Home Remedies For Fair Skin In Kannada- ಮನೆಮದ್ದಿನಿಂದ ಹೊಳಪಾಗಿ

Must Read

Home Remedies For Fair Skin In Kannada

ಈಗಿನ ಕಾಲದಲ್ಲಿ ಕಲುಷಿತ ವಾತಾವರಣ, ಆಚೆಯ ಧೂಳು, ಆಹಾರ ಪದ್ಧತಿ,,, ಜೀವನ ಶೈಲಿಯಿಂದ ಎಲ್ಲರ ಮುಖದಲ್ಲೂ ಮೊಡವೆಗಳು ಕಪ್ಪು ಕಲೆಗಳು ಸಾಮಾನ್ಯ ತೊಂದರೆಗಳಾಗಿವೆ.,, ಅದರಲ್ಲೂ ಆಚೆಯ ಧೂಳು ಹೊಗೆಯಿಂದ ಮುಖವು ತುಂಬಾ ಕಪ್ಪಾಗಿ ಆಗುತ್ತದೆ.,, ಇನ್ನು ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ವಾತಾವರಣವು ಬದಲಾದಾಗ ಮುಖದಲ್ಲಿ ಮೊಡವೆಗಳು ಕಪ್ಪು ಕಲೆಗಳು ಮುಖದ ಕಳೆ ಕಡಿಮೆಯಾಗುವುದು ಮುಖ ಡ್ರೈಯಾಗುವುದು ಮುಖದ ಚರ್ಮವು ಬಿಳಿ ಬಿಳಿಯಾಗಿ ಆಗುವುದು ಹೀಗೆಲ್ಲಾ ಆಗುತ್ತದೆ..

ಇದಕ್ಕೆ ಕಾರಣಗಳು ಅವರು ಪ್ರತಿನಿತ್ಯ ಬಳಕೆ ಮಾಡುವ ಸೌಂದರ್ಯ ಪದಾರ್ಥಗಳು ಸಹ ಕಾರಣವಾಗಿರಬಹುದು. ಪ್ರತಿನಿತ್ಯವೂ ಒಳ್ಳೆಯ ಪ್ರಮಾಣದಲ್ಲಿ ನೀರನ್ನು ಕುಡಿದರೆ ಚರ್ಮದ ಸಮಸ್ಯೆಗಳು ಇರುವುದಿಲ್ಲ.,, ಇದರ ಜೊತೆಗೆ ಇಲ್ಲಿರುವ ಫೇಸ್ ಪ್ಯಾಕ್ ಅನ್ನು ನೀವು ಉಪಯೋಗಿಸಿದರೆ ಮೊಡವೆಗಳು ಕಪ್ಪು ಕಲೆಗಳು ಚರ್ಮ ಡ್ರೈಯಾಗುವುದು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ… ಹಾಗೆ ಇದು ಮುಖವನ್ನು ಹೊಳಪಾಗಿ ಕಾಂತಿಯುತವಾಗಿ ಮಾಡುತ್ತದೆ.

ಒಂದು ಕಪ್ ನಲ್ಲಿ 1 ಚಮಚ ಕಡಲೆಹಿಟ್ಟು,,, ¼ ಚಮಚ ಕಸ್ತೂರಿ ಅರಿಶಿಣ ಅಥವಾ ಅಡುಗೆಯಲ್ಲಿ ಬಳಸುವ ಅರಿಶಿಣ, ½ ಚಮಚ ಶ್ರೀಗಂಧದ ಪುಡಿ,,, ½ ಚಮಚ ಅಲೋವೆರಾ ಜೆಲ್, ½ ಚಮಚ ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು… ಮಿಶ್ರಣ ಮಾಡಿದ ನಂತರ ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಒಂದು ಟವಲ್ ನಿಂದ ಡ್ರೈ ಮಾಡಿ ಮಾಡಿಟ್ಟುಕೊಂಡಿರುವ ಪ್ಯಾಕನ್ನು 20 ನಿಮಿಷಗಳ ಕಾಲ ಹಚ್ಚಿಕೊಂಡು ಅದು ಡ್ರೈ ಆದಮೇಲೆ ತಣ್ಣೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.

ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ನಿಮ್ಮ ಮುಖವು ಹೊಳಪಾಗಿ ಕಾಂತಿಯುತವಾಗಿ ಮಾಡುತ್ತದೆ. ಹಾಗೆ ಮೊಡವೆಗಳು ಕಪ್ಪು ಕಲೆಗಳನ್ನು ಸಹ ದೂರ ಮಾಡುತ್ತದೆ.. ಕಡಲೆಹಿಟ್ಟು ಡೆಡ್ ಸ್ಕಿನ್ ಮೊಡವೆಗಳನ್ನು ನಿವಾರಿಸುತ್ತದೆ,, ಅರಿಶಿಣ ಮುಖವನ್ನು ಕಾಂತಿಯುತವಾಗಿ ಮಾಡಿಸಿ ಮೊಡವೆಗಳನ್ನು ಕಡಿಮೆ ಮಾಡುತ್ತದೆ,,, ಶ್ರೀಗಂಧದ ಪುಡಿ ಮುಖದ ಮೇಲಿರುವ ಮೊಡವೆಗಳು ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ, ಅಲೋವೆರಾ ಜೆಲ್ ಮೊಡವೆಗಳನ್ನು ಕಡಿಮೆ ಮಾಡಿಸಿ ಚರ್ಮವನ್ನು ತುಂಬ ಮೃದುವಾಗಿ ಮಾಡಿಸುತ್ತದೆ, ಇನ್ನೂ ಬಾದಾಮಿ ಎಣ್ಣೆ ಚರ್ಮ ಡ್ರೈ ಆಗುವುದನ್ನು ತಡೆಯುತ್ತದೆ.

ಈ ಫೇಸ್ ಪ್ಯಾಕ್ ಅನ್ನು 18 ವರ್ಷ ಮೇಲ್ಪಟ್ಟಿರುವ ವರು ಉಪಯೋಗಿಸಬೇಕು ಮತ್ತು ಹೆಂಗಸರು ಗಂಡಸರು ಇಬ್ಬರೂ ಕೂಡ ಬಳಸಬಹುದು. ,, ಆದರೆ ಯಾರಿಗೆ ಎಣ್ಣೆ ಚರ್ಮ ಇರುತ್ತದೆ ಅಂತಹವರು ಈ ಫೇಸ್ ಪ್ಯಾಕ್ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ. ಎಕೆಂದರೆ ಇದರಿಂದ ನಿಮ್ಮ ಮುಖವು ಇನ್ನೂ ಎಣ್ಣೆ ಎಣ್ಣೆ ಆಗುವ ಅವಕಾಶಗಳು ಇರುತ್ತವೆ…

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group