spot_img
spot_img

ಹಳ್ಳೂರ ಚೆಕ್ ಪೋಸ್ಟ್ ಗೆ ಅರಭಾವಿ ಚುನಾವಣಾಧಿಕಾರಿ ಪ್ರಭಾವತಿ ಕೆ. ಭೇಟಿ

Must Read

- Advertisement -

ಮೂಡಲಗಿ: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅರಭಾವಿ ಮತಕ್ಷೇತ್ರ ಮತ್ತು ಬೆಳಗಾವಿ ಜಿಲ್ಲಾ ಗಡಿಭಾಗದ ತಾಲೂಕಿನ ಹಳ್ಳೂರ ಗ್ರಾಮದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಗೆ  ಬೈಲಹೊಂಗಲ ಉಪವಿಭಾಗಾಧಕಾರಿ ಹಾಗೂ ಅರಭಾವಿ ಮತಕ್ಷೇತ್ರದ ಚುನಾವಣಾಧಿಕಾರಿ ಪ್ರಭಾವತಿ ಪಿ. ಅವರು ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಚುನಾವಣಾಧಿಕಾರಿ ಪ್ರಭಾವತಿ ಕೆ. ಅವರು ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯಲು ಅರಭಾವಿ ಮತ ಕ್ಷೇತ್ರದಲ್ಲಿ ಹಳ್ಳುರ ಮತ್ತು ಯಾದವಾಡದಲ್ಲಿ ಕಳೆದ ನಾಲ್ಕು ದಿನಗ ಹಿಂದೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿದ್ದು ಈ ಚೆಕ್ ಪೋಸ್ಟ್ ಗಳಲ್ಲಿ ದಿನಾಲೂ 24 ಗಂಟೆಗಳ ಕಾಲ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದು ಒಳ ಬರುವ ಮತ್ತು ಹೊರ ಹೋಗುವ ಪ್ರತಿ ವಾಹನಗಳ ಮೇಲೆ ನಿಗಾ ವಹಿಸಿ ತಪಾಸಣೆ ಮಾಡುತ್ತಾರೆ ಹಾಗೂ ಎರಡು ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರು/ಮಾಹಿತಿಗಾಗಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಹಾಯವಾಣಿ ಸಂಖ್ಯೆ 8023900863 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. 

- Advertisement -

ಮೂಡಲಗಿ ತಹಶೀಲ್ದಾರ ಪ್ರಶಾಂತ ಚನಗೊಂಡ, ಸ್ಥಿರ ಕಣ್ಗಾವಲು ಪಡೆಯ ಅಧಿಕಾರಿ ಹಣಮಂತ ತಾಳಿಕೋಟಿ,  ಕಂದಾಯ ಇಲಾಖೆಯ ಆರ್.ಐ.ಹೊಸಮನಿ, ಬಿ.ಎಲ್.ಕೆಂಚರಡ್ಡಿ, ಅರ್ಜುನ ಪೂಜೇರಿ, ಕೆ.ಟಿ.ಚೌವ್ಹಾನ ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group