spot_img
spot_img

ತವರೂರು ವರವಟ್ಟಿ ಬಿ. ಗ್ರಾಮ ಮರೆತು ಬಿಟ್ಟ ಮಲ್ಲಿಕಾರ್ಜುನ ಖರ್ಗೆ

Must Read

spot_img
- Advertisement -

ಬೀದರ: ಗಡಿ ಜಿಲ್ಲೆ ಬೀದರ್ ಭಾಲ್ಕಿ ತಾಲೂಕಿನ ಚಿಕ್ಕ ಗ್ರಾಮ ವರವಟ್ಟಿ ಬಿ ಇದೀಗ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ.
ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತನ್ನ ತವರೂರಾದ ವರವಟ್ಟಿ ಗ್ರಾಮವನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ ಎಂದು ಹೇಳಬಹುದು.

ವರವಟ್ಟಿ ಬಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಹೇಗೆ ಇರಬಹುದು ಎಂದು ಇಡೀ ದೇಶದಾದ್ಯಂತ ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸಿದೆ.

ಶತಮಾನದ ಇತಿಹಾಸ ಹೊಂದಿರುವ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಛಾಪು ಮೂಡಿಸಿರುವ ಹಿರಿಯ ರಾಜಕೀಯ ಮುತ್ಸದ್ಧಿಯ ಹುಟ್ಟೂರು ಬೀದರ ಜಿಲ್ಲೆ ಎಂಬುದು ವಿಶೇಷ.

- Advertisement -

ಭಾಲ್ಕಿ ತಾಲೂಕಿನ ವರವಟ್ಟಿಯಲ್ಲಿ ಜನಿಸಿದ ಖರ್ಗೆ ಬಾಲ್ಯದ ಕೆಲವು ವರ್ಷಗಳನ್ನು ಹುಟ್ಟೂರಿನಲ್ಲಿ ಕಳೆದಿದ್ದಾರೆ.

ಅಪ್ಪಟ ಕಾಂಗ್ರೆಸಿಗರಾಗಿ ಗಾಂಧಿ ಕುಟುಂಬದ ಜತೆಗೆ ನಿಕಟ ಸಂಬಂಧ ಹೊಂದಿರುವ  ಖರ್ಗೆ, ಬರೋಬ್ಬರಿ 22 ವರ್ಷಗಳ ಬಳಿಕ ಎಐಸಿಸಿ ಅಧ್ಯಕ್ಷರ ಆಯ್ಕೆಗೆ ನಡೆದಿದ್ದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್‌ ಅವರನ್ನು ಮಣಿಸುವ ಮೂಲಕ ಗಾಂಧಿಯೇತರ ವ್ಯಕ್ತಿಯಾಗಿ ಪಕ್ಷದ ನೂತನ ಸಾರಥಿಯಾಗಿದ್ದಾರೆ.

- Advertisement -

ಆದರೂ ತನ್ನ ಸ್ವಗ್ರಾಮ ವರವಟ್ಟು ಬಿ. ಕಡೆಗೆ ಖರ್ಗೆ ತಿರುಗಿ ಕೂಡ ನೋಡಿಲ್ಲ. ಈ ಗ್ರಾಮದಲ್ಲಿದೆ ಪಾಳು ಬಿದ್ದ ಮನೆ, ಜಮೀನು: ತಂದೆ ಮಾಪಣ್ಣ ಖರ್ಗೆ ಮತ್ತು ತಾಯಿ ಸೈಬವ್ವಾ ಪುತ್ರರಾಗಿರುವ  ಮಲ್ಲಿಕಾರ್ಜುನ ಖರ್ಗೆ 1942, ಜು.21ರಂದು ವರವಟ್ಟಿ ಗ್ರಾಮದಲ್ಲಿ ಜನಿಸಿದ್ದಾರೆ. ಬಾಲ್ಯದ ದಿನಗಳನ್ನು ಕಳೆದ ಮನೆ ಇಂದಿಗೂ ಸಾಕ್ಷಿಯಾಗಿದ್ದು, ಮನೆ ಸಂಪೂರ್ಣ ನೆಲಸಮವಾಗಿದೆ. ಕುಟುಂಬದ ಆಪ್ತರ ಪ್ರಕಾರ ಗ್ರಾಮದಲ್ಲಿ ಅವರ ಹೆಸರಿನಲ್ಲಿ ಐದು ಎಕರೆ ಭೂಮಿ ಸಹ ಇದೆ.

ಮಾಪಣ್ಣ ಖರ್ಗೆ ಸಹಿತ ಒಟ್ಟು ಮೂರು ಜನ ಸಹೋ ದರರು. ಅವರ ಪತ್ನಿ ಮತ್ತು ಮಗಳು ಅತೀ ಚಿಕ್ಕ ವಯಸ್ಸಿ ನಲ್ಲೇ ಅಸುನೀಗಿದ್ದರು. ಕಿತ್ತು ತಿನ್ನುವ ಬಡತನ, ಅದೇ ಸಮಯದಲ್ಲಿ ಈ ಭಾಗದಲ್ಲಿ ರಜಾಕಾರರ ಅಟ್ಟಹಾಸ ಹೆಚ್ಚಿದ್ದರಿಂದ ಮಾಪಣ್ಣ ಅವರು, ಓದಿನ ಆಕಾಂಕ್ಷೆ ಮತ್ತು ತನ್ನ ಪುತ್ರನನ್ನು ದೊಡ್ಡ ಸಾಹೇಬ್‌ನನ್ನಾಗಿ ಮಾಡಬೇಕೆಂಬ ಆಸೆಯಿಂದ ಈ ಹಿಂದೆ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಕಲುಬರ್ಗಿಯ ಎಂಎಸ್‌ಕೆ ಜವಳಿ ಮಿಲ್‌ನಲ್ಲಿ ಕಾರ್ಮಿಕರಾಗಿ ಸೇರುತ್ತಾರೆ. ಮಗನಿಗೆ ಅಲ್ಲಿಯ ಎನ್‌ವಿ ಸ್ಕೂಲ್‌ನಲ್ಲಿ ದಾಖಲು ಮಾಡುತ್ತಾರೆ. ಇಡೀ ಬದುಕನ್ನು ಗಂಧದ ಕೊರಡಿನಂತೆ ತೇಯ್ದು ಮಗನ ಭವಿಷ್ಯವನ್ನು ರೂಪಿಸಿರುವುದು ಈಗ ಇತಿಹಾಸ.

