spot_img
spot_img

ಕರ್ನಾಟಕದ ಮಹಿಳೆಯರು ಅಬಲೆಯರಲ್ಲ ಜಗತ್ತಿಗೆ ಮಾದರಿಯಾದ ಧೀರ ಸಬಲೆಯರು

Must Read

spot_img
- Advertisement -

ಬೆಳಗಾವಿ: ಕರ್ನಾಟಕದ ಮಹಿಳೆಯರು ಅಬಲೆಯರಲ್ಲ. ಜಗತ್ತಿಗೆ ಮಾದರಿಯಾದ ಧೀರ ಸಬಲೆಯರು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಹೇಳಿದ್ದಾರೆ.

ಸೋಮವಾರದಂದು ನಗರದ ಲಿಂಗಾಯತ ಧರ್ಮ ಮಹಾಪೀಠದ ಸಭಾಗೃಹದಲ್ಲಿ ಏರ್ಪಡಿಸಲಾಗಿದ್ದ ಲಿಂಗಾಯತ ಧರ್ಮಗುರು ಬಸವಣ್ಣನವರ ಧರ್ಮಪತ್ನಿ ನೀಲಾಂಬಿಕಾ ತಾಯಿಯವರ 826 ನೇ ಲಿಂಗೈಕ್ಯ ದಿನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಮತ್ತು ಇಡಿ ವಿಶ್ವಕ್ಕೆ ಪ್ರಪ್ರಥಮ ಬಾರಿಗೆ ಪರಿಪೂರ್ಣ ಸಾಕ್ಷರ ಮಹಿಳೆಯರನ್ನು ನೀಡಿರುವದು ಬಸವಾದಿ ಶರಣರ ಬಹುದೊಡ್ಡ ಕೊಡುಗೆ. ಲಿಂಗಾಯತ ಧರ್ಮದ ಧೀರ ಮಹಿಳೆ ಅಕ್ಕಮಹಾದೇವಿಯವರು ವಿಶ್ವದ ಪ್ರಥಮ ಸಾಕ್ಷರ ಮಹಿಳೆ ಹಾಗೂ ವಚನಕಾರ್ತಿ. 1873 ರರವರೆಗೆ ಬ್ರಿಟನ್‍ನಲ್ಲಿಯೂ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಅವಕಾಶ ಇರಲಿಲ್ಲ. ಬ್ರಿಟನ್‍ನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಕಾನೂನು ಜಾರಿಗೆ ತರುವ 800 ವರ್ಷಗಳ ಮುನ್ನವೇ ಅನೇಕ ಬಸವಾದಿ ಶರಣೆಯರು ಅಕ್ಷರ ಕಲಿತು ಅತ್ಯಂತ ಅರ್ಥಪೂರ್ಣವಾದ ವಚನಗಳನ್ನು ವಚನ ಸಾಹಿತ್ಯಕ್ಕೆ ನೀಡಿದ್ದಾರೆ. ಸ್ವತಂತ್ರ ಚಳವಳಿಗೆ ನಾಂದಿ ಹಾಡಿದ್ದು ವೀರ ರಾಣಿ ಕಿತ್ತೂರು ಚನ್ನಮ್ಮ ಎಂದರು.

