spot_img
spot_img

ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ : ಕಿರುಚಿತ್ರಗಳ ಆಹ್ವಾನ

Must Read

- Advertisement -

ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(ರಿ) ವತಿಯಿಂದ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ-೨೦೨೨ ಆಯೋಜಿಸಲಾಗಿದ್ದು ಸ್ಪರ್ಧೆಗಳಿಗೆ ಕಿರುಚಿತ್ರಗಳನ್ನು ಆಹ್ವಾನಿಸಲಾಗಿದೆ.

ಡಿಸೆಂಬರ್ ೧೫,೧೬,೧೭ ರಂದು ಮೂರು ದಿನಗಳ ಕಾಲ ಹುಬ್ಬಳ್ಳಿ-ಧಾರವಾಡದಲ್ಲಿ ಪ್ರಪ್ರಥಮವಾಗಿ ನಡೆಯಲಿರುವ ಕಿರುಚಿತ್ರೋತ್ಸವಕ್ಕೆ ಕಿರುಚಿತ್ರಗಳು, ಟೆಲಿಫಿಲ್ಮ್, ಡಾಕ್ಯುಮೆಂಟರಿ, ಮ್ಯೂಜಿಕ್ ವಿಡಿಯೋಗಳನ್ನು ಆಹ್ವಾನಿಸಲಾಗಿದೆ. ಬೆಸ್ಟ್ ಆ್ಯಕ್ಟರ್ಸ್(ನಾಯಕ,ನಾಯಕಿ), ಬೆಸ್ಟ್ ಶಾರ್ಟ್ ಫಿಲ್ಮ್, ಬೆಸ್ಟ್ ಡಾಕ್ಯೂಮೆಂಟರಿ, ಬೆಸ್ಟ್ ಟೆಲಿಫಿಲ್ಮ್, ಬೆಸ್ಟ್ ಮ್ಯೂಜಿಕ್ ವಿಡಿಯೋ, ಬೆಸ್ಟ್ ಡೈರಕ್ಷನ್, ಬೆಸ್ಟ್ ಸ್ಕ್ರೀನ್ ‌ಪ್ಲೇ, ಬೆಸ್ಟ್ ಸಿನಿಟೋಗ್ರಫಿ, ಬೆಸ್ಟ್ ವಿಷ್ಯೂವಲ್ ಎಫೆಕ್ಟ್ಸ್, ಬೆಸ್ಟ್ ಎಡಿಟಿಂಗ್, ಬೆಸ್ಟ್ ಲಿರಿಕ್ಸ್ ರೈಟರ್, ಬೆಸ್ಟ್ ಮ್ಯೂಜಿಕ್ ಕಾಂಪೋಸರ್, ಬೆಸ್ಟ್ ಸಿಂಗರ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರವೇಶ ಫೀ ಇದ್ದು, ಪ್ರತಿ ವಿಭಾಗದಲ್ಲಿ ಪಾಲ್ಗೊಳ್ಳುವ ಚಿತ್ರಗಳಿಗೆ ವೇಳೆಯನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ವಿವರಗಳನ್ನು ಮೊ- ೯೪೮೨೬೭೯೩೮೨, ೭೮೯೯೦೫೨೨೮೫, ೯೫೩೮೦೧೦೬೨೭, ೯೮೪೫೧೨೮೬೫೩, ೭೭೯೫೧೩೮೧೬೫ ಇಲ್ಲಿಗೆ ಸಂಪರ್ಕಿಸಿ ಪಡೆಯಬಹುದಾಗಿದೆ. ಸ್ಪರ್ಧೆಗೆ ಕಳುಹಿಸಲು ನವೆಂಬರ್ ೩೦ ಕೊನೆಯ ದಿನವಾಗಿದೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಶಿವಕುಮಾರಸ್ವಾಮಿಗಳು, ರಾಬರ್ಟ ನವರಾಜ್, ಮಂಜುನಾಥ ಹಗೇದಾರ, ರಾಹುಲ್ ದತ್ತಪ್ರಸಾದ, ಓಂ ಕಿರಣ ಕೊಂಗೆ, ಪ್ರಭು ಹಂಚಿನಾಳ, ವೆಂಕಟೇಶ್ ಎಂ, ಶ್ರೀಮತಿ ಪ್ರವೀಣಾ ಕುಲಕರ್ಣಿ, ಸಯ್ಯದ ಎಂ.ಎ, ರುದ್ರೇಶ್ ಹವಳದ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಗಿ ಮುಂತಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ಕಿರುಚಿತ್ರೋತ್ಸವಕ್ಕೆ ಆಗಬೇಕಾದ ಕಾರ್ಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಿದರು.


- Advertisement -

ವರದಿ:
ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group