ಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಣೆ
ಹೆಣ್ಣು ಸಂಸಾರದ ಕಣ್ಣು. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ “ಅಂತಾರಾಷ್ಟ್ರೀಯ ಮಹಿಳೆಯರ ದಿನ” ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ “ಅಂತಾರಾಷ್ಟ್ರೀಯ ಮಹಿಳೆಯರ ದಿನ”ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.
ಸಮಾಜದ ಕೇಂದ್ರ ಕುಟುಂಬ. ಇಂತಹ ಕುಟುಂಬದ ಕೇಂದ್ರ ಹೆಣ್ಣು. ಅತ್ತೆ ಮಾವ. ತಂದೆ ತಾಯಿ . ಅಣ್ಣ ಅತ್ತೆ.ಮೈದುನ ನಾದಿನಿ. ನೆರೆ ಹೊರೆ. ಗೆಳೆಯ ಗೆಳತಿಯರು. ತನ್ನ ಬದುಕಿನ ಸುತ್ತಲೂ ಎಲ್ಲವನ್ನೂ ಹೆಣ್ಣು ಕಾಣುತ್ತಲೇ ಸಂತಸದ ಬದುಕು ಸಾಗಿಸುವಳು ಹೆಣ್ಣು. ಕುಟುಂಬ ಸಮಾಜದೊಂದಿಗೆ ಅತ್ಯಂತ ಸಹಜವಾಗಿ ಜೀವಿಸುವವಳು ಹೆಣ್ಣು. 10 ಜನ ಪುರುಷರು ಮಾಡುವ ಕೆಲಸವನ್ನು ಒಬ್ಬ ಸ್ತ್ರೀ ಅಚ್ಚುಕಟ್ಟಾಗಿ ಮಾಡಬಲ್ಲಳು, ಇದು ಸತ್ಯ ಎಂದು ಕೇಳಿದಾಗ.
ಸ್ತ್ರೀ ಶಕ್ತಿಯ ರೂಪ, ಹೆಣ್ಣೆ ಹಾಗೆ. ಹೆಣ್ಣು ಇದ್ದಲ್ಲಿ ಸಂಸ್ಕೃತಿ, ಸಂಭ್ರಮ, ಉಲ್ಲಾಸ, ಉತ್ಸಾಹ ಇರುತ್ತದೆ.ಹೆಣ್ಣಿಲ್ಲದ ಕಾರ್ಯಕ್ರಮ ಅದು ಕಾರ್ಯಕ್ರಮವೇ ಅಲ್ಲ, ಹೆಣ್ಣಿನಿಂದ ಮಾತ್ರ ಶೋಭೆ ಬರುವುದು.ನಾವು ನಾವಾಗಿಯೇ ಅರಳುವುದು ಪ್ರಕೃತಿಯ ನಿಯಮ.ನಮ್ಮನ್ನು ಬದುಕಲು ಬಿಡಿ. ಅದ್ಭುತ ಸಮಾಜದ ತಳಹದಿ ಹಾಗೂ ಆರೋಗ್ಯಕರ ಸಮಾಜ ಕೇವಲ ಹೆಣ್ಣಿನ ಪ್ರೀತಿ,ತಾಳ್ಮೆ, ಸಹನೆ, ಶ್ರಮದಿಂದ ಮಾತ್ರ ಸಾಧ್ಯ. ನಾನೇ ಎಲ್ಲವನ್ನು ಮಾಡಬೇಕೇ? ಎನ್ನುವ ಭಾವನೆ ಹೆಣ್ಣಿಗೆ ಇರೋದಿಲ್ಲ.ಇದು ನನ್ನ ಕರ್ತವ್ಯ ಎನ್ನುವ ಮನೋಭಾವದಿಂದ ಹೆಣ್ಣು ಸಮಾಜ ಮುಖಿ ಕೆಲಸ ಮಾಡುತ್ತಾಳೆ.ಇಲ್ಲಿ ನಮ್ಮ ಆಪ್ತರಾದ ಪ್ರೊ. ಪಿ ಎಸ್ ಆನಂದರಾವ್ ಮಾನಸ ಗಂಗೋತ್ರಿ ಮೈಸೂರ್ ವಿಶ್ವವಿದ್ಯಾಲಯ ಇವರು ನಾರಿ ಕುರಿತು ಅದ್ಭುತ ಸಾಲುಗಳನ್ನು ರಚಿಸಿದ್ದಾರೆ..
