spot_img
spot_img

ಶಿಕ್ಷಣ ಸಂಘಟನೆ ಸಹಬಾಳ್ವೆಯ ಪ್ರತೀಕ ಎಚ್.ಆರ್.ಪೆಟ್ಲೂರ – ರಾಮಚಂದ್ರಪ್ಪ

Must Read

spot_img
- Advertisement -

ಸವದತ್ತಿ: “ನಾವು ಸಮಾಜದಲ್ಲಿ ಉನ್ನತ ಹುದ್ದೆಗೆ ಏರಿದವರನ್ನು ನೋಡುತ್ತೇವೆ. ಅವರಲ್ಲಿನ ಪರಿಶ್ರಮ ಪ್ರಯತ್ನಗಳ ಮೂಲಕ ಅದು ಅವರಿಗೆ ಒಲಿದಿರುತ್ತದೆ.ಅಂಥ ರೀತಿಯಲ್ಲಿ ಸದಾ ಶಿಕ್ಷಕರ ಒಡನಾಡಿಯಾಗಿದ್ದುಕೊಂಡು ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾಗಿ ಈಗ ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಸಂಘಟನೆಯ ಅಧ್ಯಕ್ಷಗಾಗಿ ಆಯ್ಕೆಯಾದ ಪೆಟ್ಲೂರ ಅವರಲ್ಲಿ ಶಿಕ್ಷಕರಾಗಿ ಒಳ್ಳೆಯ ಶಿಕ್ಷಣ ಬೋಧನೆ ಮಾಡುವ ಗುಣ ಹಾಗೂ ಉತ್ತಮ ಸಂಘಟಕರು. ಜೊತೆಗೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಕೆಲಸ ಮಾಡುವ ಸಂಘಟನಾ ಚತುರರು.ಅವರಲ್ಲಿರುವ ಔದಾರ್ಯಗುಣ ಕೂಡ ಮೆಚ್ಚುವಂತಹದು.ಇಂತಹ ವ್ಯಕ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾಗಿರುವುದು ನಮ್ಮ ಭಾಗ್ಯವೆಂದರೆ ಅತಿಶಯೋಕ್ತಿಯಲ್ಲ.”ಎಂದು ಗುರ್ಲಹೊಸೂರಿನ ಸಮೂಹ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ತಿಳಿಸಿದರು.

ಅವರು ಸವದತ್ತಿ ಪಟ್ಟಣದ ಗುರ್ಲಹೊಸೂರಿನ ಶಾಸಕರ ಮಾದರಿ ಶಾಲೆಯಲ್ಲಿ ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಆರ್.ಪೆಟ್ಲೂರ ಅವರಿಗೆ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಕಲಚೇತನ ಸಂಪನ್ಮೂಲ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ ಕಮ್ಮಾರ. ವಿಜ್ಞಾನ ಶಿಕ್ಷಕ ಎಸ್.ಎಚ್.ಕರಿಗಾರ ಉಪಸ್ಥಿತರಿದ್ದರು.

- Advertisement -

ವಿಕಲಚೇತನ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಮಾತನಾಡುತ್ತ “ ಪೆಟ್ಲೂರ ಅವರಿಗೆ ಕಿರಿಯ ವಯಸ್ಸಿನಲ್ಲಿ ಜವಾಬ್ದಾರಿ ಸ್ಥಾನ ಅವರ ಸಂಘಟನಾ ಚತುರತೆಗೆ ಒಲಿದು ಬಂದಿದೆ.ಅವರು ಕೇವಲ ಶಿಕ್ಷಕ ಸ್ನೇಹಿ ಅಷ್ಟೇ ಅಲ್ಲ ಇಲಾಖೆಯಲ್ಲಿ ಎಲ್ಲಾ ಹಂತದ ನೌಕರರನ್ನು ತಮ್ಮ ಸಹೋದರ ಸಮಾನರು ಎಂದು ಭಾವಿಸಿದ ವ್ಯಕ್ತಿ. ಯಾರು ಕೆಲಸ ಮಾಡುತ್ತಾರೋ ಅವರ ಕೆಲಸವನ್ನು ಗುರುತಿಸುವ ಜೊತೆಗೆ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲುವಂತೆ ಮಾಡುವಲ್ಲಿ ಅವರು ನಿಸ್ಸೀಮರು.ಇವರಿಗೆ ದೇವರು ಇನ್ನೂ ಹೆಚ್ಚಿನ ಹುದ್ದೆಗಳು ಮುಂದಿನ ದಿನಗಳಲ್ಲಿ ದೊರೆಯುವಂತೆ ಮಾಡಲಿ” ಎಂದು ಶುಭ ಕೋರಿದರು.

