ಮೂಡಲಗಿ: ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಸುಭಾಸ ಸೋನವಾಲ್ಕರ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಮೂಡಲಗಿ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೈಂಕರ್ಯವನ್ನು ಮಾಡುತ್ತಿರುವದು ಸ್ತುತ್ಯರ್ಹವಾದದ್ದು, ಸಂಸ್ಥೆ ಹೀಗೆ ಶ್ರೇಯೋಭಿವೃದ್ದಿ ಹೊಂದಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಾಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಮುಖಂಡರು ನೀಡಿದ ಮನವಿಗೆ ಉತ್ತರಿಸಿದ ಸಚಿವರು, ಮೂಡಲಗಿಯೂ ತಾಲೂಕು ಸ್ಥಳವಾಗಿದ್ದು, ಇಲ್ಲಿ ಹೈಟೆಕ್ ಬಸ್ ಡಿಪೋ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿದ ಅವರು ಸರಕಾರದ ಜತೆ ಗ್ರಾಮಸ್ಥರು, ಸಾರ್ವಜನಿಕರು ಕ್ಯಜೋಡಿಸಿ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ದಿಪಡಿಸಬೇಕು. ಇದರಿಂದ ಬಡ ಮಕ್ಕಳಿಗೆ ಸಹಾಯಕವಾಗುವದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ವೇದಿಕೆಯ ಮೇಲೆ ಸಂಸ್ತೆಯ ನಿರ್ದೇಶಕರಾದ ಎ.ಟಿ.ಗಿರಡ್ಡಿ, ಬಿ.ಎಚ್.ಸೋನವಾಲ್ಕರ, ಪಿ.ಆರ್.ಲಂಕೆಪ್ಪನ್ನವರ, ವಿ.ಟಿ.ಸೋನವಾಲ್ಕರ, ಎ.ಐ.ಸತರಡ್ಡಿ, ಮುಖಂಡರಾದ ಎಸ್.ಆರ್.ಸೋನವಾಲ್ಕರ, ಪ್ರಕಾಶ ಸೋನವಾಲ್ಕರ, ಕೃಷ್ಣ ರೆಡ್ಡಿ, ಪ್ರಾಚಾರ್ಯ ಪ್ರೊ. ಸಂಗಮೇಶ ಗುಜಗೊಂಡ ಮತ್ತಿತರರು ಉಪಸ್ಥಿತರಿದ್ದರು.