ನಾರಿಯೇ.. ಸೃಷ್ಟಿ ಜಗಕೆ ದೃಷ್ಟಿ
ನಾರಿಯೇ ನಿನ್ನ ಮಹಿಮೆ ಅಪಾರ
ಮೂಡಿವೆ ಅಕ್ಷರ- ಎದೆಯಲಿ ಆನಂದದಾಗರ
ನಿನ್ನ ಸೃಷ್ಟಿ- ಅದುವೇ ಜಗಕೆ ದಿವ್ಯದೃಷ್ಟಿ
ನಿನ್ನಲ್ಲಿವೆ ಔದಾರ್ಯ
ನಿನ್ನಿಂದ ಮಾತ್ರವೇ ಎಲ್ಲಾ ಸೌಕರ್ಯ.
ಸೃಷ್ಟಿಯ ಒಲುಮೆ ತ್ಯಾಗದ ಚಿಲುಮೆ
ಒಲುಮೆಯ ದೀಪ ಸಂಸಾರದ ತ್ಯಾಗರೂಪ
ಮನೆಯೊಳಗು ಹೊರಗೂ ನಿನ್ನ ಕಾಯಕ
ನಿನಗಿಲ್ಲ ಸರಿಸಾಟಿಯಾಗದ ಮತ್ತೊಬ್ಬ ನಾಯಕ
ಹೆಣ್ಣೆ ನೀನೆ ಎಲ್ಲ , ನೀನಿಲ್ಲದೇ ಸೃಷ್ಟಿಯಲ್ಲಿ ಏನೇನು ಇಲ್ಲ
ಓ ಜೀವದ ಭಾವದೊಲವೆ
ಈ ಭುವನದೊಳು ನಿನಗೆ ನೀನೇ ಸಾಟಿ
ಮತ್ತಾರು ಇಲ್ಲವೇ ಇಲ್ಲ ಸರಿಸಾಟಿ…
ಹೀಗೆ ಹೆಣ್ಣಿನ ಸೂಕ್ಷ್ಮತೆ ಹಾಗೂ ಹೆಣ್ಣಿನ ಮಹತ್ವ ಕುರಿತು ಬರೆದ ಸಾಲುಗಳು ನಿಜಕ್ಕೂ ಹೆಣ್ಣಿಗೆ ಕೊಡುವ ಗೌರವ ಸನ್ಮಾನ ನೋಡಿ ಖುಷಿ ಆಯಿತು.
ಡಾ. ಬಾಬಾ ಸಾಹೇಬ ಅಂಬೇಡ್ಕರರು ಕೇಂದ್ರ ಕಾನೂನು ಮಂತ್ರಿ ಮತ್ತು ಕಾರ್ಮಿಕ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳ ಬಗ್ಗೆ ಪ್ರಸ್ತಾವನೆ ಇಟ್ಟಾಗ , ಇವರ ಕೂಗಿಗೆ ಬೆಂಬಲ ಸಿಗದಿದ್ದಾಗ ತನ್ನ ಹುದ್ದೆಗೆ ರಾಜೀನಾಮೆ ನೀಡಿದ ಬಾಬಾ ಸಾಹೇಬ ಅಂಬೇಡ್ಕರರು ಮುಂದೆ ನಮ್ಮ ಭಾರತೀಯ ಸಂವಿಧಾನದಲ್ಲಿ ಮಹಿಳೆಯರ ಸಮಾನತೆಗೆ ಕಾಯ್ದೆ ಜಾರಿಗೆ ತಂದರು. ಇಂದು ಬಾಬಾ ಸಾಹೇಬ ಅಂಬೇಡ್ಕರರು ಕಲ್ಪಿಸಿ ಕೊಟ್ಟ ಅವಕಾಶದಿಂದ ಮಹಿಳೆಯರು ಎಲ್ಲ ಕ್ಷೇತ್ರ ಹಾಗೂ ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಅಮೇರಿಕಾದ ಸಮಾಜವಾದಿ ಪಕ್ಷವು ನ್ಯೂಯಾರ್ಕ್ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಹಿಳೆಯರಿಗಾಗಿ ಒಂದು ದಿನ ಇರಲಿ ಎಂದು ನಿರ್ಧರಿಸಿ ,ಮೊದಲ ವರ್ಷದ ಮಹಿಳಾ ದಿನಾಚರಣೆಯನ್ನು1917 ಮಾರ್ಚ್ 8 ರಂದು ಮೊದಲ ಬಾರಿಗೆ ಸೋವಿಯತ್ ರಷಿಯಾದ ಪೆಟ್ರೋಗ್ರಾಡ್ ನಲ್ಲಿ ಆಚರಿಸಲಾಯಿತು.
