spot_img
spot_img

ದರ್ಗಾನೋ ಅನುಭವ ಮಂಟಪವೋ? ಎಲ್ಲರ ಚಿತ್ತವೀಗ ಬೀದರನತ್ತ

Must Read

- Advertisement -

ಬೀದರ – ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪ ಬಗ್ಗೆ ಬಾರಿ ಚರ್ಚೆ ನಡೆಯುತ್ತಿದೆ ಎಂದು ಹೇಳಬಹುದು.ಮೂಲ ಅನುಭವ ಮಂಟದ ಜಾಗದಲ್ಲಿ ದರ್ಗಾ ಇದೆಯಾ..? ಎಂಬ ಕುತೂಹಲಕಾರಿ ಪ್ರಶ್ಬೆ ಎದ್ದಿದ್ದು ಮಸೀದಿ ವರ್ಸಸ್ ಮಂದಿರದ ವಾರ್ ನಡುವೆ ಈಗ ಗಡಿ ಜಿಲ್ಲೆಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯ ಕೂಗು ಕೇಳಿ ಬರುತ್ತಿದೆ… ಅಯೋದ್ಯೆ, ಕಾಶಿ ಮಾದರಿಯಲ್ಲಿ ಮೂಲ ಅನುಭವ ಮಂಟಪದ ಸಂರಕ್ಷಣೆಯಾಗಬೇಕು ಎಂದು ಬಸವ ಭಕ್ತರು ಆಗ್ರಹ ಮಾಡುತ್ತಿದ್ದಾರೆ.

ಈ ಕುರಿತು ಒಂದು ವಿಶೇಷ ವರದಿ:

ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣ ನಿರ್ಮಾಣದ ಮೂಲ ಅನುಭವ ಮಂಟಪದ ಸಂರಕ್ಷಣೆಯ ಕೂಗು ಜೋರಾಗಿದೆ.

- Advertisement -

ಯಾಕೆಂದರೆ ಈ ಅನುಭವ ಮಂಟಪವನ್ನು ಮುಸ್ಲಿಮ್ ದಾಳಿಕೋರರು ಅದನ್ನು ಭಾಗಶಃ ನಾಶಪಡಿಸಿ ಅಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಅನುಭವ ಮಂಟಪದ ಜಾಗ ಬೇರೆಯಾಗಿದ್ದು ಮೂಲಕ ಅನುಭವ ಮಂಟಪದ ಜಾಗದಲ್ಲಿ ದರ್ಗಾ ಅಥವಾ ಬಂಗ್ಲಾ ಹಾಗೂ ನವಾಬರ ಸಮಾದಿಗಳು ಇವೆ ಎಂದು ಹಿಂದೂಗಳು ಆರೋಪಿಸುತ್ತಿದ್ದಾರೆ.

ಹೌದು, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪೀರ್ ಪಾಶಾ ದರ್ಗಾ ಮೂಲ ಅನುಭವ ಮಂಟಪವಾಗಿದ್ದು ಇದರ ಸಂರಕ್ಷಣೆಯಾಗಬೇಕು ಎಂಬ ಕೂಗು ಈಗ ಜೋರಾಗುತ್ತಿದೆ… ಮೂರು, ನಾಲ್ಕು ವರ್ಷಗಳ ಹಿಂದೇ ಪೀರ್ ಪಾಶಾ ದರ್ಗಾದಲ್ಲಿ ಹಿಂದೂಗಳು ತೆಗೆದಿರುವ ವಿಡಿಯೋಗಳಲ್ಲಿ ಅನುಭವ ಮಂಟಪದ ಕುರುಹುಗಳು ಪತ್ತೆಯಾಗಿವೆ.

