spot_img
spot_img

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

Must Read

- Advertisement -

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ ತಡೆಯಲಾಗದ ಕಾಂಗ್ರೆಸ್, ನಮ್ಮೆಲ್ಲರ ರಕ್ಷಣೆ ಮಾಡುವುದೆಂಬ ಭರವಸೆ ತಮಗಿದೆಯಾ?

ಕಾಂಗ್ರೆಸ್ ನೇತೃತ್ವದ ಈ ರಾಜ್ಯ ಸರ್ಕಾರಕ್ಕೆ ಬೆಳಗಾವಿಯ ಒಬ್ಬ ಶಾಸಕನ ಮನೆಗೆ ರಕ್ಷಣೆ ನೀಡಲಾಗಲಿಲ್ಲ. ಒಂದು ಹೇಳಿಕೆಯ ಕಾರಣ ಮಹಿಳೆಯರಿಗೆ ಅವಮಾನ ಅಂತ ಇದೇ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ಶಾಸಕರ ಮನೆಗೆ ಅಕ್ರಮ ಪ್ರವೇಶ ಮಾಡಿ ಅವರ ಕಾರು ಚಾಲಕನ ಮೇಲೆ ಹಲ್ಲೆ ಮಾಡಿ ಹೂ ಕುಂಡಗಳ ಒಡೆದು ಅಶ್ಲೀಲವಾಗಿ ಬೈದಾಡಿ ಬಂದರು.

ಈಗ ಒಬ್ಬ ವಿದ್ಯಾರ್ಥಿನಿಯ ಹತ್ಯೆ ಮಾಡಿದವನ ಮನೆಗೆ ರಕ್ಷಣೆ ಅಂತೆ! ಜೀವಕ್ಕಿಂತ ಮಾತಿನ ಅವಮಾನ ಘೋರ. ಜೀವಕ್ಕೆ ಬೆಲೆಯಿಲ್ಲ ಅಂತಾಯತು ಅಥವಾ ಆರೋಪಿ ಮುಸ್ಲಿಮ್ ಆದರೆ ರಕ್ಷಣೆ ನೀಡಬೇಕು ಅಂತಾಯತು ಇದು ಕಾಂಗ್ರೆಸ್ ನ ಬಹಿರಂಗ ಧೋರಣೆ.

- Advertisement -

ಹುಬ್ಬಳ್ಳಿ ಧಾರವಾಡ ನಗರ ಪೋಲಿಸ ಕಮಿಷನರ್ ಮೆಡಮ್ ಹೇಳುತ್ತಾರೆ, ಬೇರೆ ಏನೂ ಆಗಬಾರದು ಅಂತ ಇಮ್ಮಿಡಿಯೇಟ್ ಅವನ ಅರೆಸ್ಟ್ ಮಾಡಿ ಸೆಕ್ಯೂರ್ ಮಾಡಿದರಂತೆ ! ಅಂದ್ರೆ ಅವರು ಹಿಂದೂ ಹೆಣ್ಣು ಮಕ್ಕಳನ್ನ ಕೊಂದರೆ ಅವರಿಗೆ ಯುವತಿಯ ಕುಟುಂಬ ಬಂಧು ಮಿತ್ರರು ಅವಳ ಧರ್ಮದವರು ಬಾಂಧವರಿಗೆ ಅಪಾಯ ಮಾಡಬಾರದು ಅಂತ ಬಂಧಿಸಿ ಊಟ ಉಪಚಾರದೊಂದಿಗೆ ರಕ್ಷಣೆ ನೀಡುತ್ತಾರೆ!

ಅವನು ಹೇಳಿದ್ದ ಅಂತ ದ್ವಿಮುಖ ಪ್ರೀತಿಯ ಹೇಳಿಕೆಯನ್ನ ಮಾಧ್ಯಮಗಳಿಗೆ ನೀಡಿ ಹುಡುಗಿಯ ಚಾರಿತ್ರ್ಯ ಹರಣ ಮಾಡಿದರು. ಅದು ಸಹಪಾಠಿಗಳ ಸ್ನೇಹವೋ ಅಥವಾ ಅವರಿಬ್ಬರ ನಡುವಿನ ಪ್ರೇಮವೊ ಅಂತ ತನಿಖೆ ಮಾಡುವ ಮೊದಲೆ ಪರಸ್ಪರ ಪ್ರೀತಿಯಿತ್ತು ಅಂತ ಶರಾ ಬರೆಯುವುದಷ್ಟೆ ಅಲ್ಲ ಅವರಿಬ್ಬರ ಪೋಟೊಗಳನ್ನ ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಾರೆ. ಮದುವೆಯಾದ ಹೆಣ್ಣಿಗೆ ತನ್ನ ಗಂಡ ಸರಿಯಿಲ್ಲ ಎನಿಸಿದಾಗ ವಿಚ್ಛೇದನ ನೀಡುವ ಅಧಿಕಾರ ಇರುವಾಗ, ಒಂದು ವೇಳೆ ದ್ವಿಮುಖ ಪ್ರೀತಿ ಇದ್ದರೂ ಕೂಡ ಆತನ ನಡವಳಿಕೆ ಕಾರಣ ತಿರಸ್ಕರಿಸಿರಬಹುದು ಅದನ್ನೆ ಮುಂದಿಟ್ಟುಕೊಂಡು ಆರೋಪಿಯ ಬಗ್ಗೆ ಸಿಂಪಥಿ ಉಂಟಾಗುವಂತೆ ಮಾಡುತ್ತಿರುವುದೇಕೆ? ಇದರ ಹಿಂದಿನ ಉದ್ದೇಶವೇನಿರಬಹುದು ?