1975 ರಲ್ಲಿ ವಿಶ್ವ ಸಂಸ್ಥೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ಸಮಾವೇಶದಲ್ಲಿ, ವಿಶ್ವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾರ್ಚ್ 8 ರಂದು ಮಾಡಲು ನಿರ್ಧರಿಸಲಾಯಿತು. ಹಾಗೆಯೇ
- 2019 ರಲ್ಲಿ ನಮ್ಮ ದೇಶದಲ್ಲಿ” think equal, build smart ,innovative for change”
- 2020 ರಲ್ಲಿ “I am generation eqality,realizing women’s rights”
- 2001 ನ್ನು ಮಹಿಳಾ ಸಬಲೀಕರಣ ವರ್ಷವನ್ನಾಗಿ ಕೂಡ ಮಾಡಿದೆ.
- 2008 ರಲ್ಲಿ ಅಂತಾರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆಯನ್ನು ವಿಶ್ವಸಂಸ್ಥೆ ಘೋಷಣೆ ಮಾಡಿದೆ.
2012 ಅಕ್ಟೋಬರ್ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಹಾಗೂ ಜನವರಿ 24 ರಂದು ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ಅಧಿಕಾರ ವಹಿಸಿಕೊಂಡ ದಿನದ ನೆನಪಿಗಾಗಿ ಆಚರಿಸುತ್ತೇವೆ.
ಮಹಿಳಾ ಸಬಲೀಕರಣ ಹಾಗೂ ಮಹಿಳೆಯರ ಸುರಕ್ಷತೆಗಾಗಿ ನಮ್ಮ ಸಂವಿಧಾನದಲ್ಲಿ ಅನೇಕ ಕಾಯ್ದೆಗಳನ್ನು ಜಾರಿಗೊಳಿಸಿದೆ
- 1946 ರಲ್ಲಿ ಮಹಿಳೆಯರಿಗೂ ಕೂಡ ಪುರುಷರ ಸಮಾನ ಕನಿಷ್ಠ ವೇತನ ಕಾಯ್ದೆ.
- 1956 ಅನೈತಿಕ ವ್ಯವಹಾರ ನಿಗ್ರಹ ಕಾಯ್ದೆ ಅಡಿ ಹೆಣ್ಣುಮಕ್ಕಳ ಮಾರಾಟ ಅನೈತಿಕ ವ್ಯವಹಾರಗಳ ಮೇಲೆ ನಿರ್ಬಂಧ.
- 1961 ರ ವರದಕ್ಷಿಣೆ ನಿಷೇಧ ಕಾಯ್ದೆ.
- 1976 ರಲ್ಲಿ ಸಮಾನ ವೇತನ ಕಾಯ್ದೆ.
- 1976 ರಲ್ಲಿ ಜೀತ ನಿರ್ಮೂಲನ ಕಾಯ್ದೆ ಅಡಿ ಹೆಣ್ಣುಮಕ್ಕಳ ರಕ್ಷಣೆ.
- 1986 ರಲ್ಲಿ ಬಾಲಾ ಕಾರ್ಮಿಕ ನಿಷೇದ ಕಾಯಿದೆ ಅಡಿ ಬಾಲಕಾರ್ಮಿಕ ಹೆಣ್ಣು ಮಕ್ಕಳ ರಕ್ಷಣೆ.
- 1954 ವಿಶೇಷ ವಿವಾಹ ಕಾಯ್ದೆ ಅಡಿ ಅಂತರ್ಜಾತಿ ವಿವಾಹಕ್ಕೆ ಆವಕಾಶ.
