ಶಾಲಾ ಆವರಣದಲ್ಲಿ “ಸಸ್ಯ ಶಾಮಲ” ಅನುಷ್ಠಾನ

Must Read

ಹೂಲಿಕಟ್ಟಿ: ಕಿತ್ತೂರು ತಾಲೂಕಿನ ಕೆಪಿಎಂ ಸರಕಾರಿ ಪ್ರೌಢಶಾಲೆ ಹೂಲಿಕಟ್ಟಿ ಶಾಲಾ ಆವರಣದಲ್ಲಿ ಸರಕಾರದ ಮಹತ್ತರವಾದ ಯೋಜನೆ “ಸಸ್ಯ ಶಾಮಲ” ಕಾರ್ಯಕ್ರಮದ ಅಡಿ ಸಸಿ ನೆಡುವ ಕಾರ್ಯಕ್ಕೆ ಇಂದು ಮುಖ್ಯೋಪಾಧ್ಯಾರಾದ ಜಿ ಎಚ್ ನಾಯಕ ರವರು ಚಾಲನೆ ನೀಡಿದರು.

ಅರಣ್ಯಇಲಾಖೆಯ ಸಹಯೋಗದಲ್ಲಿ  ವಿವಿಧ ಜಾತಿಯ ಸಂಪಿಗೆ,ನೇರಳೆ,ಗೋನಿ, ಬಾದಾಮಿ ವಿವಿಧ ಬಗೆಯ 40 ಸಸಿಗಳನ್ನು ಪೂರೈಸಿದ್ದು ಶಿಕ್ಷಕರು ಹಾಗು ಮಕ್ಕಳು ಸಸಿಗಳನ್ನು ನೆಟ್ಟು ಅವುಗಳ ಪೋಷಣೆ ಜವಾಬ್ದಾರಿ  ವಹಿಸಿಕೊಂಡರು.

ಸರಕಾರ ಶಿಕ್ಷಣ ಇಲಾಖೆ ಅರಣ್ಯ ಇಲಾಖೆಯ  ಸಸ್ಯ ಶಾಮಲ ಕುರಿತು ಭೂಮಿಯ ತಾಪಮಾನ ನಿಯಂತ್ರಣ, ಆಮ್ಲಜನಕ ಉತ್ಪಾದನೆಗೆ ಅತಿ ಅವಶ್ಯವಾಗಿ  ಪರಿಸರ ಕಾಳಜಿ ವಹಿಸುವುದು ,ಸಕಲ ಜೀವರಾಶಿ ಸಂಕುಲದ ಉಳಿವಿಗೆ ಸಸ್ಯ ಶಾಮಲ ಅನುಷ್ಠಾನ ಅವಶ್ಯವಾಗಿ ಆಗಬೇಕಿದೆ  ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಹೊಣೆಯಾಗಿದೆ ಎಂದು ಶಾಲಾ ಇಕೋ ಕ್ಲಬ್ ಸಂಚಾಲಕ  ಡಾ. ಶೇಖರ ಹಲಸಗಿ ಅಭಿಪ್ರಾಯ ಪಟ್ಟರು.

ಶ್ರೀಮತಿ ಎ ಎಸ್ ಅಡಕಿ, ಕಾಂಚನ ಕದ್ದು, ಎಲ್ ಎನ್ ಕಣಬರಗಿ, ರಾಧಾ ಬಾಗಲ್ಕೋಟ, ಅಂಬಿಕಾ ಹಂಚಿನಮನಿ, ಸಸ್ಯ ಪೋಷಣೆಯ ಪ್ರತಿಜ್ಞೆ ಗೈದರು. ವಿದ್ಯಾರ್ಥಿ ಪ್ರತಿನಿಧಿ ಬಸಪ್ಪ ಅಂಬಡಗಟ್ಟಿ, ಮೋನಿಕಾ ತಳವಾರ,ಲಾವಣ್ಯ ಸಂಗನ್ನವರ, ಗುಂಡು ಒಡ್ಡಿನ, ಶಿವಾನಂದ ಮೊಕಾಶಿ,ಶಿವಾನಂದ ತೇಗುರ, ಮಣಿಕಂಠ, ಸಸಿಗಳನ್ನು ದತ್ತು ಪಡೆದು  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group