ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು.
ಹೃದಯಾ ಕಾದಂಬರಿಯು ಶ್ರೀಮತಿ ಹೇಮಾ ಮಳಗಿ ಅವರ ದ್ವಿತೀಯ ಕಾದಂಬರಿಯಾಗಿದ್ದು , ಇದರಲ್ಲಿ ಸಾಮಾಜಿಕ ಪ್ರಜ್ಞೆ ರೂಪಿಸುವ ಪ್ರಜ್ಞೆಯಿದೆ. ರಾಷ್ಟ್ರ ಪಕ್ಷಿ ನವಿಲನ್ನು ತನ್ನ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಳ್ಳುವ ನಾಯಕಿ ಹೃದಯಾ ತನ್ನ ಜೀವನದ ನೋವು ನಲಿವುಗಳನ್ನು ಅದರೊಡನೆ ಹಂಚಿಕೊಳ್ಳುವ ಸುಂದರ ಚಿತ್ರಣ ಈ ಕೃತಿಯಲ್ಲಿದೆ. ಜೊತೆಗೆ ತನ್ನ ಪತಿ ಬೇರೊಬ್ಬರೊಡನೆ ಸಂಬಂಧ ಬೆಳೆಸಿದಾಗ ತನ್ನ ಕುಟುಂಬ ಜೀವನವನ್ನು ಹಾಳು ಮಾಡಿಕೊಳ್ಳದೆ
ಹಸುಗಳನ್ನು ಸಾಕಿ ಡೈರಿ ಆರಂಭಿಸಿ ಸ್ವಾವಲಂಬಿಯಾಗಿ ಹಲವಾರು ಜನರಿಗೆ ಉದ್ಯೋಗ ಕಲ್ಪಿಸುವ ನಾಯಕಿ ಹೃದಯಾ ಇಂದಿನ ಯುವಕರಿಗೆ ಆದರ್ಶ ಆಗುತ್ತಾಳೆ. ಲೇಖಕಿ ಹೇಮಾ ಮಳಗಿ ಓದುಗರಲ್ಲಿ ಪಕ್ಷಿ ಪ್ರೇಮ ,ಸ್ವಾವಲಂಬನೆಯ ಬದುಕು ಈ ಬಗ್ಗೆ ತಮ್ಮ ಕಾದಂಬರಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಇವರಿಂದ ಇನ್ನು ಉತ್ತಮ ಸಾಹಿತ್ಯ ಕೃತಿಗಳು ಬರಲಿ ಎಂದು ಹಾರೈಸುತ್ತೇವೆ
ಲೇಖಕಿ ಹೇಮಾ ಮಳಗಿ ಅವರು ಇದುವರೆಗೆ ಎರಡು ಕಾದಂಬರಿ ಹೊರತಂದಿ
ದ್ದು, ಸದ್ಯದಲ್ಲೇ ಮತ್ತೊಂದು ಕಾದಂಬರಿ ಹಾಗೂ ಎರಡು ಕವನ ಸಂಕಲನಗಳು ಹೊರಬರಲಿವೆ ತಮಗೆ ಸಾಹಿತ್ಯ ಪ್ರಕಟಣೆಯಲ್ಲಿ ಸಹಕಾರ ನೀಡುತ್ತಿರುವ ಮೈಸೂರಿನ ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್, ತಮ್ಮ ಪತಿ ಧೀರೇಂದ್ರ ಮಳಗಿ, ತಮ್ಮ ಸಾಹಿತ್ಯದ ನೂರಾರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನಮ್ಮವರು ಕನ್ನಡ ಬಳಗದ ಅಧ್ಯಕ್ಷರಾದ ಬಸವರಾಜ ಹಿರೇಮಠ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.