spot_img
spot_img

ಕಿತ್ತೂರು ತಾಲೂಕು ಕ.ಸಾ.ಪ ಘಟಕದಿಂದ ವೇಬಿನಾರ ಉಪನ್ಯಾಸ

Must Read

- Advertisement -

ತಮ್ಮ ಅನುಭವ ಮತ್ತು ಆಗುಹೋಗುಗಳ ಲಿಖಿತ ರೂಪಗಳೇ ಕಥೆಗಳು. ಡಾ. ಪದ್ಮಿನಿ ಅಭಿಮತ.

ಇದೇ ರವಿವಾರ ದಿ. 15 ರಂದು ಕಿತ್ತೂರು ತಾಲೂಕಾ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಉಪನ್ಯಾಸ ಮಾಲಿಕೆಯ 7ನೇ ಕಾರ್ಯಕ್ರಮ ಜರುಗಿತು.

ಆಶಯ ನುಡಿಗಳನ್ನಾಡಿದ ಸಾಹಿತಿ ಮಂಜುನಾಥ್ ಕಳಸಣ್ಣವರ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆಗಳು ಮಹತ್ವದ ಪಾತ್ರವಹಿಸುತ್ತವೆ. ಕಥೆಗಳು ಜೀವನದ ಶೈಲಿಗೆ ಜೀವಂತ ಉದಾಹರಣೆಗಳು ಎಂದರು.

- Advertisement -

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ‘ಕನ್ನಡ ಸಾಹಿತ್ಯದಲ್ಲಿ ಮಹಿಳಾ ಕಥಾಲೋಕ ‘ ಕುರಿತು ಮಾತನಾಡಿದ ಡಾ. ಪದ್ಮಿನಿ ನಾಗರಾಜು ಎಲ್ಲ ಆಯಾಮಗಳಲ್ಲಿ ಹಂತಹಂತವಾಗಿ ಬೆಳೆಯುತ್ತಾ ಬಂದ ಸಾಹಿತ್ಯದ ಪ್ರಕಾರಗಳಲ್ಲಿಯ ಸಣ್ಣ ಕಥೆಗಳು ಮೊದಲಿಗೆ ಪಾಶ್ಚಾತ್ಯರ ಪ್ರಭಾವದಿಂದ ಬಂದವು. ಸಣ್ಣ ಕಥೆಗಳಿಗೆ ನೈಜತೆ ಮತ್ತು ಮೆರಗು ಬಂದಿದ್ದು ಮಾಸ್ತಿಯವರಿಂದ.

ನಂತರ ‘ಬದುಕಿಗಾಗಿ ಕಲೆ’ ಎಂಬ ಹಂತ ಬಂದಾಗ ರಷ್ಯಾ ದೇಶದ ಸಾಹಿತ್ಯದಿಂದ ಪ್ರೇರಿತವಾಗಿ ಬದುಕಿನ ಕಥೆಗಳು ಆರಂಭಗೊಂಡವು. ಇತಿಹಾಸ ಗಮನಿಸಲಾಗಿ ಕಲಿತವರು, ಕಲಿಯದವರು ಎಲ್ಲರೂ ಬರೆಯಲು ಆರಂಭವಾದದ್ದು 12ನೇ ಶತಮಾನದ ಶರಣರ ಕಾಲದಲ್ಲಿ ಎನ್ನಬಹುದು.

ಈ ಹಂತದಲ್ಲಿ ಮಹಿಳಾ ಸಮುದಾಯ ಸಹ ಬರೆಯಲು ಆರಂಭಿಸಿದ್ದು. ಸಂಚಿಹೊನ್ನಮ್ಮ, ಆಯ್ದಕ್ಕಿ ಲಕ್ಕಮ್ಮ,ಅತ್ತಿಮಬ್ಬೆ ಹೀಗೆ ಸ್ತ್ರೀಯರು,ಕೀರ್ತನಾಕಾರರು ಬರೆಯತೊಡಗಿದರು. ಜೀವನದ ಆಗುಹೋಗುಗಳು ಬರವಣಿಗೆಯ ರೂಪಕ್ಕೆ ಬಂದವು. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಬೇಗ ವಿಧವೆಯಾದಾಗ ಕಾಲಕಳೆಯಲು ಬರವಣಿಗೆ ಅವರ ಅಸ್ತ್ರವಾದವು.