ಖರ್ಗೆಯವರ ಬಡವರು ಮತ್ತು ಹಿಂದುಳಿದವರ ಮೇಲಿನ ಪ್ರೀತಿ, ನಿಷ್ಕಳಂಕ ಕಾಳಜಿಯ ಹಿಂದೆ ಅವರ ತಂದೆಯವರ ಪ್ರಭಾವ ಗಾಢವಾಗಿದೆ. ಗುರಮಿಟ್ಕಲ್‌ ಕ್ಷೇತ್ರದಿಂದ ಶಾಸಕರಾಗಿ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಅವರು ತಮ್ಮ 46 ವರ್ಷಗಳ ಸುದೀರ್ಘ‌ ರಾಜಕಾರಣದಲ್ಲಿ ನಾಲ್ಕು ದಶಕಗಳ ಕಾಲ ರಾಜ್ಯ ಹಾಗೂ ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿ ರಾಜಕಾರಣದ ಮೌಲ್ಯ ಮತ್ತು ಘನತೆಯನ್ನು ಗಟ್ಟಿಗೊಳಿಸಿದ್ದಾರೆ.

ರಾಷ್ಟ್ರದಲ್ಲೇ ಪ್ರಭಾವಿ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹುಟ್ಟೂರು ವರವಟ್ಟಿ ಗ್ರಾಮದ ಮೇಲಿನ ಪ್ರೀತಿ ಮತ್ತು ಕಾಳಜಿ ಮರೆತಿಲ್ಲ. ಆಗಾಗ ಗ್ರಾಮಕ್ಕೆ ಭೇಟಿ ಕೊಟ್ಟು ತಮ್ಮ ಆಪ್ತರನ್ನು ಭೇಟಿಯಾಗಿ ಬಾಲ್ಯದ ದಿನಗಳನ್ನು ಸ್ಮರಿಸುತ್ತಾರೆ.

ಇನ್ನೂ ಕುಗ್ರಾಮವಾಗಿದ್ದ ವರವಟ್ಟಿಗೆ ಅಧಿಕಾರದಲ್ಲಿ ಇದ್ದಾಗಲೆಲ್ಲ ಸಾಕಷ್ಟು ಕೊಡುಗೆಗಳನ್ನು ನೀಡ ಬೇಕಾಗಿತ್ತು.. ಈಗ ಗ್ರಾಮದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಗದ್ದುಗೆ ಏರಿರುವುದರಿಂದ ವರವಟ್ಟಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಖರ್ಗೆ ಕುರಿತ ವಿಶೇಷ ಸಂಗತಿಗಳು:

  • ಖರ್ಗೆ ಅವರಿಗೆ ಕನ್ನಡ, ಹಿಂದಿ,ಮರಾಠಿ, ಇಂಗ್ಲಿಷ್‌ ಉರ್ದುಭಾಷೆ ಗೊತ್ತು.
  • ಬೌದ್ಧ ಧರ್ಮ ಪಾಲನೆ, ಡಾ| ಬಿ.ಆರ್‌.ಅಂಬೇಡ್ಕರ್‌ ಅವರ ಕಟ್ಟಾ ಅನುಯಾಯಿ.
  • ಕಬಡ್ಡಿ ಮತ್ತು ಹಾಕಿಯಲ್ಲಿ ಇವರು ರಾಜ್ಯ ಮಟ್ಟದ ಆಟಗಾರರು.
  • 27ನೇ ವಯಸ್ಸಿನಲ್ಲೇ ಕಾಂಗ್ರೆಸ್‌ ನಗರ ಸಮಿತಿಯ ಅಧ್ಯಕ್ಷರಾದವರು.
  • 1972ರಿಂದ 2008ರ ವರೆಗೆ ವಿಧಾನಸಭೆ, 2009 ಮತ್ತು 2014ರಲ್ಲಿ ಲೋಕಸಭೆ ಚುನಾವಣೆ ಗೆಲುವು
  • ಮನೆಯಲ್ಲಿ ಖರ್ಗೆ ಅವರ ವರವಟ್ಟಿ ಬಿ ಗ್ರಾಮದಲ್ಲಿ ಮನೆ ಈಗ ಬಿದ್ದು ಹೋಗಿದೆ.

ಇನ್ನು ಮುಂದೆ ಮಲ್ಲಿಕಾರ್ಜುನ ಖರ್ಗೆ ತವರೂರಿನ ಕಡೆ ಗಮನ ಹರಿಸುತ್ತಾರೋ ಅಥವಾ ಮರೆತು ಬಿಡುತ್ತಾರೆ ಎಂಬುದು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group