spot_img
spot_img

ದಸ್ತು ಬರಹಗಾರರಿಗೆ ನೊಂದಣಿಯಲ್ಲಿ ಕಾವೇರಿ 2.0 ಸಾಫ್ಟ್ ವೇರ ಅಳವಡಿಕೆ ಬಗ್ಗೆ ಮಾಹಿತಿ

Must Read

- Advertisement -

ಸಿಂದಗಿ: ಸಾರ್ವಜನಿಕರ ಆಸ್ತಿಗಳ ನೊಂದಣಿಯಾಗುವಲ್ಲಿ ವಿಳಂಬ ನೀತಿಯಲ್ಲಿ ಸರಳೀಕರಣಗೊಳಿಸಿ ಸರಕಾರದ ನೊಂದಣಿ ಮತ್ತು ಮುದ್ರಾಂಕ ಇಲಾಖೆಯು ಹೊಸದಾಗಿ ಕಾವೇರಿ 2.0 ತತ್ರಾಂಶವನ್ನು ಜಾರಿಗೆ ತಂದಿದ್ದು ಇದರ ಅನುಷ್ಠಾನದ ಕುರಿತು ಜಿಲ್ಲೆಯ ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ಗಣಕಯಂತ್ರ ನಿರ್ವಾಹಕರಿಗೆ ತರಬೇತಿ ಪಡೆದುಕೊಂಡಿದ್ದು ಎಲ್ಲ ತಾಲೂಕು ನೊಂದಣೀ ಇಲಾಖೆ ಸಿಬ್ಬಂದಿ ವರ್ಗ ಈ ತತ್ರಾಂಶದ ತರಬೇತಿ ಪಡೆದು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಿ ಎಂದು ಜಿಲ್ಲಾ ನೊಂದಣಾಧಿಕಾರಿ ಜಿ.ಆರ್.ನಾಡಗೌಡ ಹೇಳಿದರು.

ಪಟ್ಟಣದ ಉಪನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ  ದಸ್ತು ಬರಹಗಾರರಿಗೆ ನೊಂದಣಿಯಲ್ಲಿ ಕಾವೇರಿ 2.0 ತತ್ರಾಂಶದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಹಿಂದೆ ಈ ಸ್ವತ್ತು, ನೊಂದಣಿ ಮತ್ತು ಋಣಬಾರ ಪತ್ರ ಹೀಗೆ ರೈತರಿಗೆ ಬೇಕಾಗುವ ದಾಖಲೆಗಳನ್ನು ನೀಡುವಲ್ಲಿ ಕಾವೇರಿ 1.0 ತತ್ರಾಂಶದಲ್ಲಿ ತುಂಬಾ ಸಮಸ್ಯೆಯುಂಟಾಗಿ ಹಲವಾರು ಜನರಿಂದ ಸರಕಾರಕ್ಕೆ ದೂರುಗಳು ಹೋಗಿ ನೊಂದಣಿ ಅಧಿಕಾರಿಗಳಿಗೆ ಸರಕಾರದಿಂದ ಛೀಮಾರಿ ಅನುಭವಿಸಿದ್ದೇವೆ ಅದಕ್ಕೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ದಾಖಲೆಗಳನ್ನು ನೀಡಬೇಕು ಎಂದು ಕೆಲ ತಜ್ಷರ ಸಲಹೆ ಪಡೆದುಕೊಂಡು ವೇಗವಾದ ತಂತ್ರಜ್ಞಾನ ಅಳವಡಿಕೆಯ ಕಾವೇರಿ 2.0 ತತ್ರಾಂಶದ ಮೂಲಕ ತ್ವರಿತಗತಿಯಲ್ಲಿ ದಾಖಲೆಗಳನ್ನು ಪಡೆಯಬಹುದು ಎನ್ನುವ ಬಗ್ಗೆ ಎಲ್ಲ ತಾಲೂಕಾ ನೊಂದಣಿ ಅಧಿಕಾರಿಗಳಿಗೆ ತರಬೇತಿ ನೀಡಿದ್ದು ಈ ಸಾಪ್ಟವೇರದ ತರಬೇತಿ ಪಡೆದುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ ಎಂದು ಸಲಹೆ ನೀಡಿದರು.

ತಾಲೂಕಾ ಉಪನೊಂದಾಣಿಧಿಕಾರಿ ಎಂ.ಆರ್.ಪಾಟೀಲ ಮಾತನಾಡಿ, ಈ ಮೊದಲು ಸಾರ್ವಜನಿಕ ದಾಖಲೆಗಳನ್ನು ನೀಡುವಲ್ಲಿ ತಾಂತ್ರಿಕ ದೋಷದಿಂದ ವಿಳಂಬ ನೀತಿ ಅನುಭವಿಸುವಂತಾಗಿತ್ತು ಇದರಿಂದ ಕೆಲವರು ದಾಖಲೆ ಸಕಾಲಕ್ಕೆ ದೊರಕದೇ ತೊಂದರೆಗಳನ್ನು ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಹೊಸ ತತ್ರಾಂಶದ ಮೂಲಕ ಸಾರ್ವಜನಿಕರಿಗಾಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿದ್ದು ಇದರ ತರಬೇತಿ ಕೂಡಾ ಪಡೆದುಕೊಳ್ಳಲಾಗಿದ್ದು ಇನ್ನು ಮುಂದೆ ಸಾರ್ವಜನಿಕರೇ ಈ ತತ್ರಾಂಶವನ್ನು ತೆರೆದು ಎಲ್ಲ ದಾಖಲೆಗಳನ್ನು ನೊಂದಣಿ ಮಾಡಿದಲ್ಲಿ ತ್ವರಿತಗತಿಯಲ್ಲಿ ಸುಲಭವಾಗಿ ನೊಂದಣಿ ಮಾಡಬಹುದು ಕಾರಣ ದಸ್ತು ಬರಹಗಾರರು ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ಸರಳೀಕರಣಗೊಳಿಸಿ ಎಂದರು.

- Advertisement -

ನೊಂದಣಿ ಇಲಾಖೆಯ ಅಭಿಯಂತರರಾದ ಚಂದ್ರಶೇಖರ ಕೊಣ್ಣೂರ ತರಬೇತಿ ನೀಡಿದರು.  

ಈ ಸಂದರ್ಭದಲ್ಲಿ ದಸ್ತು ಬರಹಗಾರಾದ ಶ್ರೀಮಂತ ಮಲ್ಲೇದ, ಶ್ಯಾಮ ಪತ್ತಾರ, ಅಶೋಕ ಬಜಂತ್ರಿ, ಚಂದ್ರಶೇಖರ ಪತ್ತಾರ ಸೇರಿದಂತೆ ಅನೇಕ ದಸ್ತು ಬರಹಗಾರರು ಇದ್ದರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group