ವಿಜ್ಞಾನ ಶಿಕ್ಷಕ ಎಸ್.ಎಚ್.ಕರಿಗಾರ ಮಾತನಾಡುತ್ತ “ ಯಾರಿಗಾದರೂ ಕಷ್ಟಗಳು ಬಂದಿವೆ ಎಂದು ಪೆಟ್ಲೂರ ಅವರ ಬಳಿಗೆ ಹೇಳಿಕೊಂಡರೆ ಅದಕ್ಕೆ ಸೂಕ್ತ ಪರಿಹಾರ ದೊರಕುವವರೆಗೆ ಅವರು ವಿರಮಿಸಲಾರರು ಎಂಬುದಕ್ಕೆ ನನ್ನ ಜೀವನದಲ್ಲಿ ನಡೆದ ಘಟನೆ ಸಾಕ್ಷಿ. ಆ ಘಟನೆಯನ್ನು ನಾನು ಅವರೊಂದಿಗೆ ಚರ್ಚಿಸಿದಾಗ ಅದಕ್ಕೆ ಒಂದು ಅಂತಿಮ ಘಟ್ಟ ತಲುಪುವವರೆಗೂ ಹೋರಾಟ ನಡೆಸಿ ನನಗೆ ನ್ಯಾಯ ಕೊಡಿಸಿದರು.ಇಂತಹ ವ್ಯಕ್ತಿ ಈಗ ನಮ್ಮ ಸಂಘದ ಅಧ್ಯಕ್ಷರಾಗಿರುವುದು ನಮ್ಮೆಲ್ಲರ ಭಾಗ್ಯ”ಎಂದು ತಿಳಿಸಿದರು.

