spot_img
spot_img

ಬೈಲಹೊಂಗಲ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾದ ಡಾ. ಶಾಂತಿನಾಥ ದಿಬ್ಬದ ಅವರಿಗೆ ಆಹ್ವಾನ

Must Read

- Advertisement -

ಬೈಲಹೊಂಗಲ: ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಫೆಬ್ರವರಿ 3 ರಂದು ನಡೆಯಲಿರುವ ಬೈಲಹೊಂಗಲ ತಾಲೂಕು 7ನೆಯ ಕನ್ನಡ ಸಾಹಿತ್ಯ  ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ಸಾಹಿತಿ ಡಾ.ಶಾಂತಿನಾಥ ದಿಬ್ಬದ ಅವರಿಗೆ ಪರಿಷತ್ತು ಹಾಗೂ ಸ್ವಾಗತ ಸಮಿತಿಯ ವತಿಯಿಂದ ಆತ್ಮೀಯವಾಗಿ ಆಹ್ವಾನ ನೀಡಲಾಯಿತು.

ಧಾರವಾಡದ ಅವರ ನಿವಾಸದಲ್ಲಿ ಅತ್ಯಂತ ಸಂತಸದಿಂದ ಆಹ್ವಾನ ಸ್ವೀಕರಿಸಿದ ಡಾ. ಶಾಂತಿನಾಥ ದಿಬ್ಬದ ಮಾತನಾಡಿ, ಹುಟ್ಟೂರಿನಲ್ಲಿ ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದು ಬಹಳ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾಗತ ಸಮಿತಿಯ ಅಧ್ಯಕ್ಷರಾದ ಈಶ್ವರ ಉಳ್ಳೇಗಡ್ಡಿ ಮಾತನಾಡಿ, ಸಮ್ಮೇಳನಕ್ಕೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಡಾ. ಶಾಂತಿನಾಥ ದಿಬ್ಬದ ಅವರ ವ್ಯಕ್ತಿತ್ವ ಸಮ್ಮೇಳನಕ್ಕೆ ಮೆರಗು ತಂದಿದೆ ಎಂದರು.

- Advertisement -

ಪರಿಷತ್ತಿನ ಮಾರ್ಗದರ್ಶಿ ಮಂಡಳಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಬಿ.ಕೆ. ತಲ್ಲೂರ ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ, ಗೌರವ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಪದಾಧಿಕಾರಿಗಳಾದ ಅನಿಲ ರಾಜನ್ನವರ, ಲಕ್ಷ್ಮೀ ಮುಗಡ್ಲಿಮಠ, ಶಶಿಕಲಾ ಯಲಿಗಾರ, ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಬಸನಗೌಡ ಪಾಟೀಲ, ಉಪಾಧ್ಯಕ್ಷರಾದ ಉದಯ ಬೆಳಗಾವಿ, ಕಾರ್ಯದರ್ಶಿಗಳಾದ ಗುರುದೇವ ಮೂಲಿಮನೆ, ಶಶಿಧರ ಬಂದೆಕ್ಕನವರ, ಶಶಿಧರ ಹಣಬರಟ್ಟಿ, ಅಣ್ಣಪ್ಪ ಸೂಲನ್ನವರ, ಬಾಳೇಶ ಉಪ್ಪಾರ, ರಾಜಶೇಖರ ಹೊನ್ನಪ್ಪನವರ, ರಾಮು ಯರಗಟ್ಟಿ, ಅಜಿತ ಉಪಾಧ್ಯೆ, ಗಂಗನಗೌಡ ಪಾಟೀಲ, ಶಂಭು ರುದ್ರಾಪೂರ, ರಾಘವೇಂದ್ರ ಸುಂಕದ ಉಪಸ್ಥಿತರಿದ್ದರು. ರಾಜು ಹಕ್ಕಿ ಸ್ವಾಗತಿಸಿದರು. ಅನಂತ ಮರೆಣ್ಣವರ ವಂದಿಸಿದರು.

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
error: Content is protected !!
Join WhatsApp Group