spot_img
spot_img

ಮುಂಡರಗಿಯಲ್ಲಿ ಪಂ. ಪುಟ್ಟರಾಜ ಉತ್ಸವ-೨೦೨೩ ಆಚರಣೆ

Must Read

- Advertisement -

ಪುಟ್ಟರಾಜರು ಹುಟ್ಟಿದ ಮಾರ್ಚ್ ೩ ರಂದು ಕಲಾವಿಕಾಸ ದಿನಾಚರಣೆ ಎಂದು ಆಚರಿಸಲು ಸರಕಾರಕ್ಕೆ ಒತ್ತಾಯಿಸುತ್ತೇವೆ – ಚನ್ನವೀರಶ್ರೀ

ಡಾ. ಪಂ. ಪುಟ್ಟರಾಜರು ಹುಟ್ಟಿದ ದಿನ ಮಾರ್ಚ್ ೩ರಂದು, ಕಲಾವಿಕಾಸ ದಿನಾಚರಣೆ ಎಂದು ಪೂಜ್ಯರ ಹುಟ್ಟು ಹಬ್ಬವನ್ನು ಸರಕಾರದಿಂದ ಆಚರಿಸಬೇಕು ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸರ್ಕಾರಕ್ಕೆ ಒತ್ತಾಯಿಸಿದರು. ಅವರು, ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನಿಶ್ವರ ಸಂಸ್ಥಾನ ಮಠದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ರಾಜ್ಯ ಘಟಕ ಗದಗ ಆಯೋಜಿಸಿದ್ದ, ಪಂ. ಪುಟ್ಟರಾಜ ಉತ್ಸವವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. 

ಪುಟ್ಟರಾಜ ಸೇವಾ ಸಮಿತಿಯಿಂದ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡು ಆಧುನಿಕ ವಚನಕಾರರಿಗೆ ವೇದಿಕೆ ನೀಡಲು ಯೋಚಿಸಿದ್ದೇವೆ. ಆಧುನಿಕ ವಚನಕಾರರಲ್ಲಿ ಬಹುಎತ್ತರದ ಸ್ಥಾನದಲ್ಲಿ ಇರುವ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳೇ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಬೇಕು ಎಂದು ಅಭಿಪ್ರಾಯಪಟ್ಟರು.

- Advertisement -

ಡಾ. ಪಂ. ಪುಟ್ಟರಾಜ ಉತ್ಸವ ಬದಲಾಗಿ ಪಂಚಾಕ್ಷರಿ ಪುಟ್ಟರಾಜ ಉತ್ಸವವನ್ನಾಗಿ ಆಚರಿಸಬೇಕು ಎಂದು ನಾಡೋಜ ಡಾ. ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು. ಉತ್ಸವದ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು. ನೇತೃತ್ವ ವಹಿಸಿಕೊಂಡಿದ್ದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಡಾ. ಕಲ್ಲಯ್ಯ ಅಜ್ಜನವರು ಮಾತನಾಡಿ, ಪಂ. ಪುಟ್ಟರಾಜ ಕವಿ, ಗವಾಯಿಗಳವರ ಜಯಂತಿಯನ್ನು ಕಲಾ ವಿಕಾಸ ದಿನಾಚರಣೆಯಾಗಿ ಆಚರಿಸಬೇಕು ಎನ್ನುವ ಪುಟ್ಟರಾಜ ಸೇವಾ ಸಮಿತಿಯ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಸಮಿತಿಯೊಂದಿಗೆ ಭಕ್ತರೆಲ್ಲ ಸೇರಿ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.

ರೇವಣಸಿದ್ದಯ್ಯ ಹಿರೇಮಠ ಚಿಂಚೋಳಿ, ಡಾ. ಸುಮಾ ಹಡಪದ ಹಳಿಯಾಳ, ಡಾ. ನಿಂಗೂ ಸೊಲಗಿ ಮುಂಡರಗಿ, ಡಾ. ಪಿ. ಬಿ. ಹಿರೇಗೌಡರ್ ಮುಂಡರಗಿ, ಮಳ್ಳಪ್ಪ ಮಾಸ್ಟರ್ ಗುಡಿಸಲಮನಿ ಗುಡ್ಡದ ಬೂದಿಹಾಳ, ಸಂಗೀತ ಗುರು, ರೇವಣಸಿದ್ದಪ್ಪ ಎಂ. ಕೆ. ದಾವಣಗೆರೆ, ಇವರುಗಳಿಗೆ ಡಾ. ಪಂ. ಪುಟ್ಟರಾಜ ಕೃಪಾ ಭೂಷಣ ರಾಷ್ಟ್ರೀಯ  ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.  