- Advertisement -

ಮುಖ್ಯೋಪಾಧ್ಯಾಯರಾದ ಮಂಜುನಾಥ ಕಮ್ಮಾರ ಮಾತನಾಡಿ “ಅವರಲ್ಲಿರುವ ದೊಡ್ಡ ಗುಣ ಎಂದರೆ ಎಲ್ಲರನ್ನೂ ಗೌರವಿಸುವುದು.ಉತ್ತಮ ಕೆಲಸವನ್ನು ಮೆಚ್ಚುವುದು.ದೇವರು ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ಸಿಗುವಂತೆ ಮಾಡಲಿ” ಎಂದು ಶುಭ ಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪೆಟ್ಲೂರ ಅವರು, ಜನಪ್ರಿಯ ಶಾಸಕ ಮತ್ತು ವಿಧಾನಸಭಾ ಉಪಾಧ್ಯಕ್ಷ ಆನಂದ ಮಾಮನಿಯವರು ಜಿಲ್ಲಾ ಸಂಘದ ಅಧ್ಯಕ್ಷ ಜಯಕುಮಾರ ಹೆಬಳಿಯವರು.ತಾಲೂಕು ಸಂಘದ ಅಧ್ಯಕ್ಷ ಸುರೇಶ ಬೆಳವಡಿಯವರು ಸೇರಿದಂತೆ ನನ್ನ ಎಲ್ಲಾ ಪದಾಧಿಕಾರಿಗಳ ಸಹಕಾರ ಮರೆಯಲಾಗದು.ಮೊದಲು ಮಕ್ಕಳಿಗೆ ಶಿಕ್ಷಣ ನೀಡುವುದು ನನ್ನ ಆದ್ಯತೆ.ನನ್ನ ಶಾಲೆ.ಅದು ನನಗೆ ಅನ್ನವನ್ನು ನೀಡಿದ ಸ್ಥಳ.ಸರಸ್ವತಿ ದೇವಿಯ ಕೃಪೆಯಿಂದ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವ ಜೊತೆಗೆ ನನ್ನ ವೃತ್ತಿ ಬಾಂಧವರಿಗೆ ಸಿಗಬೇಕಾದ ಸೌಲಭ್ಯಗಳು ಅವರ ಕಷ್ಟಗಳಿಗೆ ಸ್ಫಂದಿಸುವುದು ಸಂಘದ ಮೂಲಕ ಏನೆಲ್ಲಾ ಸಾಧ್ಯವೋ ಅದನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆನು.ನಿಮ್ಮ ಈ ಸನ್ಮಾನದ ಗೌರವ ನನಗೆ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ ಅದಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಶಿಕ್ಷಕ ಸ್ನೇಹಿ ಚಟುವಟಿಕೆಗಳನ್ನು ಮಾಡುವೆನು.ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎಂಬಂತೆ ನನ್ನ ಪತ್ನಿ ಈ ಶಾಲೆಯ ಶಿಕ್ಷಕಿ.ನಾನು ಪದಾಧಿಕಾರಿಯಾದಾಗಿನಿಂದಲೂ ಮನೆಯ ಜವಾಬ್ದಾರಿಯತ್ತ ಹೆಚ್ಚು ಮುತುವರ್ಜಿ ವಹಿಸುವ ಮೂಲಕ ನನಗೆ ಬೆನ್ನೆಲುಬಾಗಿ ನಿಂತಿರುವಳು.ಅವಳು ಇಲ್ಲಿರುವಳು ಅಂತ ಈ ಮಾತಲ್ಲ ಅದು ನಿತ್ಯ ಸತ್ಯ ” ಎಂದು ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಪರಶುರಾಮ ಶಿಂಧೆ “ ನಮ್ಮ ಅಧ್ಯಕ್ಷ ನಮ್ಮ ಹೆಮ್ಮೆ ಇದು ನಮ್ಮ ಧ್ಯೇಯ ವಾಕ್ಯ.ನನ್ನನ್ನು ಸಹಕಾರಿ ಸಂಘಕ್ಕೆ ಪದಾಧಿಕಾರಿಯಾಗಿಸುವಲ್ಲಿ ಅವರ ಪ್ರೋತ್ಸಾಹ ಮರೆಯಲಾಗದು.ನಾನು ಸಿ.ಆರ್.ಪಿ ಯಾಗಿದ್ದಾಗಲೂ ಕೂಡ ಅವರ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಜರುಗಿದರೂ ನನಗೆ ಅತಿಥಿ ಸ್ಥಾನ ನೀಡುವ ಮೂಲಕ ನನ್ನನ್ನು ಪ್ರೋತ್ಸಾಹಿಸಿರುವರು.ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.ದೇವರು ಅವರನ್ನು ರಾಜ್ಯ ಮಟ್ಟದತ್ತ ಕೊಂಡೊಯ್ಯುವ ದಿನಗಳು ಬರಲಿ” ಎಂದು ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎಮ್.ಜಿ.ದೊಡಮನಿ.ಆರ್.ಬಿ.ಐಹೊಳೆ.ಎಮ್.ಎಮ್.ಮಾಟೊಳ್ಳಿ.ಬಿ.ಎಸ್.ದೊಡ್ಡಕಲ್ಲನ್ನವರ.ಗುರುಮಾತೆಯರಾದ ಜೆ.ಸಿ.ಗುಂಡಾರ, ಜಿ.ಕೆ.ಕೆಂಪಯ್ಯನವರ, ಬಿ.ಕೆ.ಸಂತಿ, ಎಸ್.ಎಸ್.ಮಿರ್ಜಿ.ವಿ.ಆರ್.ಗೊರಗುದ್ದಿ ಎನ್.ಆರ್,ಜಂಬೂನವರ ಸೇರಿದಂತೆ ಅಕ್ಷರ ದಾಸೋಹ ಕಾರ್ಯಕರ್ತೆಯರು ಉಪಸ್ಥಿತರಿದ್ದು ಪೆಟ್ಲೂರ ಅವರ ಸನ್ಮಾನದಲ್ಲಿ ಭಾಗಿಯಾದರು. ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಎಂ.ಜಿ.ದೊಡಮನಿ ಸ್ವಾಗತಿಸಿದರು. ಪಿ.ಎಸ್.ಶಿಂಧೆ ನಿರೂಪಿಸಿದರು. ಬಿ.ಎನ್.ದೊಡ್ಡಕಲ್ಲನ್ನವರ ವಂದಿಸಿದರು.

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group