ಮಹಾಲಿಂಗಪೂರಕ್ಕೆ ಅನ್ಯಾಯ ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ

Must Read

ಬಾಗಲಕೋಟ – ಜಿಲ್ಲೆಯ ಮಹಾಲಿಂಗಪೂರ ಪಟ್ಟಣವು ಧಾರ್ಮಿಕ, ಐತಿಹಾಸಿಕ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವಾಣಿಜ್ಯಿಕ ದೃಷ್ಟಿಯಿಂದ ಹೆಸರುವಾಸಿಯಾಗಿದೆ. ಕಂದಾಯ ಇಲಾಖೆಗೆ ಅತೀ ಲಾಭದಾಯಕ ಪ್ರದೇಶವಾಗಿದೆ. ಆದರೆ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಸರ್ಕಾರಿ ಭೂಪ್ರದೇಶದ ಕ್ಷುಲ್ಲಕ ಕಾರಣ ನೀಡಿ ಅನೇಕ ಇಲಾಖೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಬೃಹತ್ ಮೊತ್ತದ ಆದಾಯವನ್ನು ಸರ್ಕಾರ ಬೇರೆ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ  ಶಿವಲಿಂಗ ಟಿರಕಿ ಆರೋಪಿಸಿದ್ದಾರೆ.

ಪಟ್ಟಣದ ಪುರಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಬರೆದಿರುವ ಅವರು, ಇತ್ತೀಚೆಗೆ ಪುರಸಭೆಯ ಕೆಲವು ಸರ್ವೇ ನಂಬರುಗಳನ್ನು ಬೆಳಗಲಿ ಪಟ್ಟಣ ಪಂಚಾಯಿತಿಗೆ ಬಿಟ್ಟು ಕೊಡಲಾಗಿದೆ. ಉಪಮುಖ್ಯಮಂತ್ರಿಗಳು ಮಹಾಲಿಂಗಪುರಕ್ಕೆ ಮಾತ್ರ ಅನ್ಯಾಯ ಮಾಡುತ್ತಿದ್ದಾರೆ‌. ತೇರದಾಳ ಶಾಸಕರು ಕೂಡ ವಿಶೇಷ ಹಣಕಾಸು ತಂದು ಇಲಾಖೆಗಳನ್ನು ಇಲ್ಲಿಯೇ ಉಳಿಸಬಹುದಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮಹಾಲಿಂಗಪೂರ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸ್ತಳಾಂತರಗೊಂಡ ಇಲಾಖೆಗಳೆಂದರೆ‌….ಜಾಗ್ಗರಿ ಪಾರ್ಕ್ -೪೦ ಹಳ್ಲಿಗಳಿಗೆ ಉಪಯೋಗವಾಗುತ್ತಿದ್ದ ಬೆಲ್ಲದಮಾರುಕಟ್ಟೆಯನ್ನು ಮುಧೋಳಕ್ಕೆ ಸ್ತಳಾಂತರ, ರೇಷ್ಮೆ ಇಲಾಖೆ ಸ್ಥಳಾಂತರ, ಮೊರಾರ್ಜಿ ಶಾಲೆಯ ಸ್ತಳಾಂತರ, ಮುಗಳಖೋಡ ಸೆಕ್ಷನ್ ಕೆಇಬಿಯನ್ನು ಮುಧೋಳಕ್ಕೆ …, ಜತ್ತ – ಜಾಂಬೋಟಿ ಹೆದ್ದಾರಿ….ಹೀಗೆ ಅನೇಕ ಅಭಿವೃದ್ಧಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಸ್ವಹಿತಾಸಕ್ತಿಯ ರಾಜಕೀಯದಿಂದಾಗಿ ಮಹಾಲಿಂಗಪೂರ ಅಭಿವೃದ್ಧಿ ಕುಂಠಿತವಾಗಿದೆ. ಜನರಿಗೆ ಅನ್ಯಾಯವಾಗುತ್ತಿದೆ.

ಸರ್ಕಾರ ಕೂಡಲೆ ಇದನ್ನು ಗಂಭೀರವಾಗಿ ಪರಿಗಣಿಸಿ ಮಹಾಲಿಂಗಪೂರ ದ ಭೂಪ್ರದೇಶವನ್ನು ಮರಳಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನಜಾಗೃತಿಯ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಿವಲಿಂಗ ಟಿರಕಿ ಎಚ್ಚರಿಸಿದ್ದಾರೆ.

ಮನವಿಯನ್ನು ಪುರಸಭೆಯ ಮುಖ್ಯಾಧಿಕಾರಿ ಯವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸೋಮಶೇಖರ್ ಮರೇಗುದ್ದಿ, ಭರತ್ ಕದ್ದಿಮನಿ, ರಾಜು ಹಣಗಂಡಿ ಹಾಗೂ ಇತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group