ಸಿದ್ದರಾಮಯ್ಯ ಅವರ ವೈಯಕ್ತಿಕ ಕಾರಣಕ್ಕಾಗಿ ಕೊಲೆ ಆಗಿದೆ ಎಂಬ ಹೇಳಿಕೆ ಎಷ್ಟು ಕ್ರೌರ್ಯ ದಿಂದ ಕೂಡಿದೆ ನೋಡಿ. ಒಬ್ಬ ನ್ಯಾಯವಾದಿಯಾಗಿದ್ದ ಮುಖ್ಯಮಂತ್ರಿಗಳಿಗೆ ಯಾವುದೇ ವ್ಯಕ್ತಿಯ ವಿರುದ್ಧ ನಡೆದ ಯಾವುದೆ ರೀತಿಯ ಅಪರಾಧವು ಸರ್ಕಾರದ ವಿರುದ್ಧ ಮಾಡಿದ ಅಪರಾಧ ಎಂಬ ಅಪರಾಧಿಕ ಕಾನೂನಿನ ತಿಳಿವಳಿಕೆ ಇಲ್ಲವಾ?

- Advertisement -

ಒಟ್ಟಿನಲ್ಲಿ ಈ ಒಲೈಕೆ ರಾಜಕಾರಣ ನಮ್ಮ ದೇಶವನ್ನ ಯಾವ ದಿಕ್ಕಿನೆಡೆಗೆ ಒಯ್ಯುತ್ತದೋ ಅಂಬೇಡ್ಕರ ಅವರೆ ಬಲ್ಲರು. ಕುರಿಗಳಂತೆ ಉಚಿತಗಳಿಗೆ ಬಲಿಯಾಗದೆ ಜನತೆ ಆದಷ್ಟು ಬೇಗ ಎಚ್ಚತ್ತುಕೊಳ್ಳಬೇಕಾಗಿದೆ.

ಸಾಮಾನ್ಯವಾಗಿ ತನ್ನ ಮೊಬೈಲ್ ತನ್ನ ಬಳಿ ಇಟ್ಟುಕೊಂಡಿರುತ್ತಾರೆ ಹಾಗೆ ತಮ್ಮ ವೈಯಕ್ತಿಕ ಪೋಟೊ ಮುಂತಾದವುಗಳನ್ನ ತಮ್ಮದೆ ಪೋನ್ ನಲ್ಲಿ ಅಥವಾ ಪೆನ್ ಡ್ರೈವ್ ಗಳಲ್ಲಿ ಯಾರಿಗೂ ಸಿಗದಂತೆ ಇಟ್ಟುಕೊಂಡಿರುತ್ತಾರೆ.
ಹುಬ್ಬಳ್ಳಿಯ ಕೊಲೆ ಪ್ರಕರಣದಲ್ಲಿ ಕೊಲೆಗಾರನನ್ನ ಒಂದು ಗಂಟೆಯ ಅವಧಿಯಲ್ಲೆ ಬಂಧಿಸಿದ್ದಾರೆ. ಆದರೆ ಮಾಧ್ಯಮಗಳಿಗೆ ಅವರ ವೈಯಕ್ತಿಕ ಪೋಟೊಗಳನ್ನ ಹರಿಬಿಟ್ಟಿದ್ದು ಯಾರು? ಪೋಲಿಸರಾ ಅಥವಾ ಆತನ ಮನೆಯವರಾ? ಈ ಕುರಿತು ಸಮಗ್ರ ತನಿಖೆ ಆಗಲೆ ಬೇಕು. ಕಾರಣ ತನಿಖಾ ಹಂತದಲ್ಲಿ ಪೋಲೀಸರಿಂದ ಮಾಹಿತಿಯ ಸೋರಿಕೆ ಆಯಿತಾ ಎಂದು ಪರಿಶೀಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸದರಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು.

ಕೃಷಿಕ ಮಲ್ಲಿಕಾರ್ಜುನ ಚೌಕಶಿ ವಕೀಲರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group