spot_img
spot_img

ಮೂಡಲಗಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಣೆ

Must Read

spot_img
- Advertisement -

ಮೂಡಲಗಿ: ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ರಚಿತವಾಗಿರುವ ಭಾರತದ ಸಂವಿಧಾನ, ದೇಶದ ಪ್ರತಿಯೊಬ್ಬ ನಾಗರಿಕನಿಗೆ ಪವಿತ್ರ ಗ್ರಂಥವಿದ್ದಂತೆ ಎಂದು ತಹಶೀಲ್ದಾರ್ ಶಿವಾನಂದ ಬಬಲಿ ಅಭಿಪ್ರಾಯಪಟ್ಟರು.

ಶುಕ್ರವಾರದಂದು ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ ಮೂಡಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರಿಂದ ರಚಿತ ಭಾರತದ ಸಂವಿಧಾನ ಅಡಿಯಲ್ಲಿ ಪ್ರತಿಯೊಬ್ಬರಿಗೂ ಜಾತಿ, ಭೇಧವಿಲ್ಲದೆ ಸಮಾನ ಹಕ್ಕು ದೊರೆತಂತಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮಣ್ಣಿಕೇರಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಸಂವಿಧಾನದ ಮಹತ್ವವನ್ನು, ಪ್ರತಿಯೊಬ್ಬ ನಾಗರಿಕನೂ ಅರ್ಥ ಮಾಡಿಕೊಂಡು ಬಡವ, ಶ್ರೀಮಂತ, ಜಾತಿ, ಬೇಧವಿಲ್ಲದೆ ತಮ್ಮ ಹಕ್ಕು ಗಳನ್ನು ಪಡೆದುಕೊಂಡು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆದು ದೇಶವನ್ನು ಪ್ರಗತಿ ಪಥದತ್ತ ಸಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ತಿಳಿಸಿದರು.     

- Advertisement -

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಶಿಕ್ಷಕರಾದ ಗುದ್ದಲಿ ಹಾಗೂ ಅನೇಕ ದಲಿತ ಮುಖಂಡರು ಮಾತನಾಡಿದರು, ಭಾರತ ಸಂವಿಧಾನದ ಪೀಠಿಕೆ ಜಾಗತಿಕ ವಾಚನ ಮಾಡಲಾಯಿತು.

ಈ ಸಂಧರ್ಭದಲ್ಲಿ ತಾಲೂಕಾ ಪಂಚಾಯತ್ ಅಧಿಕಾರಿ ಎಫ್.ಜಿ.ಚಿಣ್ಣನವರ್, ಪರಿಶಿಷ್ಟ ಪಂಗಡ ಕಲ್ಯಾಣ ಅಧಿಕಾರಿ ಎಸ್.ಕೆ.ಆಸಂಗಿ, ಸಮಾಜ ಕಲ್ಯಾಣ ಅಧಿಕಾರಿ ಆರ್.ವಿ.ತಳವಾರ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಸೇರಿದಂತೆ ಮುಖಂಡರಾದ ರಮೇಶ್ ಸಣ್ಣಕ್ಕಿ, ಸತ್ಯಜಿತ್ ಕರಮಡಿ, ಎಂ.ಅಜ್ಜನಕಟ್ಟಿ, ಸಾಬು ಸಣ್ಣಕ್ಕಿ, ಅಶೋಕ ಸಿದ್ಲಿಂಗಪ್ಪಗೋಳ ಹಾಗೂ ಕಚೇರಿಯ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡ ವಸತಿ ಗೃಹದ ವಾರ್ಡನ್ ವಾಯ್.ಬಿ.ಭಜಂತ್ರಿ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group