ಸಿಂದಗಿ- ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಅತಿ ಮುಖ್ಯವಾಗಿದೆ ಅದಕ್ಕೆ ನಮ್ಮ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯಂತ ಸೂಕ್ತ. ಆ ಹಿನ್ನಲೆಯಲ್ಲಿ ಸಿಂದಗಿಯ ಯೋಗೋತ್ಸವ ಸಮಿತಿ ಅವರು ಪಟ್ಟಣದ ಎಚ್.ಜಿ.ಹೈಸ್ಕೂಲ ಮೈದಾನದಲ್ಲಿ ಅಗಷ್ಟ ೧೬ ರಿಂದ ಸಪ್ಟಂಬರ್ ೫ ರ ವರೆಗೆ ಸುಮಾರು ೨೧ ದಿನಗಳ ಕಾಲ ಉಚಿತ ಯೋಗ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಏರ್ಪಡಿಸಿದ್ದಾರೆ ಕಾರಣ ಸಿಂದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಅದರಲ್ಲಿ ಯುವಜನಾಂಗ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಿಂದಗಿ ಯೋಗೋತ್ಸವ ಸಮಿತಿ ಸದಸ್ಯ ಅಶೋಕ ಅಲ್ಲಾಪೂರ ಕರೆ ನೀಡಿದರು.
ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ಕಾರ್ಯಾಲಯದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಭ್ಯಾಸ ಮಾಡಿದ ಶ್ರೀ ನಿರಂಜನ ಶ್ರೀಗಳಿಂದ ಈ ಕಾರ್ಯಕ್ರಮ ಜರುಗುವುದು. ಪ್ರತಿ ದಿನ ಬೆಳಗ್ಗೆ ೫.೩೦ ಗಂಟೆಯಿಂದ ೬.೩೦ ಗಂಟೆಯ ವರೆಗೆ ಯೋಗ ಶಿಬಿರ ಮತ್ತು ಪ್ರತಿ ದಿನ ಸಂಜೆ ೭.೦೦ ಗಂಟೆಯಿಂದ ೮.೦೦ ಯ ವರೆಗೆ ಆಧ್ಯಾತ್ಮಿಕ ಪ್ರವಚನ, ಭಜನೆ ನಡೆಯುವದು. ಯೋಗ ಶಿಬಿರಕ್ಕೆ ಬರುವ ಜನತೆಗೆ ನೆಲಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ದ ನೀರು, ಉತ್ತಮ ಬೆಳಕಿನ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ, ಉತ್ತಮ ಧ್ವನಿವರ್ಧಕ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳ ಕಾರ್ಯ ಭರದಿಂದ ಸಾಗಿವೆ. ಅಂದು ಬೆಳಗ್ಗೆ ಸಿಂದಗಿಯ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಯೋಗಗುರು ಶ್ರೀನಿರಂಜನ ಶ್ರೀಗಳ ಸಮ್ಮುಖದಲ್ಲಿ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯೋಗ ಶಿಬಿರ ಉದ್ಘಾಟನೆ ನೆರವೇರುವುದು. ಅಂದು ಸಂಜೆ ೭.೦೦ ಗಂಟೆಗೆ ಸ್ಥಳೀಯ ಊರಿನಹಿರಿಯ ಮಠದ ಶ್ರೀ ಶಿವಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಹಾಗೂ ಭೀಮಾಶಂಕರ ಮಠದ ಶ್ರೀ ದತ್ತ ಯೋಗೀಶ ಶ್ರೀಗಳು, ರಾಂಪೂರ ಆರೂಢ ಮಠದ ಶ್ರೀ ನಿತ್ಯಾಂದ ಮಹಾರಾಜರು, ಆದಿಶೇಷ ಸಂಸ್ಥಾನಮಠದ ಶ್ರೀ ನಾಗರತ್ನ ರಾಜಯೋಗಿ ವೀರರಾಜೇಂದ್ರ ಶ್ರೀಗಳು, ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಶ್ರೀಗಳ ಸಮ್ಮುಖದಲ್ಲಿ ಪ್ರವಚನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಸಿಂದಗಿ ಮತ್ತು ಸುತ್ತಮುತ್ತಲಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಯೋಗೋತ್ಸವ ಸಮಿತಿಯವರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯೋಗೋತ್ಸವ ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಅರವಿಂದ ಮನಗೂಳಿ, ಬಸವರಾಜ ಕಕ್ಕಳಮೇಲಿ, ಸುರೇಶ ಪೂಜಾರಿ, ಎಂ.ಎಂ.ಹಂಗರಗಿ, ಶ್ರೀಶೈಲಗೌಡ ಮಾಗಣಗೇರಿ, ಡಾ.ಮಹಾಂತೇಶ ಹಿರೇಮಠ, ಶಿವಕುಮಾರ ಶಿವಶಿಂಪೀಗೇರ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಬಸವರಾಜ ತಾಳಿಕೋಟಿ, ಡಾ. ಅಂಬರೀಶ ಬಿರಾದಾರ, ಸಂಗು ಬಿರಾದಾರ, ಎಂ.ಎ.ಖತೀಬ, ಆನಂದ ಶಾಬಾದಿ, ಭೀಮನಗೌಡ ಬಿರಾದಾರ, ಮುತ್ತು ಪಟ್ಟಣಶೆಟ್ಟಿ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಪ್ರತಿಭಾ ಚಳ್ಳಗಿ, ರಾಜು ನರಗೋದಿ, ಸಿದ್ದಲಿಂಗ ಕಿಣಗಿ, ಸುಭಾಸ ಪಾಟೀಲ ಇದ್ದರು.