- Advertisement -

ಹಿಂದೂ ದೇವರ ಚಿತ್ರಗಳು, ಹಿಂದೂ ಶೈಲಿಯ ಕಲ್ಯಾಣಿ ಹಾಗೂ ಹಿಂದೂ ಶೈಲಿಯ ದೇವರ ಕೆತ್ತನೆಗಳು ಕಲ್ಲಿನಲ್ಲಿ ಮೂಡಿ ಬಂದಿದೆ… ಬಸವಣ್ಣ ಸೇರಿದಂತೆ ಅಂದಿನ ಶರಣ – ಶರಣೆಯರು ಅನುಭವ ಮಂಟದಲ್ಲಿ ಚರ್ಚೆ ಮಾಡಿ ಸಾಮಾಜಿಕ ನ್ಯಾಯಕ್ಕೆ ಕಾರಣರಾಗುತ್ತಿದ್ರು. 12ನೇಯ ಶತಮಾನದ ಬಳಿಕ ನಿಜಾಮರ ಆಳ್ವಿಕೆಯಿಂದಾಗಿ ಸಂಪೂರ್ಣ ಅನುಭವ ಮಂಟಪವನ್ನು ನವಾಬರು ವಶಕ್ಕೆ ಪಡೆದು ಅನುಭವ ಮಂಟಪವನ್ನು ಸಮಾದಿಯ ಸ್ಥಳ ಹಾಗೂ ಫೀರ್ ಪಾಶಾ ದರ್ಗಾವಾಗಿ ಬಲಾಯಿಸಿದರು ಎಂದು ಹೇಳಲಾಗುತ್ತಿದೆ.

ಫೀರ್ ಪಾಶಾ ದರ್ಗಾ ಅಥವಾ ಸಮಾಧಿ ಎಂದು ಹೇಳುವ ಸ್ಥಳ ಹಿಂದೂ ಸಂಸ್ಕೃತಿಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ಹಿಂದೂ ವಿಗ್ರಹಗಳು ಇದ್ದು ಇದು ಅನುಭವ ಮಂಟಪದ ಜಾಗವಾಗಿದೆ. ಇದನ್ನ ಕೇಂದ್ರ ಹಾಗೂ ರಾಜ್ಯ ಸಕರಕಾರ ವಶಕ್ಕೆ ಪಡೆದು 12ನೇಯ ಶತಮಾನದ ಅನುಭವ ಮಂಟಪದ ಗತವೈಭವನ್ನು ಮತ್ತೆ ಮರಕಳಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ ಬಸವ ಭಕ್ತರು.

ಬೈಟ್ 01: ರಾಮಕೃಷ್ಣ ಸವಾಳೆ ( ವಿಶ್ವಹಿಂದು ಪರಿಷತ್ತ ಜಿಲ್ಲಾ ಅಧ್ಯಕ್ಷ )

ವಾಓ: 12ನೇಯ ಶತಮಾನದಲ್ಲಿ ಚಾಲುಕ್ಯರ ಆಳ್ವಿಕೆಯಲ್ಲಿ ಮಂತ್ರಿಯಾಗಿದ್ದ ಅಣ್ಣ ಬಸವಣ್ಣ 4 ಎಕರೆ ಭೂಮಿಯಲ್ಲಿ ಅನುಭವ ಮಂಟಪವನ್ನು ನಿರ್ಮಾಣ ಮಾಡಿದ್ದರು… ಈ ಸಮಯದಲ್ಲಿ ಕಲ್ಯಾಣದ ಚಾಲುಕ್ಯರು ಹತ್ತಾರು ಹಿಂದೂ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದು ಅವುಗಳನ್ನು ನಿಜಾಂರ ಕಾಲದಲ್ಲಿ ಮಸೀದಿಗಳನ್ನಾಗಿ ಬದಲಾಯಿಸಿಲಾಗಿದೆ ಎಂದು ಆರೋಪಿಸಲಾಗುತ್ತಿದೆ… ಜ್ಞಾನವ್ಯಾಪಿ ಸೇರಿದಂತೆ ದೇಶದಲ್ಲಿ ಇಂದು ಮಸೀದಿ – ಮಂದಿರದ ಕಿಚ್ಚು ಜೋರಾಗಿದ್ದು ಈಗ ಕಲ್ಯಾಣ ನಾಡು ಕೂಡ ಇದಕ್ಕೆ ಸಾಕ್ಷಿಯಾಗುವ ಕಾಲ ಸನಿಹವಾಗಿದೆ… ಸದ್ಯ ಇರುವ ಅನುಭವ ಮಂಟಪವನ್ನು ಲಿಂಗೈಕ್ಯ ಡಾ.ಚನ್ನಬಸವ ಪಟ್ಟದೇವರು ಕಷ್ಟ ಪಟ್ಟು ನಿರ್ಮಾಣ ಮಾಡಿದ ನೂತನ ಅನುಭವ ಮಂಟಪವಾಗಿದೆ… ಹೀಗಾಗೀ ಈಗ ಬಸವಣ್ಣನವರು ಸೇರಿದಂತೆ ಶರಣ – ಶರಣೀಯರು ನಿರ್ಮಾಣ ಮಾಡಿದ ಮೂಲ ಅನುಭವ ಮಂಟಪದ ಪತ್ತೆಗೆ ಒತ್ತಾಯ ಹೆಚ್ಚಾಗಿದೆ… ಇಗಾಗೀ ಮುಂದಿನ ತಿಂಗಳು 12 ರಂದು “ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ” ಎಂಬ ಬಹಿರಂಗ ಸಮಾವೇಶವನ್ನು ಮಾಡಲು ನಿರ್ಧಾರ ಮಾಡಿದ್ದಾರೆ… ಸದ್ಯ ಮೂಲ ಅನುಭವ ಮಂಟಪದ ಕೂಗೂ ಜೋರಾಗಿ ಕೇಳಿ ಬರುತ್ತಿದ್ದು ಬಸವ ಭಕ್ತರು ಹಾಗೂ ಹಿಂದೂ ಪರ ಸಂಘಟನೆಗಳು ಮೂಲ ಅನುಭವ ಮಂಟಪಕ್ಕಾಗಿ ಮುಂದೆ ಹೋರಾಟದ ಹಾದಿ ಹಿಡಿದರೂ ಆಶ್ಚರ್ಯವಿಲ್ಲ.

