ಮಾಡುವ ಮೂಲಕ ಅವರು ಮಾತನಾಡಿ, ಸಿಂದಗಿ ನಗರದ ಎಲ್ಲಾ ವಾರ್ಡಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಅದು ನನ್ನ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹಾಸೀಂಪಿರ ಆಳಂದ, ಪ್ರೊ. ಶಾಂತೂ ದುರ್ಗಿ, ಶ್ರೀನಿವಾಸ್ ಜೋಶಿ, ಮುಖಂಡರಾದ ಎಮ್,ಎ, ಸಿಂದಗಿಕರ, ಚಾಂದಸಾಬ ಕರ್ಜಗಿ, ರಹಿಮ ದುದನಿ, ಮೈಬೂಬ ಆಳಂದ, ಹುಸೇನ ಗುಂದಗಿ, ಆಮದಸಾಬ ಸಿಂದೆ, ಬುಡ್ಡಾ ದುದನಿ, ರಪೀಕ ಗಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group