spot_img
spot_img

ಕಡಾಡಿ ಮೇಲಿನ ಹಲ್ಲೆ ಖಂಡಿಸುತ್ತೇನೆ – ಪ್ರಕಾಶ ಮಾದರ

Must Read

spot_img
- Advertisement -

ಮೂಡಲಗಿ: ನಮ್ಮ ದಲಿತ ಮುಖಂಡರು ಘಟಪ್ರಭಾದಲ್ಲಿ ಈರಣ್ಣ ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ದಲಿತ ಮುಖಂಡನಾಗಿ ನಾನು ಕೂಡ ಆ ಘಟನೆಯನ್ನು ಖಂಡಿಸುತ್ತೇನೆ ಎಂದು ಪಟ್ಟಣದ ದಲಿತ ಮುಖಂಡ ಪ್ರಕಾಶ ಮಾದರ ಹೇಳಿದರು.

ರವಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ನೀಡುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿ ತಮ್ಮ ಹೇಳಿಕೆಯನ್ನು ಹಿಂಪಡೆದು ವಿಷಾದ ವ್ಯಕ್ತಡಿಸಿದ್ದಾರೆ. ಆದರೂ ಸಹ ಮುಗ್ಧರಾದ ನಮ್ಮ ದಲಿತ ಮುಖಂಡರು ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆಗಳು ಆಗದಂತೆ ತಡೆಯಬೇಕಿತ್ತು. ಆದರೆ ಕಡಾಡಿಯವರ ಮೇಲೆ ಹಲ್ಲೆ ನಮ್ಮ ದಲಿತ ಮುಖಂಡರು ಮಾಡಿರುವುದು ಖಂಡನೀಯವಾಗಿದೆ ಎಂದರು.

ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಈರಣ್ಣ ಕಡಾಡಿಯವರು ಯಾವುದೇ ಕಾರ್ಯಕ್ರಮಗಳಾಗಲ್ಲಿ, ಯಾವುದೇ ವೇದಿಕೆಯಾಗಲ್ಲಿ ಅನ್ಯ ಸಮಾಜದ ವಿರುದ್ದ ಮಾತನಾಡಿಲ್ಲ. ಆದರೂ ಸಹ ನಮ್ಮ ಮಿತ್ರರಾದ ದಲಿತರು ಕಡಾಡಿಯವರ ಮೇಲೆ ಮಾಡಿರುವ ಹಲ್ಲೆಯನ್ನು ಪಂಚಮಸಾಲಿಗಳು ಎಂದಿಗೂ ಕ್ಷಮಿಸುವುದಿಲ್ಲ. ಆದರಿಂದ ಮುಂದಿನ ದಿನಗಳಲ್ಲಿ ಹೀಗೆ ನಮ್ಮ ಸಮಾಜದ ನಾಯಕರ ಮೇಲೆ ಹಲ್ಲೆಗಳು ನಡೆದರೇ ಪಂಚಮಸಾಲಿಗಳೂ ಕೂಡಾ ರಸ್ತೆಗಿಳಿದ್ದು ಹೋರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಬಹುದು ಆದರಿಂದ ಈ ಘಟನೆಯ ಹಿಂದೆ ಇರುವಂತ ಜನರು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ದಲಿತ ಮುಖಂಡ ಅಶೋಕ ಬಾಗನ್ನವರ, ಹಾಲಮತ ಸಮಾಜದ ಮುಖಂಡ ಲಕ್ಷ್ಮಣ ಪೂಜೇರಿ, ಉಪ್ಪಾರ ಸಮಾಜದ ಮುಖಂಡ ಸುರೇಶ ಅತಂರಗಟ್ಟಿ, ಶಿವಾನಂದ ಮಗದುಮ್ಮ, ಮಹಾಲಿಂಗ ಒಂಟಗೋಡಿ, ಸದಾಶಿವ ನಿರಲಿ ಇದ್ದರು.

- Advertisement -
- Advertisement -

Latest News

ನಗರ ಕೇಂದ್ರ ಗ್ರಂಥಾಲಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನ ಆಚರಣೆ

ಬೆಳಗಾವಿ: ಮನುಷ್ಯ ಬದುಕಿನ ಹಕ್ಕುಗಳ ಮಹತ್ವವನ್ನು ಸಾರುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್‌ 10 ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. 1948ರಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group