- Advertisement -

ಈ ನಾಡಿನ ಮಹಿಳೆಯರು ಅದ್ಭುತ ಸಾಹಿತ್ಯ ಕಟ್ಟಿ ಕೊಟ್ಟಿದ್ದಾರೆ. ಅನೇಕ ಸಾಮ್ರಾಜ್ಯಗಳನ್ನು ಉಳಿಸಿದ್ದಾರೆ. ವಚನ ಸಾಹಿತ್ಯದ ರಕ್ಷಣೆ ಮಾಡಿದ್ದಾರೆ. ನಮ್ಮ ಮಹಿಳೆಯರು ಧರ್ಮ, ದೇಶ ಮತ್ತು ಸಾಹಿತ್ಯ ರಕ್ಷಿಸುವ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತೆ ಸುನಿತಾ ದೇಸಾಯಿ ಅವರು, ಹೆಣ್ಣು ಮಕ್ಕಳು ಕೇವಲ ಗಂಡ ಮನೆ ಮಕ್ಕಳಿಗೆ ಸೀಮಿತವಾಗಬಾರದು. ತಮ್ಮ ಸುತ್ತಲಿನ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮ್ಮ ಸೇವೆಯನ್ನು ಗುರುತಿಸಿ ಸಾಮಾಜಿಕ ಸಂಘಟನೆಗಳು ಪ್ರಶಸ್ತಿ, ಸನ್ಮಾನಗಳನ್ನು ನೀಡಿದರೆ ಅವುಗಳಿಂದ ಪ್ರೇರಣೆಗೊಂಡು ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು. ನನಗೆ ನಾಲ್ಕು ವರ್ಷಗಳ ಹಿಂದೆ ಗುರುತಿಸಿ, ಬಸವ ಭೀಮ ಸೇನೆ ವತಿಯಿಂದ ನಿರ್ಭಯ ಗೌರಿ-ಗೌರಿ ನಮ್ಮ ಮಗಳು ಪ್ರಶಸ್ತಿ ನೀಡಿ ಗೌರವಿಸಿದ ನಂತರ 32 ಪ್ರಶಸ್ತಿಗಳು ಬಂದಿವೆ ಎಂದರು.

ಹಿರಿಯ ಸಾಹಿತಿ ಎ.ಎ.ಸನದಿ ಮಾತನಾಡಿ, ನಮ್ಮ ಜೀವನ ಸಮಾಜಮುಖಿಯಾಗಿರ ಬೇಕು. ದುರ್ಬಲರ, ಕಷ್ಟದಲ್ಲಿರುವವರ ಕಣ್ಣಿರೊರೆಸಬೇಕು. ನಮಗೆ ಅನ್ನ ನೀಡುವ, ಬದುಕಲು ಅವಕಾಶ ನೀಡಿರುವ ಭೂಮಿ ಮತ್ತು ನಿಸರ್ಗವನ್ನು ಪ್ರೀತಿಸಬೇಕು. ಈ ನಾಡಿನ ಜನಪದ ಮಹಿಳೆಯರು ದೇವರಿಗಿಂತ ಹೆಚ್ಚಾಗಿ ಭೂಮಿ ತಾಯಿಯನ್ನು ಗೌರವಿಸಿದ್ದಾರೆ. ನಾವು ಆ ಜನಪದರ ಆದರ್ಶ ಪಾಲಿಸಬೇಕು ಎಂದರು.

- Advertisement -

ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ ಗೋಣಿ, ಮಲಪ್ರಭಾ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಶೋಕ ಹುಲೆಪ್ಪನವರ ಮಾತನಾಡಿದರು.

ಕೋವಿಡನಿಂದಾಗಿ ಈ ವರ್ಷ ಎಪ್ರಿಲ್‍ನಲ್ಲಿ ಅಕ್ಕಹಾದೇವಿಯವರ ಜಯಂತಿ ಮಾಡಲು ಸಾಧ್ಯವಾಗದರಿಂದ ಇದೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸುಧಾ ಬಾಗಲಕೋಟ, ಸುಜಾತಾ ಛಲವಾದಿ ಮತ್ತು ದೀಪಾ ತಿರಕನ್ನವರ ಅವರುಗಳಿಗೆ ಸಾಕ್ಷರ ತಾಯಿ ಅಕ್ಕಮಹಾದೇವಿ ಹಾಗೂ ವೈದ್ಯಾಧಿಕಾರಿ ಡಾ. ಸರಸ್ವತಿ ಮಾಗಿ ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಶಿಕಲಾ ಕೊಡತೆ ಅವರಿಗೆ ನಾರಿಕುಲ ಚೇತನ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group