ಮೂಡಲಗಿ: ತಾಲೂಕಿನ ಕಲ್ಲೋಳಿ, ಲಕ್ಷ್ಮೇಶ್ವರ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೀಡೆ ಸರ್ವೇಕ್ಷಣಾ ತಂಡವು ವಿಜ್ಞಾನಿಗಳನ್ನು ಒಳಗೊಂಡಂತೆ ಸಂಚರಿಸಿ ವಿವಿಧ ಬೆಳೆಗಳ ರೋಗಬಾಧೆಯ ವೀಕ್ಷಣೆ ನಡೆಸಿದರು.
ತಂಡದಲ್ಲಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಮ್.ಎಮ್.ನದಾಫ ಮತ್ತು ಜಂಟಿ ಕೃಷಿ ನಿರ್ದೇಶಕರು ಬೆಳಗಾವಿ ಕಾರ್ಯಾಲಯದ ಸಹಾಯಕ ಕೃಷಿ ನಿರ್ದೇಶಕ ಸಿ.ಆಯ್ ಹೂಗಾರ ಹಾಗೂ ತುಕ್ಕಾನಟ್ಟಿ ಕೆ.ವಿ.ಕೆಯ ವಿಜ್ಞಾನಿ ಡಾ|| ಧನಂಜಯ ಚೌಗಲಾ ಅವರು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ವಿಕ್ಷೀಸಿದರು.
ಪ್ರಮುಖವಾಗಿ ಕಬ್ಬು ಬೆಳೆಗೆ ಭಾದಿಸುತ್ತಿರುವ ಗೊಣ್ಣೆಹುಳು ನಿರ್ವಹಣೆಗೆ ಸಮಗ್ರ ನಿರ್ವಹಣೆಗೆ ಪದ್ಧತಿಗಳನ್ನು ಅಳವಡಿಸಲು ರೈತರಿಗೆ ಸಲಹೆ ನೀಡಿದ್ದಾರೆ. ಮೆಟರೈಸಿಯಂ ೫-೧೦ ಕೆಜಿ ೫೦೦ ಕೆಜಿ ಸೆಗಣಿ ಗೊಬ್ಬರದಲ್ಲಿ ಬೆರೆಸಿ ಹಾಕುವುದು ಫೆಬ್ರುವರಿ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಲೈಟ್ ಟ್ರ‍್ಯಾಪ್ ಮೂಲಕ ಗೊಣ್ಣೆ ಹುಳುವಿನ ತಾಯಿ ಕೀಟವನ್ನು ನಾಶಪಡಿಸುವುದು ಹಾಗೂ ಪಿಪ್ರೋನಿಲ್ ಹರಳು ೫-೬ ಕೆಜಿ ಪ್ರತೀ ಎಕರೆಗೆ ಹಾಕುವುದು ಕೊನೆಗೆ ಕ್ಲೋರೋಫೈರಿಪಾಸ್ ೧೦ ಮಿಲಿ ಪ್ರತಿ ಲೀಟರಿಗೆ ಬೆರೆಸಿ ಸಿಂಪರಿಸುವುದು ಹೀಗೆ ಮಾಡಿ ಗೊಣ್ಣೆ ಹುಳು ನಿರ್ವಹಿಸಲು ಸೂಚಿಸಿದರು.
ಸೋಯಾಬಿನ್ ಬೆಳೆಯಲ್ಲಿ ಕಾಯಿ ಹಂತದಲ್ಲಿದ್ದು ನೀರಿನಲ್ಲಿ ಕರಗುವ ೧೩: ೦ :೪೫ ರಸಗೊಬ್ಬರವನ್ನು ೧೦೦ ಗ್ರಾಂ ಪ್ರತಿ ಪಂಪಿಗೆ ಹಾಕಿ ಸಿಂಪಡಿಸಲು ಸೂಚಿಸಿದರು ಮತ್ತು ರೋಗಗಳಾದ ಕುಂಕುಮರೋಗ ನಿರ್ವಹಿಸಲು ೧೬ ಮಿಲಿ ಪ್ರತಿ ಪಂಪಿಗೆ ಹಾಕಿ ಸಿಂಪರಿಸಲು ಸೂಚಿಸಿದರು.
ಈ ಸಮಯದಲ್ಲಿ ಕೃಷಿ ಸಂಜೀವಿನಿಯ ಸಿಬ್ಬಂದಿಗಳು ಮತ್ತಿತರರು ಇದ್ದರು