- Advertisement -

ಆದರೆ ಪುರುಷ ಪ್ರಧಾನ ವ್ಯವಸ್ಥೆಗೆ ಸೀಮಿತವಾಗಿದ್ದ ಕಥಾಸಾಹಿತ್ಯ ಒಮ್ಮೆಲೆ ಬೆಳಕಿಗೆ ಬಂದದ್ದು ತ್ರಿವೇಣಿ,ಎಂ.ಕೆ. ಇಂದಿರಾ, ಸಾವಿತ್ರಮ್ಮ ನಂತರದಲ್ಲಿ ಗೀತಾ ಮತ್ತು ಹೆಚ್. ಎಸ್. ಪಾರ್ವತಿ ಕಥೆಗಳನ್ನು ಬರೆದರು. ಈಚಿನ ದಿನಗಳಲ್ಲಿ ವೈದ್ಯಲೋಕ ಸಹ ಕಥೆಗೆ ತೆರೆದುಕೊಂಡಿತು. ಡಾ. ಅನುಪಮಾ ನಿರಂಜನ ವೈದ್ಯಕೀಯವಾಗಿ ಮಹಿಳಾ ಕಷ್ಟಗಳ ಕುರಿತು ಕಥೆ ಬರೆದರು. ಗೀತಾ ನಾಗಭೂಷಣ್ ರವರು ಬೈಗುಳಗಳನ್ನು ಅಸ್ತ್ರವಾಗಿ ಬರೆದರು.

ಬಿ. ಟಿ. ಲಲಿತಾ ನಾಯಕ ಸ್ತ್ರೀ ವೇದನೆ ಕುರಿತು ಬರೆದರು. ವೈದೇಹಿ, ಜಯಶ್ರೀ ದೇಶಪಾಂಡೆ,ಕಸ್ತೂರಿಬಾಯಿ ಇತ್ತೀಚಿಗೆ ನೀಲಗಂಗಾ ಚರಂತಿಮಠ, ಕವಿತಾ ಕುಸುಗಲ್, ಸುನಂದಾ ಎಮ್ಮಿ, ಜ್ಯೋತಿ ಬದಾಮಿ ಅನೇಕ ಆಯಾಮಗಳಲ್ಲಿ ಕಥೆಗಳನ್ನು ಬರೆಯುತ್ತಿದ್ದಾರೆ. ಮಹಿಳಾ ಕಥೆಗಾರ್ತಿಯರು ತಮ್ಮ ಅನುಭವ, ಕಷ್ಟ, ಆಗುಹೋಗುಗಳು ಸುತ್ತಲಿನ ಪರಿಸರ, ತೊಂದರೆ ಮುಂತಾದವುಗಳನ್ನು ಅನುಸರಿಸಿ ಬರೆಯುತ್ತಿದ್ದಾರೆ ಎಂದು ಮಹಿಳಾ ಕಥಾಲೋಕವನ್ನು ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲ ಮೆಟಗುಡ್ ರವರು ಮಾತನಾಡಿ ಮಹಿಳಾ ಕಥೆಗಾರ್ತಿಯರು ಬರೆದ ಜೀವನಕ್ಕೆ ಹತ್ತಿರದ ಮತ್ತು ಜೀವನ ರೂಪಿಸುವ ಅನೇಕ ಕಥೆಗಳು ಇನ್ನೂ ಬೆಳಕಿಗೆ ಬರಬೇಕಾಗಿದೆ. ಕತೆಗಾರ್ತಿಯ ರನ್ನು ಸಹ ಗುರುತಿಸಬೇಕಾಗಿದೆ ಎಂದರು. ಅತಿಥಿಗಳಾಗಿ ಸಾಹಿತಿ ಮೋಹನ್ ಪಾಟೀಲ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸಿದ್ದಯ್ಯ ಹಿರೇಮಠ,ಸುರೇಶ ಮರಲಿಂಗಣ್ಣವರ್, ವೈ. ಬಿ. ಪೂಜೇರ, ಅಕ್ಕಮಹಾದೇವಿ ತೆಗ್ಗಿ, ದಾನೇಶ ಸಾಣಿಕೊಪ್ಪ ಬಸವರಾಜ್ ಗಾರ್ಗಿ,ದೀಪಿಕಾ ಚಾಟೆ, ಅವಳೇ ಕುಮಾರ್, ಜಯಶ್ರೀ ದೇಶಪಾಂಡೆ, ಎಂ. ವೈ. ಮೆಣಸಿನಕಾಯಿ, ಶಿವಾನಂದ ತಲ್ಲೂರ ಎಂ ಎಸ್ ಹೊಂಗಲ್, ನಿರ್ಮಲ ಬಟ್ಟಲ್, ಪದ್ಮಾವತಿ ಸಿಂಗದ,ಪುಷ್ಪ ಮುರುಗೋಡ, ರತ್ನಪ್ರಭಾ ಬೆಲ್ಲದ, ರೋಹಿನಿ ಯಾದವಾಡ, ಜಯಶ್ರೀ ನಿರಾಕಾರಿ, ಸುನಂದಾ ಎಮ್ಮಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಆರಂಭದಲ್ಲಿ ಸಿದ್ದಯ್ಯ ಹಿರೇಮಠ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಸಂಯೋಜಿಸಿ ನಿರ್ವಹಿಸಿದ ಶೇಖರ ಹಲಸಗಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೊನೆಯಲ್ಲಿ ಸಾಹಿತಿ ಹೇಮಾವತಿ ಸೋನೋಳ್ಳಿ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group