- 2006 ಬಾಲ್ಯ ವಿವಾಹ ನಿಷೇಧ ಕಾಯ್ದೆ.
- 2013 ಕಾರ್ಯನಿರತ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ.
2018 ಸಪ್ಟೆಂಬರ್ ನಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತ್ರಿವಳಿ ತಲಾಕ್ ರದ್ದು ಗೊಳಿಸುವ ಸುಗ್ರೀವಾಜ್ಞೆ. ನಮ್ಮಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಅಭಿವೃದ್ಧಿ ಹಾಗುಸುರಕ್ಷತೆಗಾಗಿ ಅನೇಕ ಕಾರ್ಯಕ್ರಮಗಳನ್ನು ಕೂಡ ಜಾರಿಗೊಳಿಸಿದೆ.
- ಮಾತೃಪೂರ್ಣ
- ಮುಖ್ಯಮಂತ್ರಿ ಮಾತೃ ಶ್ರೀ
- ಮಾತೃವಂದನ
- ಧನಶ್ರೀ– ಹೆಚ್ಐವಿ ಸೋಂಕಿತ ಮಹಿಳೆಯರಿಗಾಗಿ
- ಸುಕನ್ಯಾಸಮೃದ್ಧಿ – ಸಣ್ಣ ಉಳಿತಾಯ
- ಮನಸ್ವಿನಿ yojane- 40-64 ವರ್ಷದ ಅವಿವಾಹಿತ ಮತ್ತು ವಿಚ್ಛೇದಿತ ಮಹಿಳೆಯರ ಭದ್ರತೆಗಾಗಿ
- ಮೈತ್ರಿ ಯೋಜನೆ – ಲೈಂಗಿಕ ಅಲ್ಪ ಸಂಖ್ಯಾತರ ಸಾಮಾಜಿಕ ಭದ್ರತೆಗಾಗಿ
- ಸಮೃದ್ಧಿ ಯೋಜನೆ – ಮಹಿಳಾ ಬೀದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು
- ಸಖಿ ಯೋಜನೆ – ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಯಲ್ಲಿ ರಕ್ಷಣೆ
- ಶಾದಿಭಾಗ್ಯ ಯೋಜನೆ – ಅಲ್ಪಸಂಖ್ಯಾತ ಮಹಿಳೆಯರ ವಿವಾಹಕ್ಕೆ ಧನ ಸಹಾಯ
- ತಾಯಿಭಾಗ್ಯ – ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಡೆಗಟ್ಟಲು
- ಜನನಿ ಸುರಕ್ಷಾ ಯೋಜನೆ – ಆಸ್ಪತ್ರೆಗಳಲ್ಲಿಯೇ ಸುರಕ್ಷಿತ ಹೆರಿಗೆ
- ಮಡಿಲು ಯೋಜನೆ – ಹೆರಿಗೆಯ ನಂತರ ತಾಯಿ ಮತ್ತು ಮಗುವಿನ ಆರೈಕೆಗೆ ಬೇಕಾದ ಪ್ರಮುಖ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ.
ಹೀಗೆ ಹೆಣ್ಣು ಮಕ್ಕಳ ರಕ್ಷಣೆ, ಸುರಕ್ಷತೆಗಾಗಿ,ಹಾಗೂ ರಾಜ್ಯಕೀಯ,ಆರ್ಥಿಕ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಎಲ್ಲ ರಂಗಗಳಲ್ಲಿ ಆವಕಾಶ ಸಿಕ್ಕಿದು ನಾವು ಇದರ ಉಪಯೋಗ ಮಾಡಿಕೊಂಡು ಮಹಿಳಾ ಸಬಲೀಕರಣಕ್ಕೆ ಸದಾ ಸಿದ್ಧರಾಗಿರಬೇಕು. ಹೆಣ್ಣು ಮಕ್ಕಳು ನಮ್ಮತನವನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಭಾರತೀಯ ಸಂಸ್ಕೃತಿ ಕಾಪಾಡಿಕೊಂಡು, ಭಾರತವನ್ನು ವಿಶ್ವದಲ್ಲಿ ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ…
ನಂದಿನಿ ಸನಬಾಲ್, ಕಲಬುರಗಿ