spot_img
spot_img

International Brother’s Day: ಸಹೋದರರ ದಿನ

Must Read

- Advertisement -

ಇಂದು ಬ್ರದರ್ಸ್ ಡೇ, ಅಂದರೆ ಸಹೋದರರ ದಿನ. ಸಹೋದರನ ಪ್ರೀತಿ, ತ್ಯಾಗ, ಪರಿಶ್ರಮವನ್ನು ಗೌರವಿಸುವುದೇ ಈ ಬ್ರದರ್ಸ್ ಡೇ. ತನ್ನ ಕುಟುಂಬದ ಮೇಲಿರುವ ಪ್ರೀತಿಯನ್ನು ಸದ್ದಿಲ್ಲದೇ ತೋರುವ ತಂಗಿಗೆ ಕಾವಲಾಗಿ, ಅಕ್ಕನಿಗೆ ಹೆಗಲಾಗಿ ಇರುವವನೇ ಈ ಸಹೋದರ. ಇಂತಹ ಸಹೋದರನಿಗೂ ಒಂದು ದಿನವಿದೆ. ಹಾಗಾದರೆ ಬನ್ನಿ ಇದರ ಹಿನ್ನಲೆಯೇನು ?

ಈ ಆಚರಣೆಯ ಮಹತ್ವವೇನು ಎಂಬುದನ್ನು ನೋಡೋಣ.

ಅಮೆರಿಕಾ ಸೇರಿದಂತೆ ಜಗತ್ತಿನ ನಾನಾ ಬಾಗಗಳಲ್ಲಿ ಇದನ್ನು ಆಚರಣೆ ಮಾಡಲಾಗುತ್ತದೆ. ತಂದೆ-ತಾಯಿಗೆ ಗೌರವ ಸಲ್ಲಿಸಲು ಫಾದರ್ಸ್ ಡೇ, ಮದರ್ಸ್ ಡೇ ಇರುವಂತೆ, ಇದು ಸಹೋದರರಿಗೆ ಗೌರವ ಸಲ್ಲಿಸಲು ಮೀಸಲಿರುವ ದಿನವಾಗಿದೆ. ಪ್ರತಿವರ್ಷ ಮೇ 24 ರಂದು ಆಚರಣೆ ಮಾಡುವ ಈ ದಿನದಂದು ಸಹೋದರರಿಗೆ ವಿಶೇಷ ಸ್ಥಾನಮಾನ.

- Advertisement -

ರಾಷ್ಟ್ರೀಯ ಸಹೋದರರ ದಿನದ ಇತಿಹಾಸ:

2005 ರಿಂದ, ಪ್ರತಿವರ್ಷ ಮೇ 24 ರಂದು ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಲಬಾಮಾ ಮೂಲದ ಸೆರಾಮಿಕ್ ಕಲಾವಿದ, ಶಿಲ್ಪಿ ಮತ್ತು ಲೇಖಕ ಸಿ. ಡೇನಿಯಲ್ ರೋಡ್ಸ್ ಅವರು ವಿಶೇಷ ಸಂದರ್ಭ ಮತ್ತು ಅದರ ನಡಾವಳಿಗಳನ್ನು ಮೊದಲು ಆಯೋಜಿಸಿದರು. ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುವ ನ್ಯಾಷನಲ್ ಸಿಬ್ಲಿಂಗ್ಸ್ ಡೇ ಹಾಗೂ ಬ್ರದರ್ಸ್ ಡೇ ಎರಡೂ ವಿಭಿನ್ನ.

ರಾಷ್ಟ್ರೀಯ ಸಹೋದರರ ದಿನಾಚರಣೆಯನ್ನು ಹೆಚ್ಚಾಗಿ ಅಮೆರಿಕಾದಲ್ಲಿ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತದ ಅನೇಕ ದೇಶಗಳು ಈ ದಿನವನ್ನು ಆಚರಿಸುತ್ತಿವೆ. ಭಾರತ, ರಷ್ಯಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳು ಈ ದಿನವನ್ನು ಮೇ 24 ರಂದು ಆಚರಿಸುತ್ತವೆ.

ಈ ದಿನದ ಮಹತ್ವ ಹೀಗಿದೆ:

ಪುರುಷರಲ್ಲಿ ಸಹೋದರತ್ವದ ಪ್ರಜ್ಞೆ ಅತ್ಯಂತ ಪ್ರಬಲವಾಗಿದೆ. ಇದು ರಕ್ತ ಸಂಬಂಧವಾಗಿರಲಿ ಅಥವಾ ಇಲ್ಲದಿರಲಿ, ಹುಡುಗರು ʼಬ್ರದರ್ʼ ಅನ್ನೋ ಪದವನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅದಕ್ಕೆ ತಕ್ಕಂತೆ ವರ್ತಿಸುತ್ತಾರೆ. ಆದ್ದರಿಂದ ಅಂತಹ ಅಣ್ಣ-ತಮ್ಮನ ಕೊಡುಗೆಯನ್ನು ನೆನಪಿಸಿಕೊಳ್ಳಲು ಹಾಗೂ ಶ್ಲಾಘಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

- Advertisement -

ಆಚರಣೆ ಹೀಗಿರುತ್ತದೆ:

ಸಾಮಾನ್ಯವಾಗಿ, ಈ ದಿನದಂದು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಹೋದರನ ಜೊತೆ ಶುಭಾಶಯ ಹಂಚಿಕೊಳ್ಳುತ್ತಾರೆ. ಜೊತೆಗೆ ತಮ್ಮ ನೆಚ್ಚಿನ ಸಹೋದರನಿಗೆ ಉಡುಗೊರೆ ನೀಡುತ್ತಾರೆ. ಸದ್ಯ ಕೊರೋನಾದಿಂದ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಕಠಿಣ ಪರಿಸ್ಥಿತಿ ಇರುವುದರಿಂದ ನಿಮ್ಮ ಬ್ರದರ್ ಗೆ ಇಷ್ಟವಾದ ತಿನಿಸುಗಳನ್ನು ಮನೆಯಲ್ಲೇ ಮಾಡಿ ಕೊಡಬಹುದು. ಇದು ಅವರಿಗೆ ಸಂತೋಷ ನೀಡುವುದಲ್ಲದೇ ಸ್ಪೆಷಲ್ ಭಾವನೆ ಮೂಡುವಂತೆ ಮಾಡುತ್ತದೆ.
ಎಲ್ಲರಿಗೂ ಸಹೋದರರ ದಿನದ ಶುಭಾಶಯಗಳು.


ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group