- Advertisement -
ಯಲ್ಲಾಪುರ (ಉತ್ತರ ಕನ್ನಡ ) – ಸೋಮವಾರ 29.01.2024 ರಂದು ಸಂಜೆ 7 ಏಳು ಘಂಟೆಗೆ, ತಾಲೂಕಿನ ತೇಲಂಗಾರಿನಲ್ಲಿ ಮೈತ್ರಿ ಕಲಾ ಬಳಗ(ರಿ) ಬೆಳ್ಳಿಹಬ್ಬದ ಸಾಂಸ್ಕೃತಿಕ ಉತ್ಸವದಲ್ಲಿ ‘ತಟ್ಟೆಇಡ್ಲಿ’ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಎ.ಎನ್.ರಮೇಶ್. ಗುಬ್ಬಿಯವರು ರಚಿಸಿ, ನಿರ್ದೇಶಿಸಿರುವ ಈ ನಾಟಕವನ್ನು ಕೈಗಾದ ‘ರಂಗ ತರಂಗ’ದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ.
ರಸಿಕರ ಆಗಮನದಿಂದ ಬೆಳ್ಳಿಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು. ತಟ್ಟೆಇಡ್ಲಿಯ ಸ್ವಾದಕ್ಕೆ ಇನ್ನಷ್ಟು ಸೊಬಗು ಹೆಚ್ಚಲಿದೆ. ತಪ್ಪದೆ ಬನ್ನಿ ಎಂದು ನಿರ್ದೇಶಕ ಎ.ಎನ್.ರಮೇಶ್.ಗುಬ್ಬಿ ಹಾಗೂ ರಂಗತರಂಗ, ಕೈಗಾದ ಬಳಗದವರು ಆಗ್ರಹಿಸಿದ್ದಾರೆ.