- Advertisement -

ಇದೇ ಸಂದರ್ಭದಲ್ಲಿ ವೇ.ಮೂರ್ತಿ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಸಂಪಾದಿಸಿದ ಪುಟ್ಟರಾಜರು ಬರೆದ ಗುರು ವಚನ ಪ್ರಭ ವಚನಗಳ ವಿಶ್ಲೇಷಣಾ ಲೇಖನಗಳ ಸಂಕಲನ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಪೂಜ್ಯ ಕಲ್ಲಯ್ಯ ಅಜ್ಜನವರ ತುಲಾಭಾರ ಭಕ್ತಿ ಸೇವೆಯನ್ನು ನಾಗೇಶ್ ಹುಬ್ಬಳ್ಳಿ ಪರಿವಾರದವರು ವಹಿಸಿಕೊಂಡಿದ್ದರು. ಇದಕ್ಕೂ ಮುನ್ನ ಸಂಜೆ ಐದು ಗಂಟೆಗೆ ಕೋಟೆಯ ಆಂಜನೇಯ ದೇಸ್ಥಾನದಿಂದ ಅನ್ನದಾನೇಶ್ವರ ಮಠದವರಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳೆಯರಿಂದ ಪೂರ್ಣ ಕುಟುಂಬ ಅಕ್ಕನ ಬಳಗದವ ಆರತಿ ಮತ್ತು ವಾದ್ಯ ವೈಭವಗಳಿಂದ ಪೂಜ್ಯ ಪುಟ್ಟರಾಜ ಹಾಗೂ ಹಾನಗಲ್ಲ ಕುಮಾರ ಶಿವಯೋಗಿಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಶಾಸಕ ರಾಮಕೃಷ್ಣ ದೊಡಮನಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವವಣಿಗೆಗೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಕೋಷ್ಯಾಧ್ಯಕ್ಷರಾದ ಮುಂಡರಗಿ ಪುರಸಭೆಯ ಸದಸ್ಯರಾದ ನಾಗೇಶ್ ಹುಬ್ಬಳ್ಳಿ ಇವರು ವಹಿಸಿಕೊಂಡಿದ್ದರು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಕವಿತಾ ಉಳ್ಳಾಗಡ್ಡಿ, ಕರಿಬಸಪ್ಪ ಹಂಚಿನಾಳ, ಡಾ ಭೀಮಸಿಂಗ್ ರಾಥೋಡ್, ಪ್ರಕಾಶ್ ಹೊಸಮನಿ, ದಾವಣಗೆರೆಯ ವಿನಾಯಕ ಪಿ ಬಿ, ಕಲಾವಿದ ಮಹಿಬೂಬಸಾಬ ಬೆಟಗೇರಿ, ಮಲ್ಲಿಕಾರ್ಜುನ ಕುಂಬಾರ, ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಮಂಜುನಾಥ ಹಳ್ಳೂರಮಠ ಬೆಳಧಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ದೇವು ಹಡಪದ ತಿಪ್ಪಾಪೂರ, ಜಿಲಾ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮುಧೋಳ ಜಿಲಾ ಸಂಚಾಲಕರು, ಶಿವು ವಾಲಿಕಾರ ಮಕ್ತುಂಪುರ. ಶರಣಯ್ಯ ಅಲ್ಲಾಪೂರ ಸಾ|| ಐನೋಳ್ಳಿ. ಚಿಂಚೋಳಿ, ಶರಣಬಸಪ್ಪ ಹೊಸಮನಿ ಚಿಂಚೋಳ್ಳಿ. ಬಸವರಾಜ ನೀಲಪ್ಪ ಸಿದ್ದಣ್ಣವರ ಸಂಗೀತ ಶಿಕ್ಷಕರು ಸಾ. ಡಂಬಳ. ಕೆ. ನಾಗರಾಜ ಮುಖ್ಯೆ ಶರಣಪ್ಪ ಹೊಸಮನಿ ಅಶೋಕ ಲ. ಚೂರಿ ಉಪಸ್ಥಿತರಿದ್ದರು.

ಕುಮಾರಿ ನಕ್ಷತ್ರ ಹಡಪದ ಸಂಗಡಿಗರು ಪ್ರಾರ್ಥನಾ ಸಂಗೀತ ನಡೆಸಿಕೊಟ್ಟರು. ಮಂಜುನಾಥ್ ಮುಧೋಳ್ ಸ್ವಾಗತಿಸಿದರು ಶಿವು ವಾಲಿಕಾರ ವಂದಿಸಿದರು. ಕಲಾವಿದ ಬಸವರಾಜ ನೆಲಜರಿ ಹಾಗೂ ನಿರ್ಮಲ ಶೇರವಾಡೆ ಕಾರ್ಯಕ್ರಮವನ್ನು ನಿರೂಪಿಸಿದರು ಸಭಾ ಕಾರ್ಯಕ್ರಮದ ನಂತರ ಪ್ರಶಸ್ತಿ ಪುರಸ್ಕೃತರಿಂದ ಮತ್ತು ಸ್ಥಳೀಯ ಕಲಾವಿದರಿಂದ  ಶಾಸ್ತ್ರೀಯ, ಸುಗಮ, ವಚನ ಸಂಗೀತ ಕಾರ್ಯಕ್ರಮ ನಡೆದವು

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group