ಸಿಂದಗಿ: ಹಿಂದಿನ ಗುರುಕುಲ ಆಶ್ರಮ ಪದ್ದತಿಯಂತೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವಂತೆ ಗುರುಗಳನ್ನು ಪೂಜ್ಯನೀಯ ಭಾವನೆಯಿಂದ ನೋಡಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಒಂದು ಮೌಲ್ಯ ಬರುತ್ತದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿ, ಈ ಕ್ಷೇತ್ರದಲ್ಲಿ ಗ್ರಾಮೀಣ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣ, ಪದವಿ ಪೂರ್ವ, ಪದವಿ ಹೀಗೆ ಅನೇಕ ವೃತ್ತಿ ತರಬೇತಿ ಕೇಂದ್ರಗಳನ್ನು ತೆರೆಯುವ ಮೂಲಕ ಶಿಕ್ಷಣದ ಕ್ರಾಂತಿಯನ್ನೆ ಹರಿಸಲಾಗಿದೆ. ಮುಂದಿನ ಮಕ್ಕಳ ಶೈಕ್ಷಣಿಕ ತಕ್ಕಂತೆ ಶಿಕ್ಷಣ ಸಂಸ್ಥೆಗಳನ್ನು ತರುವುದಗಿ ಭರವಸೆ ನೀಡಿದರು.
ಪ್ರಾಚಾರ್ಯ ಸತೀಶಕುಮಾರ ಗಾಯಕವಾಡ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗ್ರಹ ಮಂಡಳಿ ಎಇಇ ಸಾದೀಕ, ಎನ್.ಎಸ್.ಎಸ್ ಅಧಿಕಾರಿ ವೈ.ಸಿ.ಕೇಳಗೇರಿ, ಕೃಷ್ಣಾ ರೆಡ್ಡಿ, ತೇಜಶ್ವಿನಿ ಜಿ.ಎಂ, ನೀಲಮ್ಮ ಹತ್ತಳ್ಳಿ, ಡಾ. ಸೈಯದ ಮುಜೀಬ್‍ಅಹ್ಮದ್, ರಿಯಾಜ್ ಅಹ್ಮದ ಜಾಗೀರದಾರ, ಆಯಿಶಾ ಸಿದ್ದಿಖಾ, ಶಿರಾಜುದ್ದಿನ ಖಾದ್ರಿ, ಸಿದ್ದಪ್ಪ ಬೊಮ್ಮನಳ್ಳಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.