ಕೇಂದ್ರದ ನೂತನ ಸಚಿವರಿಂದ ಕೋವಿಡ್ ನಿಯಮ ಉಲ್ಲಂಘನೆ

Must Read

ಬೀದರ – ಕೇಂದ್ರದ ನೂತನ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಬೀದರಗೆ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳಿಂದ ನೂಕು ನುಗ್ಗಲಾಗಿದ್ದು ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಯಾಗಿದ್ದು ಕಂಡುಬಂದಿತು.

ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಭೀತಿಯಿದ್ದು ಸರ್ಕಾರ ಜನ ಸಾಮಾನ್ಯರಿಗೆ ನಿಯಮಗಳನ್ನು ಮಾಡುತ್ತಿದೆ ಆದರೆ ಸಚಿವರಿಗೆ ಮಾತ್ರ ಈ ನಿಯಮಗಳು ಅನ್ವಯಿಸಯವುದಿಲ್ಲವೇನೋ ಎನ್ನುವಂತಿದೆ.

ಇತ್ತ ತೆಲಂಗಾಣ ಗಡಿಯಲ್ಲೂ ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರನ್ನು ಪಕ್ಷದ ನೂರಾರು ಕಾರ್ಯಕರ್ತರು ಕುದುರೆಯ ಮೇಲೆ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತಂದರು. ಕೋವಿಡ್ ನಿಯಮಗಳನ್ನು ತೀರಾ ನಿರ್ಲಕ್ಷಿಸಿರುವುದು ಕಂಡುಬಂದಿತು.

ಸಚಿವರ ಈ ಮೆರವಣಿಗೆಯಲ್ಲಿ ಜನರಿಂದ ನೂಕು ನುಗ್ಗಲು ಉಂಟಾಗಿದ್ದು ಸಾಮಾಜಿಕ ಅಂತರ ಕಣ್ಮರೆಯಾಗಿತ್ತು. ಕೊರೋನಾ ಮಹಾಮಾರಿ ಹಬ್ಬಲು ಅತ್ಯಂತ ಪ್ರಶಸ್ತ ವೇಳೆ ಎಂಬಂತೆ ವಾತಾವರಣ ಅಲ್ಲಿ ಉಂಟಾಗಿತ್ತು. ಇಷ್ಟು ಜನರ ಗದ್ದಲ ಇದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಣ್ಣು ಮುಚ್ಚಿ ಕುಳಿತಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group