Homeಸುದ್ದಿಗಳುಬೀದರ್ ನಲ್ಲಿ ನಶೆಗೆ ಬಳಸುವ ಟಾನಿಕ್ ಹಾಗೂ ಮಾತ್ರೆ ಜಪ್ತಿ

ಬೀದರ್ ನಲ್ಲಿ ನಶೆಗೆ ಬಳಸುವ ಟಾನಿಕ್ ಹಾಗೂ ಮಾತ್ರೆ ಜಪ್ತಿ

ಬೀದರ – ನಶೆಗಾಗಿ ಹಾಗೂ ಮಾನಸಿಕ ಅಸ್ವಸ್ಥರಿಗಾಗಿ ಬಳಸಲ್ಪಡುವ ಟಾನಿಕ್ ಹಾಗೂ ಮಾತ್ರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಅವರಿಂದ ಮಾತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರಿಂದ 300 ನೈಟ್ರಾವೆಟ್ ನಶೆ ಮಾತ್ರೆಗಳು ಹಾಗೂ ನಶೆಗೆ ಬಳಸುವ 159 ಕೊಡೈನ್ ಟಾನಿಕ್ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ.

ಬೀದರ್ ನಿಂದ ಭಾಲ್ಕಿ ಮೂಲಕ ಮಹಾರಾಷ್ಟ್ರ ಗಡಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಸಿಕ್ಕಿ ಹಾಕಿಕೊಂಡ  ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ಧನ್ನೂರು ಪೊಲೀಸರು.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾದ ಬಳಿ ಈ ಮಾತ್ರೆಗಳನ್ನು ಜಪ್ತಿ ಮಾಡಲಾಗಿದ್ದು ಈ ಕುರಿತು ಧನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group