How to do Meditation in Kannada- ಧ್ಯಾನ ಮಾಡುವುದು ಹೇಗೆ?
ಧ್ಯಾನವನ್ನು ಪ್ರತಿನಿತ್ಯವೂ ಮಾಡುವುದರಿಂದ ಮನಸ್ಸು ಮತ್ತು ದೇಹ ಶುದ್ಧವಾಗಿರುತ್ತದೆ. ಇದರಿಂದ ಸಾಕಷ್ಟು ಲಾಭಗಳು ಸಹ ಇವೆ ಎಂದು ಹೇಳಬಹುದು. ಇದರ ಕಾರಣಕ್ಕಾಗಿಯೇ ದೊಡ್ಡ ದೊಡ್ಡ ವ್ಯಕ್ತಿಗಳು ಅವರ ಜೀವನದಲ್ಲಿ ಧ್ಯಾನವನ್ನು ಒಂದು ಭಾಗವನ್ನಾಗಿ ಮಾಡಿಕೊಂಡಿರುತ್ತಾರೆ. ಕೆಲವರಿಗೆ ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ತಪ್ಪುಗಳನ್ನು ಮಾಡಿ ನಮಗೆ ಧ್ಯಾನ ಮಾಡುವುದಕ್ಕೆ ಬರುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಬನ್ನಿ ಈ ವಿಷಯಗಳನ್ನು ನೀವು ತಲೆಯಲ್ಲಿ ಇಟ್ಟುಕೊಂಡರೆ ನೀವು ಧ್ಯಾನವನ್ನು ಉತ್ತಮವಾಗಿ ಮಾಡಿಕೊಳ್ಳಬಹುದು.. ಮೊದಲ ದಿನದಿಂದಲೇ ಧ್ಯಾನವನ್ನು ಸರಿಯಾಗಿ ಮಾಡಬೇಕು ಎಂದು ಬಯಸುವವರಿಗೆ ಅದು ಅಸಾಧ್ಯ. ಏಕೆಂದರೆ ಚಿಕ್ಕ ಚಿಕ್ಕ ಕೆಲಸಗಳಿಂದಲೇ ದೊಡ್ಡ ಕೆಲಸಗಳು ಆಗುವುದು. ಹಾಗಾಗಿ ಮೊದಲನೆಯ ದಿನವೇ 2 ನಿಮಿಷಗಳ ಕಾಲ ಮೌನವಾಗಿ ಕುಳಿತುಕೊಳ್ಳಿ. ಹೀಗೆ 1 ವಾರಗಳ ಕಾಲ 2 ನಿಮಿಷಗಳ ಕಾಲ ಕುಳಿತು ತದನಂತರ ನಿಮಿಷಗಳನ್ನು ಹೆಚ್ಚು ಮಾಡುತ್ತಾ ಹೋಗಿ. ಇದರಿಂದ ನಿಮಗೆ 2 ತಿಂಗಳಿನ ಒಳಗೆ ಹತ್ತು ನಿಮಿಷಗಳ ಕಾಲ ಧ್ಯಾನವನ್ನು ಮಾಡುವ ಸಾಮರ್ಥ್ಯವು ಬರುತ್ತದೆ.
Meditation in Kannada
ಕೆಲವರು ಈ ದಿನ ಧ್ಯಾನವನ್ನು ಮಾಡಿ ನಾಳೆ ಆದರೆ ಧ್ಯಾನ ಮಾಡುವುದಕ್ಕೆ ಮನಸ್ಸು ಇಲ್ಲ ಎಂದು ಹೇಳುತ್ತಾರೆ. ಇದನ್ನು ಮಾಡುವುದು ತಪ್ಪು, ನೀವು ಹೇಗೆ ಪ್ರತಿನಿತ್ಯವೂ ಎದ್ದ ತಕ್ಷಣ ಹಲ್ಲನ್ನು ಉಜ್ಜುತ್ತೀರಾ ಹಾಗೆ ನಿಮ್ಮ ಮೆದುಳನ್ನು ಸಹ ಶುಚಿಯಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಧ್ಯಾನವನ್ನು ಕಡ್ಡಾಯವಾಗಿ ಮಾಡಬೇಕು. ಕೆಲವರು ಧ್ಯಾನ ಮತ್ತು ವ್ಯಾಯಾಮಗಳ ಮೇಲೆ ಇರುವ ಆಸಕ್ತಿ ಯಾವ ಬಟ್ಟೆಯನ್ನು ಹಾಕಿಕೊಳ್ಳಬೇಕು ಯಾವ ಜಾಗ ಸರಿ ಇದೆ ಇಂದು ಅದರ ಮೇಲೆ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾರೆ. ಹಾಗಾಗಿ ಮೊದಲು ನೀವು ಧ್ಯಾನವನ್ನು ಮಾಡುವುದನ್ನು ಮೊದಲು ಕಲಿತರೆ ನಿಮಗೆ ಯಾವ ಜಾಗ ಆದರೂ ಸರಿ ಅಲ್ಲಿ ಧ್ಯಾನವನ್ನು ಮಾಡಬಹುದು.
ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಪರಿಶೀಲಿಸಿಕೊಳ್ಳಬೇಕು. ಹೇಗೆ ಅಂದರೆ ನಿಮಗೆ ಆ ಸಮಯದಲ್ಲಿ ಸುಸ್ತಾಗುತ್ತಿದೆಯಾ ಶಕ್ತಿ ದೊರೆಯುತ್ತಿದೆಯಾ ನಿಮ್ಮ ಮೆದುಳು ಹೇಗಿದೆ ನಿಮ್ಮ ಮನಸ್ಸು ದೇಹ ಹೀಗಿದೆ ಎಂದು ಪ್ರತಿಯೊಂದು ಕೂಡ ಪರಿಶೀಲನೆ ಮಾಡಿಕೊಳ್ಳಬೇಕು. ಧ್ಯಾನವನ್ನು ಮಾಡುತ್ತಿರುವಾಗ ನಿಮ್ಮ ಉಸಿರಿನ ಮೇಲೆ ಹೆಚ್ಚು ಗಮನವನ್ನು ಇಡಬೇಕು. ಯಾವುದೇ ಕಾರಣಕ್ಕೂ ಧ್ಯಾನವನ್ನು ಬಲವಂತವಾಗಿ ಮಾಡಬಾರದು. ನಿಮಗೆ ಆಚೆ ಹೋದಾಗ ಯಾವುದಾದರೂ ಸ್ಥಳವನ್ನು ನೋಡಿದಾಗ ನಿಮ್ಮ ಮನಸ್ಸು ಹೀಗೆ ಉಲ್ಲಾಸವಾಗುತ್ತದೆ ಅದೇ ಉಲ್ಲಾಸದಿಂದ ನಿಮ್ಮ ಮನಸ್ಸು ಕೂಡ ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ಇರಬೇಕು.
ಧ್ಯಾನವನ್ನು ಮಾಡುತ್ತಿರುವ ಸಮಯದಲ್ಲಿ ನಿಮ್ಮ ಉಸಿರಿನ ಮೇಲೆ ಹೆಚ್ಚು ಗಮನವನ್ನು ಇಡಬೇಕು. ಹೀಗೆ ಗಮನದಲ್ಲಿ ಇಟ್ಟಾಗ ನಿಮಗೆ ಒಂದು ರೀತಿಯ ವಿಶ್ರಾಂತಿ ಸಿಗುತ್ತದೆ. ಈ ರೀತಿ ನಿಮಗೆ ಆಗಲಿಲ್ಲ ಎಂದರೆ ಒಂದು ನಗುವನ್ನು ಕೊಟ್ಟು ಮತ್ತೆ ಧ್ಯಾನವನ್ನು ಮಾಡಲು ಶುರು ಮಾಡಿ. ಯಾವುದೇ ಕೆಲಸ ಆಗಿರಲಿ ಯಾವುದೇ ಪ್ರಯತ್ನಗಳಿಲ್ಲದೆ ಅದು ಆಗುವುದಿಲ್ಲ. ಧ್ಯಾನವನ್ನು ಮಾಡುತ್ತಿರುವಾಗ ನಿಮಗೆ ಬೇರೆ ಯೋಚನೆಗಳು ಬೇರೆ ಭಾವನೆಗಳು ಬರುತ್ತಿರುತ್ತದೆ, ಈ ಭಾವನೆಗಳು ಯೋಚನೆಗಳು ಬರುತ್ತಿದೆ ಎಂದು ನೀವು ಕೆಟ್ಟದಾಗಿ ಅಂದುಕೊಳ್ಳಬೇಡಿ. ಏಕೆಂದರೆ ಇವು ಕೂಡ ಧ್ಯಾನದಲ್ಲಿ ಒಂದು ಭಾಗ.
Meditation Benefits In Kannada
ಯಾವುದೇ ಹೊಸ ಕೆಲಸವನ್ನು ಮಾಡಿದಾಗ ಅದರಿಂದ ಬೇಗ ಫಲಿತಾಂಶ ಸಿಗಬೇಕು ಎಂದು ಅಂದುಕೊಳ್ಳುವುದು ತಪ್ಪು. ಏಕೆಂದರೆ ಪ್ರಯತ್ನ ಮಾಡದೇ ಇದ್ದರೆ ಯಾವ ಕೆಲಸವೂ ಕೂಡ ಫಲಿತಾಂಶ ಆಗುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಕೆಲಸವನ್ನು ಮಾಡಿ. ಧ್ಯಾನವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಮನಸ್ಸು ಚಂಚಲವಾಗುತ್ತದೆ. ಯಾವುದೇ ಇದರ ಮೇಲೆ ದೃಷ್ಟಿ ಇಡುವುದಕ್ಕೆ ಆಗುವುದಿಲ್ಲ. ಇವೆಲ್ಲವೂ ಸಾಮಾನ್ಯವಾಗಿ ಆಗುತ್ತಲೇ ಇರುತ್ತದೆ. ಹಾಗಾಗಿ ಇವೆಲ್ಲವೂ ನಿಮ್ಮ ಬಗ್ಗೆ ತಿಳಿಸುತ್ತದೆ ಇದು ಕೂಡ ಧ್ಯಾನದ ಒಂದು ಮುಖ್ಯ ಭಾಗ.