ಈ ಬಗ್ಗೆ ಮಾಹಿತಿ ಪಡೆಯೋಣ ಎಂದು ಕಚೇರಿಗೆ ಹೋದ್ರೆ ಡಿಸಿ ಸಾಹೇಬ್ರು ಈ ಬಗ್ಗೆ ನೋ ಕಮೆಂಟ್ ಎಂದು ನುಸುಳಿಕೊಂಡು ಬಿಟ್ಟರು. ಇನ್ನು ಈ ಬಗ್ಗೆ ಉಸ್ತುವಾರಿ ಸಚಿವರನ್ನು ಕೇಳಿದ್ರೆ ಬೀದರ್ ಭಾವೈಕ್ಯತೆಯ ನಾಡಾಗಿದ್ದು ಹಿಂದೂ – ಮುಸ್ಲಿಂ ಎನ್ನುವ ಭಾವನೆ ಇಲ್ಲದೆ ಪರುಷ ಕಟ್ಟೆಗಾಗಿ ತಮ್ಮ 52 ಮನೆಗಳನ್ನು ಮುಸ್ಲಿಂ ಬಾಂಧವರು ಬಿಟ್ಟು ಕೊಟ್ಟಿದ್ದಾರೆ… ಮೂಲ ಅನುಭವ ಮಂಟಪನಾ ಇಲ್ಲಾ ಫೀರ್ ಪಾಶಾ ದರ್ಗಾನಾ ಎಂದು ನಿಖರವಾದ ಮಾಹಿತಿ ಪಡೆದು ನಾನು ಸರಿಯಾದ ಮಾಹಿತಿ ಕೊಡುತ್ತೇನೆ ಎಂದು ಜಾರಿಕೊಂಡು ಬಿಟ್ಟರು.

ನೂರಾರು ವರ್ಷಗಳಿಂದ ಬಸವಣ್ಣನವರ ಮೂಲ ಅನುಭವ ಮಂಟಪ ಎಲ್ಲಿ ಎಂಬ ಕೂಗು ಕೇಳಿ ಬರುತ್ತಿದ್ರು ಯಾರೂ ಕೇರ್ ಮಾಡದೇ ಇರುವುದು ಶೋಚನೀಯ ಸಂಗತಿಯಾಗಿತ್ತು… ಈಗ ದರ್ಗಾ ಜಾಗ ಮೂಲ ಅನುಭವ ಮಂಟಪ ವಿದೆ ಎಂದು ಬಸವ ಭಕ್ತರು ವಿಡಿಯೋ ಸಮೇತ ಆರೋಪ ಮಾಡುತ್ತಿದ್ದು ಸತ್ಯ ಶೋಧ ಕಾರ್ಯ ನಡೆಯಬೇಕಿದೆ… ಈಗಲಾದ್ರು ವಿಶ್ವಗುರು ಬಸವಣ್ಣನವರು ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಮೂಲ ಅನುಭವ ಮಂಟಪ ಶೋಧವಾಗುತ್ತಾ ಎಂದು ಕಾದು ನೋಡಬೇಕಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group